ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳಾದ ಐರಾ ಮತ್ತು ಯಥರ್ವ್ ಅವರ ಪಾಲಿಗೆ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ `ರಾಮಾಯಣ’ ಸಿನಿಮಾ ಸದಾ ವಿಶೇಷ ನೆನಪಾಗಿ ಉಳಿಯಲಿದೆ. ಏಕೆಂದರೆ, ಈ ಮಹಾಕಾವ್ಯ ಆಧಾರಿತ ಸಿನಿಮಾ ಅವರ ಜೀವನದ ಮೊದಲ ಚಿತ್ರ ವೀಕ್ಷಣೆಯ ಅನುಭವಕ್ಕೆ ಸಾಕ್ಷಿಯಾಗಿದೆ.ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಕ್ಕಳ ಮೊದಲ ಸಿನಿಮಾ ಅನುಭವವೇ ಭಾರತೀಯ ಸಂಸ್ಕöÈತಿ ಮತ್ತು ಪರಂಪರೆಯ ಪ್ರತೀಕವಾದ ರಾಮಾಯಣದ ಮೂಲಕ ಆರಂಭವಾಗಿರುವುದು ವಿಶೇಷ. ಐರಾ ಹಾಗೂ ಅಕ್ಟೋಬರ್ 30ರಂದು ಏಳು ವರ್ಷಕ್ಕೆ ಕಾಲಿಟ್ಟಿರುವ ಯಥರ್ವ್, ಲಾಸ್ ಏಂಜಲೀಸ್‌ನಲ್ಲಿ ನಡೆದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಮೊದಲ ಬಾರಿಗೆ ಸಿನಿಮಾ ವೀಕ್ಷಿಸಿದ್ದಾರೆ.ಆದರೆ, ಈ ವಿಶೇಷ ಕ್ಷಣ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. `ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ ಅವರಿಗೆ ಈ ಸಿನಿಮಾ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ. ಮತ್ತೊಂದೆಡೆ, ಅವರ ಮಕ್ಕಳ ಪಾಲಿಗೆ ಇದು ಮೊದಲ ಸಿನಿಮಾ ವೀಕ್ಷಣೆಯಾಗಿ ಸದಾ ಸ್ಮರಣೀಯವಾಗಿರಲಿದೆ.
ಮಕ್ಕಳ ಹೆಸರುಗಳ ಹಿಂದಿನ ಅರ್ಥವೂ ವಿಶೇಷವಾಗಿದೆ. ಐರಾ ಎಂಬ ಹೆಸರು ಐರಾವತಿಯ ಹೆಸರಿನಿಂದ ಪ್ರೇರಿತವಾಗಿದ್ದು, ಇದು ಲಕ್ಷ್ಮೀ ದೇವಿಯ ಮತ್ತೊಂದು ಹೆಸರಾಗಿದೆ. ಇನ್ನು ಯಥರ್ವ್ ಎಂದರೆ `ಪೂರ್ಣತೆ’ ಎಂಬ ಅರ್ಥವಿದೆ. ಯಥರ್ವ್ ಹೆಸರಿನಲ್ಲಿ ಯಶ್, ರಾಧಿಕಾ ಹಾಗೂ ಐರಾ ಅವರ ಹೆಸರುಗಳ ಅಂಶಗಳನ್ನೂ ಸೇರಿಸಲಾಗಿದೆ ಎಂದು ಈ ಹಿಂದೆ ದಂಪತಿ ತಿಳಿಸಿದ್ದರು.ಹೀಗೆ, ತಲೆಮಾರುಗಳಿಂದ ಭಾರತೀಯರ ಮನಸ್ಸಿನಲ್ಲಿ ನೆಲೆಸಿರುವ ರಾಮಾಯಣ ಮಹಾಕಾವ್ಯ ಇದೀಗ ಯಶ್ ಕುಟುಂಬದ ವೈಯಕ್ತಿಕ ನೆನಪಿನ ಭಾಗವಾಗಿಯೂ ರೂಪುಗೊಂಡಿದೆ. ತಂದೆಯ ಸಿನಿಮಾ ಪಯಣದ ಮಹತ್ವದ ಘಟ್ಟಕ್ಕೆ ಮಕ್ಕಳ ಮೊದಲ ಸಿನಿಮಾ ಅನುಭವವೂ ಜೊತೆಯಾಗಿರುವುದು ಭಾವನಾತ್ಮಕ ಕ್ಷಣವಾಗಿದೆ.
ನಮಿತ್ ಮಲ್ಹೋತ್ರಾ ಅವರ ಪ್ರೆöÊಮ್ ಫೋಕಸ್ ಸಂಸ್ಥೆ ನಿರ್ಮಿಸಿರುವ, ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರಕ್ಕೆ ಯಶ್ ಅವರ ಮಾನ್ಸ÷್ಟರ್ ಮೈಂಡ್ ಕ್ರಿಯೇಷನ್ಸ್ ಸಹ-ನಿರ್ಮಾಣದ ಹೊಣೆ ಹೊತ್ತಿದೆ. ಜೊತೆಗೆ ಕರ್ನಾಟಕದಲ್ಲಿ ವಿತರಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದೆ. ಚಿತ್ರದಲ್ಲಿ ಯಶ್ ರಾವಣನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ವಾರ ತೆರೆಗೆ ಬರಲಿರುವ ಈ ಬಹುನಿರೀಕ್ಷಿತ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.