ಮೌಂಟ್ ಮೌಂಗನುಯಿಯಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತವನ್ನು 244 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ವಿಲ್ ಯಂಗ್ ಶತಕದ ನೆರವಿನಿಂದ 334 ರನ್ ಗಳಿಸಿದ ಕಿವೀಸ್, ಟೀಂ ಇಂಡಿಯಾವನ್ನು ಕೇವಲ 89 ರನ್‌ಗಳಿಗೆ ಆಲೌಟ್ ಮಾಡಿತು. ಭಾರತದ ಅನುಭವಿ ಬ್ಯಾಟರ್‌ಗಳ ವೈಫಲ್ಯವೇ ಈ ಬೃಹತ್ ಸೋಲಿಗೆ ಮುಖ್ಯ ಕಾರಣವಾಯಿತು.ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯವನ್ನು ಆತಿಥೇಯ ನ್ಯೂಜಿಲೆಂಡ್ ಭಾರಿ ಅಂತರದಿAದ ಗೆದ್ದುಕೊಂಡಿದೆ. ಇದು ಸರಣಿಯಲ್ಲಿ ಕಿವೀಸ್ ತಂಡದ ಮೊದಲ ಗೆಲುವಾಗಿದ್ದು, ಸರಣಿ ಸೋಲಿನಿಂದ ಪಾರಾಗಲು ಯತ್ನಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ವಿಲ್ ಯಂಗ್ ಅವರ ಶತಕದ ನೆರವಿನಿಂದ 334 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ಕಿವೀಸ್ ವೇಗಿಗಳ ಮಾರಕ ದಾಳಿಗೆ ನಲುಗಿ 100 ರನ್‌ಗಳ ಗಡಿ ದಾಟಲೂ ಸಾಧ್ಯವಾಗದೆ 26.4 ಓವರ್‌ಗಳಲ್ಲಿ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 244 ರನ್‌ಗಳ ಬೃಹತ್ ಅಂತರದ ಸೋಲೊಪ್ಪೊಕೊಂಡಿತು. ತಂಡದ ಈ ಸೋಲಿಗೆ ಅನುಭವಿ ಬ್ಯಾಟರ್?ಗಳ ಶೂನ್ಯ ಸಾಧನೆಯೇ ಪ್ರಮುಖ ಕಾರಣವಾಯಿತು.6 ವಿಕೆಟ್ ಉರುಳಿಸಿದ ಮ್ಯಾಟ್ ಹೆನ್ರಿ: ಭಾರತದ ಸೋಲಿಗೆ ಪ್ರಮುಖ ಕಾರಣವಾಗಿದ್ದು ನ್ಯೂಜಿಲೆಂಡ್ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರ ಮಾರಕ ದಾಳಿ. ಈ ಪಂದ್ಯದಲ್ಲಿ ಹೆನ್ರಿ ಬರೋಬ್ಬರಿ 6 ವಿಕೆಟ್ ಕಬಳಿಸಿದರು. ಅದರಲ್ಲೂ ಮೊದಲ ಓವರ್‌ನಲ್ಲೇ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದು ಟೀಂ ಇಂಡಿಯಾವನ್ನು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿಸಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಮೊದಲ ಓವರ್‌ನಲ್ಲೇ ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ಇಶಾನ್ ಕಿಶನ್, ಕುಲ್ದೀಪ್ ಯಾದವ್ ಮತ್ತು ಗುರ್‌ನೂರ್ ಬ್ರಾರ್ ಅವರ ವಿಕೆಟ್‌ಗಳನ್ನೂ ಪಡೆದು ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 6 ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಟೀಂ ಇಂಡಿಯಾದಿAದ ಶರಣಾಗತಿ: ಟೌರಂಗಾದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 334 ರನ್‌ಗಳ ಗುರಿ ನೀಡಲಾಗಿತ್ತು. ಬ್ಯಾಟಿಂಗ್‌ಗೆ ಪೂರಕವಾಗಿದ್ದ ಪಿಚ್‌ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮ್ಯಾಟ್ ಹೆನ್ರಿ ಅವರ ಸ್ವಿಂಗ್ ಬೌಲಿಂಗ್ ಮುಂದೆ ಭಾರತದ ಬ್ಯಾಟರ್‌ಗಳು ಸಂಪೂರ್ಣವಾಗಿ ತತ್ತರಿಸಿದರು. ಮೊದಲ ಓವರ್‌ನಲ್ಲೇ ಭಾರತ ಮೂರು ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಗೋಲ್ಡನ್ ಡಕ್‌ಗೆ ಔಟಾದರೆ, ವಿರಾಟ್ ಕೊಹ್ಲಿ ನಾಲ್ಕು ಎಸೆತಗಳನ್ನು ಎದುರಿಸಿ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಆರಂಭದಲ್ಲೇ ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿದ್ದರಿAದ ಮಧ್ಯಮ ಕ್ರಮಾಂಕದ ಮೇಲೂ ಒತ್ತಡ ಹೆಚ್ಚಾಯಿತು. ಪರಿಣಾಮ, ಅವರಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಇಶಾನ್ ಕಿಶನ್ 27 ರನ್ ಗಳಿಸಿದರೆ, ಅಕ್ಷರ್ ಪಟೇಲ್ ಮತ್ತು ನಮನ್ ಧೀರ್ ತಲಾ 21 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ವೇಗದ ಬೌಲರ್ ಮ್ಯಾಥ್ಯೂ ಫಿಶರ್ ಮೂರು ವಿಕೆಟ್ ಪಡೆದು ಭಾರತದ ಕುಸಿತಕ್ಕೆ ಮತ್ತಷ್ಟು ಕಾರಣರಾದರು. ಕೈಲ್ ಜೇಮಿಸನ್ ಒಂದು ವಿಕೆಟ್ ಕಬಳಿಸಿದರು. ನ್ಯೂಜಿಲೆಂಡ್ ಬ್ಯಾಟರ್‌ಗಳ ಉತ್ತಮ ಪ್ರದರ್ಶನ: ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್‌ಗಳಿಗೆ ತಕ್ಕ ಉತ್ತರ ನೀಡಿತು. ಆರಂಭಿಕ ಬ್ಯಾಟರ್ ಟಿಮ್ ಸೈಫರ್ಟ್ ಸ್ಫೋಟಕ ಬ್ಯಾಟಿಂಗ್ ನಡೆಸಿ 48 ಎಸೆತಗಳಲ್ಲಿ 58 ರನ್ ಗಳಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ ಮೊದಲ ಅರ್ಧಶತಕವಾಗಿತ್ತು. ಮತ್ತೊಂದೆಡೆ, ವಿಲ್ ಯಂಗ್ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಶತಕ ಸಿಡಿಸಿದರು. ಅವರು 125 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು.ಮಧ್ಯಮ ಕ್ರಮಾಂಕದಲ್ಲಿ ನಿಕ್ ಕೆಲ್ಲಿ ಮತ್ತು ಡೀನ್ ಫಾಕ್ಸ್ಕ್ರಾಫ್ಟ್ ಬೇಗನೆ ವಿಕೆಟ್ ಒಪ್ಪಿಸಿದರೂ, ಫಿನ್ ಅಲೆನ್ 41 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಬಳಿಕ ಮಿಚೆಲ್ ಸ್ಯಾಂಟ್ನರ್ 24 ರನ್ ಹಾಗೂ ಕ್ರಿಸ್ಟಿಯನ್ ಕ್ಲಾರ್ಕ್ 22 ರನ್ ಗಳಿಸಿ ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು.ಇತ್ತ ಭಾರತದ ಬೌಲರ್‌ಗಳು ದುಬಾರಿಯಾದರು. ಕುಲ್ದೀಪ್ ಯಾದವ್ 8 ಓವರ್‌ಗಳಲ್ಲಿ 73 ರನ್ ಬಿಟ್ಟುಕೊಟ್ಟರು. ಗುರ್‌ನೂರ್ ಬ್ರಾರ್ 69 ರನ್ ನೀಡಿದರೆ, ಆಕಿಬ್ ನಬಿ 8 ಓವರ್‌ಗಳಲ್ಲಿ 59 ರನ್ ಬಿಟ್ಟುಕೊಟ್ಟರು. ಆದರೆ ಅಕ್ಷರ್ ಪಟೇಲ್ ಮಾತ್ರ ಉತ್ತಮ ಬೌಲಿಂಗ್ ಪ್ರದರ್ಶಿಸಿ 10 ಓವರ್‌ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರು.