LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ದೊಡ್ಡಬಳ್ಳಾಪುರ: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ


ದೊಡ್ಡಬಳ್ಳಾಪುರ: ಕನ್ನಡ ನಾಮಫಲಕ ಅಳವಡಿಕೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದರೂ ಪಟ್ಟಣದ ಹಲವು ವಾಣಿಜ್ಯ ಮಳಿಗೆ, ಧಾರ್ಮಿಕ ಸ್ಥಳಗಳಲ್ಲಿ ಕನ್ನಡೇತರ ನಾಮಫಲಕಗಳೇ ರಾರಾಜಿಸುತ್ತಿವೆ. ನಿಯಮ ಉಲ್ಲಂಘಿಸಿ ಅಳವಡಿಸಿರುವ ನಾಮಫಲಕಗಳನ್ನು ತೆರವುಗೊಳಿಸಲು ಡಿ.7ರಂದು ಕನ್ನಡಪರ ಸಂಘಟನೆಗಳು ಮುಖಂಡರು ನಿರ್ಧರಿಸಿದ್ದಾರೆ.ಕನ್ನಡ ಸಂಘಟನೆಗಳ ಒಕ್ಕೂಟದಿಂದ ಕನ್ನಡೇತರ ನಾಮಫಲಕಗಳ ತೆರವಿಗೆ ಸಂಬಂಧಿಸಿದಂತೆ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ಡಿ. 7ರಂದು ನಗರಸಭೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕನ್ನಡೇತರ ನಾಮಫಲಕ ತೆರವುಗೊಳಿ-ಸಲಾಗುವುದು. ಈ ಸಂಬಂಧ ತಾಲ್ಲೂಕು ದಂಡಾಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಕರೆದು, ತೆರವು ಕಾರ್ಯಾಚರಣೆ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು  ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಆಗ್ರಹಿಸಿದರು.ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟಮೊದಲ ಹಂತದಲ್ಲಿ ನಗರಸಭೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆಯುವಂತೆ ಒತ್ತಾಯಿಸಲು ನಿರ್ಧರಿಸಲಾಯಿತು. ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಯಿತು.ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನಗರಸಭೆಯ ಕಸದ ಸಗ್ರಹ ವಾಹನ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಕನ್ನಡೇತರ ನಾಮಫಲಕಗಳ ತೆರವು ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ನಾಮಫಲಕ ತೆರವುಗೊಳಿಸಲು ಅಂಗಡಿ ಮಾಲೀಕರಿಗೆ ಅಂತಿಮ ಗಡುವು ನೀಡಿ, ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ. ‘ಕನ್ನಡ ಉಳಿವು ಮತ್ತು ಬೆಳವಣಿಗೆಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಆದರೆ ಈವರೆಗೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಈ ಬಾರಿ ಹೋರಾಟಕ್ಕೆ ಫಲ ಸಿಗಲೇಬೇಕು. ಕನ್ನಡದ ಅಸ್ಮಿತೆ ಕಾಪಾಡಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು’ ಎಂದರು.ಡಿ. 7ರೊಳಗೆ ಸಂಬAಧಪಟ್ಟವರು ಕನ್ನಡೇತರ ನಾಮಫಲಕ ತೆರವುಗೊ ಳಿಸದಿದ್ದರೆ ತಾಲ್ಲೂಕಿನಾದ್ಯಂತ ಇರುವ ಇಂತಹ ನಾಮಫಲಕ ತೆರವುಗೊಳಿಸಲು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುಂದಾಗಲಿದ್ದಾರೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.ಮುಖ್ಯಾಂಶಗಳು ಡಿ.7ರಂದು ತೆರವು ಅಭಿಯಾನ*ಕನ್ನಡ ಸಂಘಟನೆಗಳ ಒಕ್ಕೂಟ ತೀರ್ಮಾನ*ಸೂಕ್ತ ನಿರ್ಣಯಕ್ಕೆ ಸಭೆ ಕರೆಯಲು ಅಧಿಕಾರಿಗಳಿಗೆ ಆಗ್ರಹ. 
ಮುಖಂಡರಾದ ತ.ನ.ಪ್ರಭುದೇವ್, ಸಂಜೀವನಾಯ್ಕ, ರಾಜಘಟ್ಟ ರವಿ, ಜಿ.ಸುರೇಶ್, ಪಿ.ಗೋವಿಂದರಾಜು, ಡಿ.ಪಿ.ಆಂಜನೇಯ, ರಮೇಶ್, ಜೋಗಹಳ್ಳಿಅಮ್ಮು, ಜೆ.ಶಿವಕುಮಾರ್ ಅಗ್ನಿವೆಂಕಟೇಶ್, ಮುನಿಪಾಪಯ್ಯ, ಮಲ್ಲೇಶ್, ಹಮಾಮ್ ವೆಂಕಟೇಶ್, ವೇಣು, ವೆಂಕಟೇಶ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST