LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಛತ್ರಪತಿ ಶಿವಾಜಿ ಬಯೋಪಿಕ್

ರಿಷಬ್ ಶೆಟ್ಟಿ-ಸಂದೀಪ್ ಸಿಂಗ್ ಚಿತ್ರ


ಮರಾಠ ಸಾಮ್ರಾಜ್ಯದ ಸಂಸ್ಥಾಪಕ, ಹಿಂದೂ ಸಾಮ್ರಾಜ್ಯದ ಮಹಾನ್ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ತ್ಯಾಗ ಮತ್ತು ಸ್ವರಾಜ್ಯದ ಮಹೋನ್ನತ ಪರಿಕಲ್ಪನೆಯನ್ನು ಬೆಳ್ಳಿಪರದೆಯ ಮೇಲೆ ತರಲು ಸಿದ್ಧವಾಗಿರುವ `ದಿ ಪ್ರೆöÊಡ್ ಆಫ್ ಭಾರತ್’ ಛತ್ರಪತಿ ಶಿವಾಜಿ ಮಹಾರಾಜ್’ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಟಿ-ಸೀರೀಸ್ ಸಾಥ್ ನೀಡಿದೆ. ಎರಡು ಭಾಗಗಳಲ್ಲಿ ಅದ್ದೂರಿಯಾಗಿ ಮೂಡಿಬರಲಿರುವ ಈ ಐತಿಹಾಸಿಕ ಸಿನಿಮಾಗಾಗಿ ನಿರ್ಮಾಪಕ ಭೂಷಣ್ ಕುಮಾರ್, ಸಂದೀಪ್ ಸಿಂಗ್ ಮತ್ತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಒಂದಾಗಿದ್ದಾರೆ.ಈ ಮಹತ್ವದ ಪ್ರಾಜೆಕ್ಟ್ನ ಘೋಷಣೆಯ ಸಂದರ್ಭದಲ್ಲಿ, ನಿರ್ಮಾಪಕ ಭೂಷಣ್ ಕುಮಾರ್ ನಟ ರಿಷಬ್ ಶೆಟ್ಟಿಯವರಿಗೆ ಛತ್ರಪತಿ ಶಿವಾಜಿ ಮಹಾರಾಜರ ಶತಮಾನದಷ್ಟು ಹಳೆಯ ಅಪರೂಪದ ತೈಲವರ್ಣ ಚಿತ್ರವನ್ನು ಉಡುಗೊರೆ  ನೀಡಿದರು.ಬೃಹತ್ ಪ್ರಮಾಣದಲ್ಲಿ ನಿರ್ಮಾಣವಾಗಲಿರುವ ಈ ಎರಡು ಭಾಗಗಳ ಮಹಾಕಾವ್ಯವು ಶಿವಾಜಿ ಮಹಾರಾಜರ ಬದುಕಿನ ಮಹತ್ವದ ಯುದ್ಧಗಳು, ಅಪ್ರತಿಮ ತ್ಯಾಗಗಳು, ಕಾರ್ಯತಂತ್ರದ ಚತುರತೆ ಮತ್ತು ಇದುವರೆಗೆ ಹೆಚ್ಚು ಬೆಳಕಿಗೆ ಬಾರದ ಐತಿಹಾಸಿಕ ಅಧ್ಯಾಯಗಳನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಿದೆ. ಭಾರತ ಮಾತ್ರವಲ್ಲದೆ ವಿದೇಶಿ ತಂತ್ರಜ್ಞರನ್ನೂ ಒಳಗೊಂಡ ಬೃಹತ್ ತಾರಾಗಣ ಹಾಗೂ ಅತ್ಯುನ್ನತ ಸೃಜನಶೀಲ ತಂಡದೊAದಿಗೆ, ಎಲ್ಲ ತಲೆಮಾರಿನ ಪ್ರೇಕ್ಷಕರಿಗೂ ವಿಶ್ವದರ್ಜೆಯ ಸಿನಿಮೀಯ ಅನುಭವ ಕಟ್ಟಿಕೊಡುವುದು ಚಿತ್ರತಂಡದ ಗುರಿಯಾಗಿದೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಭೂಷಣ್ ಕುಮಾರ್, “ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಹೆಮ್ಮೆ ತರುವಂತಹ ಭವ್ಯ ಪರಂಪರೆಯನ್ನು ನೀಡಿದ್ದಾರೆ. ಸಿನಿಮಾದ ಮೂಲಕ ಆ ಪರಂಪರೆಯನ್ನು ಇಡೀ ಜಗತ್ತಿಗೆ ತಲುಪಿಸುವುದು ನಮ್ಮ ಕರ್ತವ್ಯ. ಸಂದೀಪ್ ಸಿಂಗ್ ಈ ಕಥೆಯನ್ನು ವಿವರಿಸಿದಾಗ, ಇದನ್ನು ಬೆಳ್ಳಿಪರದೆಯ ಮೇಲೆ ತರುವ ದೊಡ್ಡ ಜವಾಬ್ದಾರಿಯ ಅರಿವಾಯಿತು. ರಿಷಬ್ ಶೆಟ್ಟಿಯವರ ಪ್ರಭಾವಶಾಲಿ ವ್ಯಕ್ತಿತ್ವ ಮತ್ತು ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬುವ ಅವರ ಅಸಾಧಾರಣ ಪ್ರತಿಭೆಯು ಶಿವಾಜಿ ಮಹಾರಾಜರ ಶೌರ್ಯ ಮತ್ತು ಸ್ವರಾಜ್ಯದ ಸ್ಪೂರ್ತಿಯನ್ನು ಪ್ರೇಕ್ಷಕರಿಗೆ ದಾಟಿಸಲು ಅತ್ಯಂತ ಸೂಕ್ತವಾಗಿದೆ. ಇದು ನಮಗೆ ಕೇವಲ ಸಿನಿಮಾವಲ್ಲ, ಶಿವಾಜಿ ಮಹಾರಾಜರಿಗೆ ಸಲ್ಲಿಸುವ ಗೌರವ ನಮನ” ಎಂದಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST