ಬೆಂಗಳೂರು: ಇಂದಿನ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗದೆ.ಸ್ಟೇಜ್ ವಾರು ದರ ಏರಿಕೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಬಿಎಂಟಿಸಿ ಬಸ್ ಪ್ರಯಾಣ ದರ 6 ರೂಪಾಯಿ ಇದ್ದಿದ್ದನ್ನು 10 ರೂಪಾಯಿಗೆ ಏರಿಕೆ ಮಾಡಲಾಗಿದೆ. ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಗರಿಷ್ಠ 10 ರೂಪಾಯಿ ಹೆಚ್ಚಳ ಮಾಡಲಾಗಿದೆ, ಕೆಎಸ್‌ಆರ್‌ಟಿಸಿಯಲ್ಲಿ ಗರಿಷ್ಠ 9 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.ಮೆಜೆಸ್ಟಿಕ್‌ನಿಂದ ನೆಲಮಂಗಲಕ್ಕೆ 35 ರೂಪಾಯಿ ಇದ್ದ ಪ್ರಯಾಣ ದರವನ್ನು 44 ಕ್ಕೆ ಏರಿಸಲಾಗಿದೆ. ಡೀಸೆಲ್ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ವಾಯುವಜ್ರ ಬಸ್ ಪ್ರಯಾಣದರ 75 ರೂಪಾಯಿ ಇದ್ದದ್ದನ್ನು 90 ರೂಪಾಯಿಗೆ ಏರಿಸಲಾಗಿದೆ. ಅತುಲ್ ತಿವಾರಿ ನೇತೃತ್ವದಲ್ಲಿ ರಚಿಸಲಾಗಿದ್ದ ದರ ಪರಿಷ್ಕರಣೆ ಸಮಿತಿ ನೀಡಿದ್ದ ವರದಿಯನ್ನು ಪರಿಶೀಲಿಸಿ ಈ ಕ್ರಮಜರುಗಿಸಲಾಗಿದೆ. ಅವರ ವರದಿಯಂತೆ ಜಾರಿಗೆ ತಂದಿದ್ದರೆ ಮತ್ತಷ್ಟು ದುಬಾರಿ ಆಗುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.