ಪ್ರಾದೇಶಿಕ ಪ್ರಮಾಣೀಕರಣ ಮಂಡಳಿ ನಿರ್ಮಾಪಕ ಸ್ನೇಹಿ ಆಗಿದೆ ಎನ್ನುವುದನ್ನು ಚಲನಚಿತ್ರ ನಿರ್ಮಾಪಕರು ಗಮನಿಸಬೇಕು ಇದರ ಜೊತೆಗೇ ನಿಯಮಾವಳಿ ಪ್ರಕಾರ ಸಮಾಜದ ಸ್ವಾಸ್ಥ್ಯ ಕಾಪಾಡುವ ಮಹತ್ತರ ಜವಾಬ್ದಾರಿ ಇದರ ಮೇಲಿದೆ ಇದಕ್ಕೆ ಚಿತ್ರರಂಗದ ಸಹಕಾರವೂ ಬೇಕು ಎಂದು ಪ್ರಾದೇಶಿಕ ಪ್ರಮಾಣಿಕರಣ ಮಂಡಳಿ ಅಧಿಕಾರಿ ಯಶವಂತ ಶಹನಾಯ್ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ಸಿನಿ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚಲನಚಿತ್ರ ನಿರ್ಮಾಪಕರು ಕಥೆಯ ಆಯ್ಕೆ ಚಿತ್ರಕಥೆ ಮತ್ತು ಹಾಡಿನ ರೂಪುರೇಷೆ ಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿಯೇ ನಿಯಮಾವಳಿಗಳನ್ನು ಗಮನದಲ್ಲಿರಿಸಿಕೊಂಡರೆ ಚಲನಚಿತ್ರ ಪೂರ್ಣಗೊಂಡು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಹೊತ್ತಿಗೆ ಯಾವುದೇ ಆತಂಕಕ್ಕೆ ಒಳಗಾಗುವ ಸಂದರ್ಭವೇ ಬರುವುದಿಲ್ಲ ಎಂದು ಸಂಪನ್ಮೂಲ ಭಾಷಣಕಾರರಾಗಿ ಪಾಲ್ಗೊಂಡಿದ್ದ ಯಶವಂತ ಶೆಹನಾಯ್ ನಿರ್ಮಾಪಕರಿಗೆ ಕಿವಿಮಾತು ಹೇಳಿದರು.‘ಒಂದು ಸಿನಿಮಾ ನಿರ್ಮಾಣ ಪೂರ್ತಿಯಾದ ನಂತರ ಅದಕ್ಕೆ ಪ್ರಾದೇಶಿಕ ಚಲನಚಿತ್ರ ಮಂಡಳಿಯಿಂದ ಪ್ರಮಾಣಪತ್ರ ಪಡೆಯುವುದು ಅತ್ಯವಶ್ಯಕವಾಗಿದೆ. ಸಿನಿಮಾ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಸ್ಮೋಕಿಂಗ್ ಸೀನ್ ಆ ಕಥೆಗೆ ಎಷ್ಟು ಅವಶ್ಯಕ ಅನ್ನೋದರ ಮೇಲೆ ಸೆನ್ಸಾರ್ ಸರ್ಟಿಫಿಕೇಟ್ ಮಾನದಂಡ ನಿರ್ಧಾರವಾಗುತ್ತದೆ. ಸಿನಿಮಾ ಸ್ಕಿçಪ್ಟ್ ಹಂತದಲ್ಲೇ ಜಾಗ್ರತೆ ವಹಿಸಿದರೆ ನಿರ್ಮಾಪಕರು ಹಣ ಉಳಿಸಬಹುದು.ಎಂದು ಯಶವಂತ ಅಭಿಪ್ರಾಯಪಟ್ಟರು. ಮಕ್ಕಳ ಚಿತ್ರ ಎಂದರೆ ಅದು ಮಕ್ಕಳನ್ನು ಎಂಗೇಜ್ ಮಾಡಬೇಕು, ಅದರಲ್ಲಿ ಬರೀ ಮಕ್ಕಳೇ ಇರಬೇಕು ಅಂತೇನಿಲ್ಲ, ಚಿತ್ರದ ಒಳ ಹೂರಣ ಮಕ್ಕಳಿಗೆ ಇರಬೇಕು. ಗೊಂದಲ ಇರುವ ವಿಚಾರಗಳು, ಹೊಡೆದಾಟ ಬಡಿದಾಟ ಕೊಲೆ ಇರಬಾರದು. ಮಕ್ಕಳನ್ನು ತಪ್ಪು ದಾರಿಗೆ ತರುವ ಕಂಟೆAಟ್ ಇರಬಾರದು’ ಎಂದು ಯಶವಂತ್ ವಿವರ ನೀಡಿ ಮಂಡಳಿಯ ನಿಯಮಾವಳಿಗಳ ಮೇಲೆ ಬೆಳಕು ಚೆಲ್ಲಿದರು.ಚಲನಚಿತ್ರ ನಿರ್ಮಾಪಕ ಕೃಷ್ಣೇಗೌಡ ಮಾತನಾಡುತ್ತಾ, ‘ಮಲಯಾಳಂನಲ್ಲಿ ಕಂಟೆಂಟ್ ಆಧಾರಿತ ಚಿತ್ರಗಳನ್ನು ಮಾಡ್ತಿದ್ದಾರೆ. ನಿರ್ಮಾಪಕನನ್ನು ಅಪ್ರೋಚ್ ಮಾಡಬೇಕಾದವನು ನಿರ್ದೇಶಕ. ಉತ್ತಮ ಕಂಟೆAಟ್ ಎಂದಿಗೂ ನಿರ್ಮಾಪಕ - ನಿರ್ದೇಶಕರನ್ನು ಕೈಹಿಡಿಯುತ್ತದೆ’ ಎಂದು ಚಿತ್ರನಿರ್ಮಾಣ ಮತ್ತು ಸೆನ್ಸಾರ್ ಸವಾಲುಗಳ ಕುರಿತೂ ಮಾತನಾಡಿದರು.