ಗುರುತೇಜ್ ಶೆಟ್ಟಿ ನಿರ್ದೇಶನದಲ್ಲಿ, ಕಿರಣ್ ರಾಜ್ ನಾಯಕನಾಗಿ ಅಭಿನಯಿಸಿರುವ `ಜಾಕಿ-42’ ಇದೇ ಡಿಸೆಂಬರ್ 18ರಂದು ಬಿಡುಗಡೆಯಾಗಲಿದೆ. ಭಾರತಿ ಸತ್ಯನಾರಾಯಣ ನಿರ್ಮಾಣದ ಚಿತ್ರ ಕುದುರೆ ರೇಸ್ನ ರೋಚಕತೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆ ಹೊಂದಿದೆ. ಮನರಂಜನೆಯ ಜೊತೆಗೆ ಭಾವನಾತ್ಮಕ ಅಂಶಗಳೂ ಇವೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ. ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ಅಭಿನಯಿಸಿದ್ದಾರೆ. ಇವರೊಂದಿಗೆ ಯುಕ್ತ, ದೀಪಕ್ ರೈ, ಬಾಲರಾಜ್ ವಾಡಿ, ಶಾಂತಲಾ ಕಾಮತ್, ರಾಜೇಂದ್ರ ಕಾರಂತ್, ಮಧುಸೂಧನ್, ಗಿರೀಶ್ ಹೆಗ್ಡೆ, ಅರುಣ್ ಆಚಾರ, ಚೇತನ್ ರೈ ಮಣಿ, ಹರ್ಷಿತ್ ಗೌಡ ಸೇರಿದಂತೆ ಕಲಾವಿದರು ಕಾಣಿಸಿಕೊಂಡಿದ್ದಾರೆ. ವಿನೋದ್ ಯಜಮಾನ್ಯ ಸಂಗೀತ ಸಂಯೋಜನೆ ಮಾಡಿದ್ದು, ಒಟ್ಟು ಮೂರು ಹಾಡುಗಳಿವೆ.