LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಇಂಡಿಯನ್ ರೇಸಿಂಗ್ ಫೆಸ್ಟಿವಲ್: ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವಗೆ ಗೆಲುವು!


ನೋಯ್ಡಾ: ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಬುದ್ಧ್ ಇಂಟರ್‌ನ್ಯಾಷನಲ್ ಸರ್ಕೂ್ಯಟ್‌ನಲ್ಲಿ ನಡೆದ ಎರಡು ದಿನಗಳ ರೇಸ್‌ಗಳು ರೋಚಕವಾಗಿ ಮುಕ್ತಾಯಗೊಂಡಿವೆ. ಎಫ್೪ ಇಂಡಿಯನ್ ಚಾಂಪಿಯನ್‌ಶಿಪ್‌ನಲ್ಲಿ ಗೋವಾ ಏಸಸ್ ಜೆಎ ರೇಸಿಂಗ್ ತಂಡದ ಆರ್ಯನ್ ನರೋಲಾ ಎರಡು ರೇಸ್‌ಗಳನ್ನು ಗೆದ್ದು ಮಿಂಚಿದರೆ, ಇಂಡಿಯನ್ ರೇಸಿಂಗ್ ಲೀಗ್‌ನ (ಐಆರ್‌ಎಲ್) ಎರಡನೇ ರೇಸ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವ ಗೆಲುವು ಸಾಧಿಸಿದರು.ಅಕ್ಟೋಬರ್ ೩೧ರಂದು ನಡೆದ ಮೊದಲ ದಿನದ ಐಆರ್‌ಎಲ್ ರೇಸ್‌ನಲ್ಲಿ ಗೋವಾ ಏಸಸ್ ಜೆಎ ರೇಸಿಂಗ್‌ನ ರೌಲ್ ಹೈಮನ್ ೨೭:೪೦.೭೫೯ ನಿಮಿಷಗಳಲ್ಲಿ ರೇಸ್ ಪೂರ್ಣಗೊಳಿಸಿ ಮೊದಲ ಸ್ಥಾನ ಪಡೆದರು. ಕೋಲ್ಕತಾ ರಾಯಲ್ ಟೈಗರ್ಸ್ನ ಸಾಯಿ ಶಿವ ಶಂಕರನ್ ಎರಡನೇ ಹಾಗೂ ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ಜೆಮ್ಮಾ ಮೂರ್ ಮೂರನೇ ಸ್ಥಾನ ಪಡೆದರು. ಆರಂಭದಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿದ್ದ ಚೆನ್ನೆöÊ ಟರ್ಬೊ ರೈಡರ್ಸ್ನ ತಿಜಿಲ್ ರಾವ್, ಉತ್ತಮ ಪ್ರದರ್ಶನ ನೀಡಿ ಎರಡನೇ ಸ್ಥಾನಕ್ಕೆ ಏರಿದ್ದರು. ಆದರೆ ಕೊನೆಯ ಲ್ಯಾಪ್‌ನಲ್ಲಿ ಕಾರಿನ ತಾಂತ್ರಿಕ 
ಸಮಸ್ಯೆಯಿಂದ ರೇಸ್‌ನಿಂದ ಹೊರಬರಬೇಕಾಯಿತು.ಎಫ್೪ ವಿಭಾಗದ ಮೊದಲ ರೇಸ್‌ನಲ್ಲಿ ಸ್ಪೀಡ್ ಡೆಮನ್ಸ್ ದೆಹಲಿಯ ದಕ್ಷಿಣ ಆಫ್ರಿಕಾದ ಚಾಲಕ ನ್ಟಿಯಿಸೋ ಮಬುಂಡಾ ೩೨:೪೬.೮೪೨ ನಿಮಿಷಗಳಲ್ಲಿ ಗುರಿ ತಲುಪಿ ಗೆಲುವು ಸಾಧಿಸಿದರು. ಮೂರನೇ ಸ್ಥಾನದಿಂದ ರೇಸ್ ಆರಂಭಿಸಿದ ಆರ್ಯನ್ ನರೋಲಾ, ಉತ್ತಮ ಆರಂಭದೊAದಿಗೆ ಮಬುಂಡಾ ಮತ್ತು ಅರ್ಜುನ್ ಛೇಡಾ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದರು. ಆದರೆ ಮಬುಂಡಾ ಮತ್ತೆ ಮೊದಲ ಸ್ಥಾನಕ್ಕೆ ಮರಳಿದರು. ಬಳಿಕ ಮಬುಂಡಾ ಮತ್ತು ಗೋವಾ ಏಸಸ್ ಜೆಎ ರೇಸಿಂಗ್‌ನ ಲುವಿವೆ ಸಂಬ್ದುಲಾ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಕೊನೆಗೆ ಮಬುಂಡಾ ಗೆಲುವು ತಮ್ಮದಾಗಿಸಿಕೊಂಡರು.ಭಾನುವಾರ ನಡೆದ ಎರಡು ಎಫ್೪ ರೇಸ್‌ಗಳಲ್ಲೂ ನರೋಲಾ ತಮ್ಮ ಪ್ರಾಬಲ್ಯ ಮೆರೆದರು. ಮೊದಲ ರೇಸ್‌ನಲ್ಲಿ ಸ್ವರ್ಣವ್ ದಾಸ್ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ ನರೋಲಾ, ಸಂಬ್ದುಲಾ ಅವರಿಂದಲೂ ತೀವ್ರ ಪೈಪೋಟಿ ಎದುರಿಸಿದರು. ಆದರೆ ಎಂಜಿನ್ ಸಮಸ್ಯೆಯಿಂದ ಸಂಬ್ದುಲಾ ರೇಸ್‌ನಿಂದ ಹೊರಬಂದರು. ಅಂತಿಮವಾಗಿ ನರೋಲಾ ಮೊದಲ ಸ್ಥಾನ ಪಡೆದರೆ, ಆರಿಸ್ ಕಿರಿಯಾಕು ಎರಡನೇ 
ಹಾಗೂ ಮಬುಂಡಾ ಮೂರನೇ ಸ್ಥಾನ ಪಡೆದರು.ಎರಡನೇ ರೇಸ್‌ನಲ್ಲೂ ಆರಂಭದಿAದಲೇ ಮುನ್ನಡೆ ಕಾಯ್ದುಕೊಂಡ ನರೋಲಾ, ಅರ್ಜುನ್ ಛೇಡಾ ಮತ್ತು ಮಬುಂಡಾ ಅವರ ಸವಾಲಿನ ನಡುವೆಯೂ ಗೆಲುವು ಸಾಧಿಸಿದರು. ಛೇಡಾ ಎರಡನೇ ಹಾಗೂ ಮಬುಂಡಾ ಮೂರನೇ ಸ್ಥಾನ ಪಡೆದರು. ಈ ಮೂಲಕ ಭಾನುವಾರ ಎರಡೂ ರೇಸ್‌ಗಳನ್ನು ಗೆದ್ದು ನರೋಲಾ ಡಬಲ್ ಸಾಧನೆ ಮಾಡಿದರು.ವಾರಾಂತ್ಯದ ಎರಡನೇ ಐಆರ್‌ಎಲ್ ರೇಸ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ರುಹಾನ್ ಅಲ್ವಾ ಗೆಲುವು ಸಾಧಿಸಿದರು. ಆರಂಭದಲ್ಲಿ ಅಲ್ವಾ ಅವರನ್ನು ಹಿಂದಿಕ್ಕಿ ಮುನ್ನಡೆ ಪಡೆದಿದ್ದ ಶೇನ್ ಚಂದೇರಿಯಾ, ಕಾರಿನ ತಾಂತ್ರಿಕ ಸಮಸ್ಯೆಯಿಂದ ರೇಸ್‌ನಿಂದ ಹೊರಬಂದರು. ಈ ಅವಕಾಶವನ್ನು ಬಳಸಿಕೊಂಡ ಅಲ್ವಾ ಮೊದಲ ಸ್ಥಾನ ಪಡೆದರು. ಹೈದರಾಬಾದ್ ಬ್ಲಾ÷್ಯಕ್‌ಬರ್ಡ್್ಸನ ಮೊಹಮ್ಮದ್ ರಿಯಾನ್ ಎರಡನೇ ಹಾಗೂ ಸ್ಪೀಡ್ ಡೆಮನ್ಸ್ ದೆಹಲಿಯ ಅಲಿಸ್ಟರ್ ಯೂಂಗ್ ಮೂರನೇ ಸ್ಥಾನ ಪಡೆದರು. ಆರ್ಯನ್ ನರೋಲಾ ಅವರ ಎರಡು ಗೆಲುವು ಹಾಗೂ ರುಹಾನ್ ಅಲ್ವಾ ಅವರ ಐಆರ್‌ಎಲ್ ಜಯದೊಂದಿಗೆ ಬುದ್ಧ್ ಇಂಟರ್‌ನ್ಯಾಷನಲ್ ಸರ್ಕೂ್ಯಟ್‌ನಲ್ಲಿ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ರೇಸ್ ವಾರಾಂತ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST