ತಿರುವನಂತಪುರಂ: ಕನ್ನಡಿಗ ಯಶ್ ನಟನೆಯ ಬಹುನಿರೀಕ್ಷಿತ `ರಾಮಾಯಣ' ಚಿತ್ರದ ಬಿಡುಗಡೆಯೊಂದಿಗೆ ಕೇರಳದ ಜಟಾಯು ಅರ್ತ್ ಸೆಂಟರ್ ಮತ್ತೊಮ್ಮೆ ದೇಶದ ಗಮನ ಸೆಳೆದಿದೆ. ಇಲ್ಲಿರುವ ಬೃಹತ್ ಜಟಾಯು ಶಿಲ್ಪವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.