LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮಿನಿ ಕರ್ನಾಟಕ ಕ್ರೀಡಾಕೂಟ: ವಿಹಾನ್, ತನ್ವಿ ಚಿನ್ನದ ಓಟ, ನೆಟ್‌ಬಾಲ್‌ನಲ್ಲಿ ಮಂಡ್ಯ ಚಾಂಪಿಯನ್


ಬೆಂಗಳೂರು: ದಕ್ಷಿಣ ಕನ್ನಡದ ವಿಹಾನ್ ವಿಶಾಲ್ ಕುಮಾರ್ ಹಾಗೂ ಬೆಂಗಳೂರು ನಗರದ ತನ್ವಿ ವಿಶ್ವಾಸ್ ಅವರು ಮಿನಿ ಕರ್ನಾಟಕ ಕ್ರೀಡಾಕೂಟ ಐದನೇ ಆವೃತ್ತಿಯಲ್ಲಿ ಕ್ರಮವಾಗಿ ಬಾಲಕರ-ಬಾಲಕಿಯರ ವಿಭಾಗದಲ್ಲಿ ವೇಗದ ಓಟಗಾರ/ಓಟಗಾರ್ತಿ ಎನಿಸಿದರು. ಕಬಡ್ಡಿಯಲ್ಲಿ ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ತಂಡಗಳು ಸ್ವರ್ಣ ಪದಕ ಜಯಿಸಿದರೆ, ಜುಡೋ ಸ್ಪರ್ಧೆಗಳಲ್ಲಿ ಬೆಳಗಾವಿ ಜಿಲ್ಲಾ ತಂಡದ ಸ್ಪರ್ಧಿಗಳು ಪ್ರಾಬಲ್ಯ ಸಾಧಿಸಿದರು.ಟೆನಿಸ್‌ನಲ್ಲಿ ಬೆಂಗಳೂರು ನಗರದ ಕ್ರೀಡಾಪಟುಗಳು ಕ್ಲೀನ್‌ಸ್ವೀಪ್ ಸಾಧನೆ ಮಾಡಿದರು. ಅಥ್ಲೆಟಿಕ್ಸ್ನಲ್ಲಿ ದಕ್ಷಿಣ ಕನ್ನಡ ಹಾಗೂ ಬೆಂಗಳೂರು ನಗರ ಜಿಲ್ಲಾತಂಡಗಳು ಹೆಚ್ಚಿನ ಪದಕ ಗೆದ್ದುಕೊಂಡಿದ್ದು, ಬಾಸ್ಕೆಟ್‌ಬಾಲ್, ಹಾಕಿ, ಖೋಖೋ ಸ್ಪರ್ಧೆಯ ಅಂತಿಮ ಸುತ್ತಿನ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಗುರುವಾರ 23 ಸ್ಪರ್ಧೆಗಳಲ್ಲಿ ತಲಾ 23 ಚಿನ್ನ,ಬೆಳ್ಳಿ ಜತೆಗೆ 28 ಕಂಚಿನ ಪದಕಗಳ ವಿಜೇತರನ್ನು ನಿರ್ಧರಿಸಲಾಯಿತು. ಎಂಟು ದಿನಗಳ 14 ವಯೋಮಿತಿಯ ಕ್ರೀಡಾಕೂಟಕ್ಕೆ ಶನಿವಾರ ತೆರೆಬೀಳಲಿದೆ.ಕೂಟದ 6ನೇ ದಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ 100 ಮೀಟರ್ ಓಟದ ಬಾಲಕರ ವಿಭಾಗದಲ್ಲಿ 11.90 ಸೆಕೆಂಡ್‌ಗಳಲ್ಲಿ ಮೊದಲ ಸ್ಥಾನಿಯಾಗಿ ಕ್ರಮಿಸಿದ ವಿಹಾನ್ ಚಿನ್ನ ಗೆದ್ದರೆ, ದ.ಕನ್ನಡದವರೇ ಆದ ಇಬ್ರಾಹಿಂ ಅಲಿ ರ್ದಾನ್ (12.01ಸೆ) ರಜತ, ಬೆಂಗಳೂರು ನಗರದ ಇನ್ಬಾ ಕಣ್ಣನ್ (12.20ಸೆ) ಕಂಚು ಜಯಿಸಿದರು. ಬಾಲಕಿಯರ ವಿಭಾಗದಲ್ಲಿ ತನ್ವಿ (13.10 ಸೆ) ಅಗ್ರಸ್ಥಾನಿಯಾಗಿ ಸ್ವರ್ಣ ಗೆದ್ದರೆ, ಜಿತ್ಯಾ (13.20ಸೆ) ರಜತ ಹಾಗೂ ದಕ್ಷಿಣ ಕನ್ನಡದ ಶಿಖಾ ಟಿ ಕರ್ಕೆರ (13.50ಸೆ) ಕಂಚಿಗೆ ಕೊರಳೊಡ್ಡಿದರು.ಇತರ ಫಲಿತಾಂಶ: ಕ್ರಮವಾಗಿ ಬಾಲಕರ-ಬಾಲಕಿಯರ ವಿಭಾಗ: 80 ಮೀ.ಹರ್ಡಲ್ಸ್: 1. ಮೋಕ್ಷಿತ್ ಆರ್. ಗೌಡ (ಮೈಸೂರು), 2.ಸುಭಾಷ್ (ಚಿತ್ರದುರ್ಗ), 3. ಪ್ರಜ್ವಲ್ (ಶಿವಮೊಗ್ಗ); 1.ನಹೀದಾ (ಉಡುಪಿ), 2. ಧ್ಯಾನಾ (ಬೆಂ.ನಗರ), 3.ಲಾವಣ್ಯ (ಮಂಡ್ಯ); ಡಿಸ್ಕಸ್ ಥ್ರೋ:1.ಪವದೇಶ್ (ವಿಜಯಪುರ), 2. ನಕುಲ್ ಬಿಸಗಣಿ (ಶಿವಮೊಗ್ಗ),3. ಆರ್ಯನ್ (ಉಡುಪಿ); 1.ವೈಷ್ಣವಿ (ದ.ಕನ್ನಡ), 2.ಯುಕ್ತಾ ಶ್ರೀ (ಹಾಸನ), 3. ಆದಿತಿ ನಂದನ್ (ಮೈಸೂರು); ಜುಡೋ ಬಾಲಕಿಯರ ಚಿನ್ನ ವಿಜೇತರು:-23 ಕೆಜಿ: ಸಾನ್ವಿ ಸಿದರೈ ನಾಯಕ್ (ಬೆಳಗಾವಿ);-28 ಕೆಜಿ: ರೂಹಿ ಪಾಟೀಲ್ (ಬೆಳಗಾವಿ);-32 ಕೆಜಿ: ಭವಾನಿ ಪ್ರಶಾಂತ್(ಚಿಕ್ಕಮಗಳೂರು);-36 ಕೆಜಿ: ಗಾಯತ್ರಿ ಪರಶುರಾಮ (ಬೆಳಗಾವಿ);-40 ಕೆಜಿ: ತೇಜು.ಎನ್ (ಶಿವಮೊಗ್ಗ); ಬಾಲಕರ -25 ಕೆಜಿ: ಋತ್ವಿಕ್ ಯಲ್ಲಪ್ಪ (ಬೆಳಗಾವಿ); -30 ಕೆಜಿ: ಸೋಪಾನ ರಾಹುಲ್ ಅರಗೆ (ಬೆಳಗಾವಿ); -35 ಕೆಜಿ: ಪ್ರದೀಪ್ ಶ್ರೀಕಾಂತ್ ನಾಯ್ಕ (ಬೆಳಗಾವಿ); -40 ಕೆಜಿ: ಗಂಗೂರು ಮಹಿಧರ್ (ಬೆಂ.ನಗರ); -45 ಕೆಜಿ: ಶ್ರೇಯಲ್. ಆರ್.ಕೋರಿ (ಬೆಳಗಾವಿ).ಅಂಜು ಬಾಬಿ ಜಾರ್ಜ್ ಪುತ್ರಿಗೆ ಲಾಂಗ್‌ಜAಪ್‌ನಲ್ಲಿ ಬಂಗಾರ: ಭಾರತದ ದಿಗ್ಗಜ ಅಥ್ಲೀಟ್ ಹಾಗೂ ಮಾಜಿ ಲಾಂಗ್‌ಜAಪ್ ಪಟು ಅಂಜು ಬಾಬಿ ಜಾರ್ಜ್ ಪುತ್ರಿ ಆಂಡ್ರಿಯಾ ಬಾಬಿ ಜಾರ್ಜ್ (ಬೆಂ.ನಗರ) ಬಾಲಕಿಯರ ಲಾಂಗ್‌ಜAಪ್‌ನಲ್ಲಿ ಸ್ವರ್ಣ ಪದಕ ಒಲಿಸಿಕೊಂಡರು. 4.55 ಮೀಟರ್ ದೂರದ ಜಿಗಿತದೊಂದಿಗೆ ಆಂಡ್ರಿಯಾ ಅಗ್ರಸ್ಥಾನ ಪಡೆದರೆ, ಮೈಸೂರಿನ ನಿಹಾ (4.52 ಮೀ) ರಜತ, ಬೆಂ.ನಗರದ ಸಾರಾ ಜುನೈರ್ (4.47 ಮೀ) ಕಂಚಿನ ಪದಕ ಜಯಿಸಿದರು. ಸ್ಪರ್ಧೆಯ ವಿಜೇತರಿಗೆ ಅಂಜು ಬಾಬಿ ಜಾರ್ಜ್ ಪದಕ ಪ್ರದಾನ ಮಾಡಿದರು.ಬಾಲಕಿಯರ ಲಾಂಗ್ ಜಂಪ್ ಸ್ಪರ್ಧೆಯ ಪದಕ ವಿಜೇತರೊಂದಿಗೆ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಬಾಲಕಿಯರ ಲಾಂಗ್?ಜಂಪ್ ಸ್ಪರ್ಧೆಯ ಪದಕ ವಿಜೇತರೊಂದಿಗೆ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ಏಜೆನ್ಸಿ
ನೆಟ್‌ಬಾಲ್‌ನಲ್ಲಿ ಮಂಡ್ಯ ಚಾಂಪಿಯನ್: ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಬಡ್ಡಿ ಪದಕ ಸುತ್ತಿನ ಬಾಲಕ ವಿಭಾಗದಲ್ಲಿ ಬೆಂಗಳೂರು ನಗರ ತಂಡ 36-30 ಅಂಕಗಳಿಂದ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಸೋಲಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿತು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ 51-31 ಅಂಕಗಳಿಂದ ಶಿವಮೊಗ್ಗ ತಂಡವನ್ನು ಮಣಿಸಿ ಸ್ವರ್ಣ ಜಯಿಸಿತು. ಮಹಿಳಾ ಸೇವಾ ಸಮಾಜ ಕೋರ್ಟ್ನಲ್ಲಿ ನಡೆದ ಟೆನಿಸ್ ಸ್ಪರ್ಧೆಯ ಬಾಲಕರ-ಬಾಲಕಿಯರ ತಂಡ ವಿಭಾಗದಲ್ಲಿ ಬೆಂಗಳೂರು ನಗರ ಅವಳಿ ಸ್ವರ್ಣ ಸಂಭ್ರಮ ಕಂಡಿತು.ಬೆಂಗಳೂರು ನಗರ ತಂಡಗಳು 2-0 ರಿಂದ ಬಾಲಕರ-ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ ಉಡುಪಿ, ಮಂಡ್ಯ ತಂಡಗಳನ್ನು ಮಣಿಸಿ ಚಿನ್ನ ಗೆದ್ದವು. ನೆಟ್‌ಬಾಲ್ ಬಾಲಕರ ವಿಭಾಗದಲ್ಲಿ ಮಂಡ್ಯ, ಬೆಂಗಳೂರು ನಗರ ತಂಡಗಳು ಚಾಂಪಿಯನ್ ಎನಿಸಿದರೆ, ಬೆಂಗಳೂರು ನಗರ, ಚಾಮರಾಜನಗರ ತಂಡಗಳು ಬಾಲಕಿಯರ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ, ರಜತ ಜಯಿಸಿದವು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST