ಬೆಂಗಳೂರು: ಅಹಿಂದಾ ನಾಯಕರನ್ನು ಒಗ್ಗೂಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಈ ಪ್ರಯತ್ನ ನಡೆದಿದೆ.
ಮೈಸೂರಿನಲ್ಲಿ ನವೆಂಬರ್ 26ರಂದು ನಡೆಯಲಿರುವ ಸಮಾವೇಶದಲ್ಲಿ ಒಂದೇ ವೇದಿಕೆಗೆ ಬರುವ ಸಾಧ್ಯತೆ ಇದೆ. ರಾಜಣ್ಣ ಅವರು ಈಗಾಗಲೇ ಒಬ್ಬರ ಮುಖವನ್ನು ಒಬ್ಬರು ನೋಡದಂತೆ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.ಈ ನಾಯಕರ ಜೊತೆ ಮಾತನಾಡಿ ಒಬ್ಬರನ್ನೊಬ್ಬರು ಹಿಂದೆ ಇದ್ದಂತೆ ಇರಲು ಸಂಧಾನ ನಡೆಸುತ್ತಿದ್ದಾರೆ.ಈ ರಾಜಕೀಯ ಬೆಳವಣಿಗೆಗೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.