LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ರಾಶಿ ಚಿತ್ರದ ಟ್ರೇಲರ್ ಅನಾವರಣ; ಈ ವಾರ ಬಿಡುಗಡೆ 

ಆದಿತ್ಯ ಶಶಿಕುಮಾರ್ ನಾಯಕನಾಗಿ ಅಭಿನಯಿಸಿರುವ `ರಾಶಿ’ ಚಿತ್ರದ ಟ್ರೇಲರ್ ಇತ್ತೀಚೆಗೆ  ಬಿಡುಗಡೆಯಾಯಿತು.


 ನಟ ಶಶಿಕುಮಾರ್ ಹಾಗೂ  ನಟಿ ತಾರಾ ಅನುರಾಧಾ ಅವರು ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.  ಡಿ ಬೀಟ್ಸ್ನ ಶೈಲಜಾ ನಾಗ್ ಉಪಸ್ಥಿತರಿದ್ದರು.ನಿರ್ಮಾಪಕ ಅಖಿಲೇಶ್ ನಿರ್ಮಾಣದ ಈ ಚಿತ್ರಕ್ಕೆ ವಿಜಯ್ ಪಾಳೇಗಾರ್ ಅವರು ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನವನ್ನೂ ನಿರ್ವಹಿಸಿದ್ದಾರೆ. 
ಡಿ ಬೀಟ್ಸ್ ಸಂಸ್ಥೆ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಜನಪ್ರಿಯ ಆಗಿದೆ. ತಾಯಿ-ಮಗನ ನಡುವಿನ ಬಾಂಧವ್ಯ, ಪ್ರೀತಿ ಹಾಗೂ ಕೌಟುಂಬಿಕ ಸಂಬಂಧಗಳ ಸುತ್ತ ಕಥೆ ಸಾಗುತ್ತದೆ. ನಾಯಕಿ ಸಮೀಕ್ಷಾ   ಕಾಲೇಜು ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ.ನಿರ್ಮಾಪಕ ಅಖಿಲೇಶ್ ಮಾತನಾಡಿ, ತಾವು ಸಿನಿಮಾ ಪ್ರೀತಿಯಿಂದ ಚಿತ್ರ ನಿರ್ಮಾಣಕ್ಕೆ ಬಂದಿದ್ದು, ನಟ ಶಶಿಕುಮಾರ್ ಅವರು ಬೆನ್ನೆಲುಬಾಗಿದ್ದರು ಎಂದರು.  ಶೈಲಜಾ ನಾಗ್ ಅವರ ಸಲಹೆ ಮತ್ತು ಮಾರ್ಗದರ್ಶನವೂ  ಸಹಕಾರಿಯಾಗಿದೆ.  ಕಾರ್ಯಕ್ರಮಕ್ಕೆ ಆಗಮಿಸಿದ ತಾರಾ ಅನುರಾಧಾ ಅವರಿಗೆ ವಿಶೇಷ ಧನ್ಯವಾದ ಎಂದರು.ನಿರ್ದೇಶಕ ವಿಜಯ್ ಪಾಳೇಗಾರ್ ಮಾತನಾಡಿ, ಕಾಲೇಜು ದಿನಗಳಿಂದಲೂ ನಿರ್ದೇಶಕನಾಗಬೇಕೆಂಬ ಕನಸು ಹೊಂದಿದ್ದೆ. ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಸಂಬAಧವನ್ನು ಆಧರಿಸಿ ಈ ಕಥೆಯನ್ನು ರೂಪಿಸಿದ್ದೇನೆ. ಟ್ರೇಲರ್‌ನಲ್ಲಿ ಚಿತ್ರದ ಕೆಲವು ಅಂಶಗಳನ್ನು ಮಾತ್ರ ತೋರಿಸಲಾಗಿದೆ. ಚಿತ್ರದಲ್ಲಿ ಇನ್ನೂ ಹಲವು ವಿಶೇಷತೆಗಳಿದ್ದು, ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ನಾಯಕ ಆದಿತ್ಯ ಶಶಿಕುಮಾರ್ ಹಾಗೂ ನಾಯಕಿ ಸಮೀಕ್ಷಾ ಮಾತನಾಡಿದರು. ನಟಿ ವೀಣಾ ಸುಂದರ್ ಅವರು ನೀಡಿದ ಮಾರ್ಗದರ್ಶನಕ್ಕೆ ಧನ್ಯವಾದಗಳನ್ನು ತಿಳಿಸಿದರು. ನಟ ಶಶಿಕುಮಾರ್ ಮಾತನಾಡಿ, ಚಿತ್ರದ ಟ್ರೇಲರ್‌ನಲ್ಲಿ ಗ್ರಾಮೀಣ ಸೊಗಡು, ಚಿತ್ರದಲ್ಲಿದೆ ಎಂದರು.ವೀಣಾ ಸುಂದರ್,   ತಬಲಾ ನಾಣಿ, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್  ಉಗ್ರಂ ರವಿ, ಭಜರಂಗಿ ಪ್ರಸನ್ನ ಸೇರಿದಂತೆ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದು,  ಅನಿಸಿಕೆಗಳನ್ನು ಹಂಚಿಕೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST