`ನರಿ ಕಥೆ’ ಚಿತ್ರ ಮುಹೂರ್ತ ಆಚರಿಸಿಕೊಂಡಿತು. ದಯಾಳ್ ಪದ್ಮನಾಭನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬಿ. ಸುರೇಶ್, ಮಿತ್ರ, ವೀಣಾ ಸುಂದರ್, ಬಿಂಬಶ್ರೀ, ಸುಭಾಷ್ ಪಾರ್ಥ ಹಾಗೂ ಪ್ರಿಯಾ ಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.ಇದು ಸಂಪೂರ್ಣವಾಗಿ ಪಾತ್ರಾಧಾರಿತ ಸಿನಿಮಾ. ಇಲ್ಲಿ ಹೀರೋ, ಹೀರೋಯಿನ್ಗಳಿಗಿಂತ ಕಥೆ ಮತ್ತು ಪಾತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು ದಯಾಳ್.ಚಿತ್ರದ ಕಥೆ ಕೇಳಿದಾಗ ಸಂತೋಷವಾಯಿತು. ಇಂತಹದೇ ಪಾತ್ರದಲ್ಲಿ ಅಭಿನಯಿಸಬೇಕು ಎಂಬ ಆಸೆ ಮೂಡಿತು. ನಾನು ಇಷ್ಟಪಟ್ಟ ಪಾತ್ರವೇ ಈ ಸಿಕ್ಕಿದೆ. ಕಥೆಗೆ ಮಹತ್ವವಿರುವ ಪಾತ್ರ ಎಂದರು.ಮಿತ್ರ (ನಟ): ನನ್ನನ್ನು ಸಿನಿಮಾದ ಮುಖ್ಯವಾಹಿನಿಗೆ ಪರಿಚಯಿಸಿದವರೇ ದಯಾಳ್ ಪದ್ಮನಾಭನ್. ನನ್ನನ್ನು ಗುರುತಿಸಿ ಅವಕಾಶ ನೀಡಿದ್ದರು. ಇದೀಗ ಅವರ ನಿರ್ದೇಶನದಲ್ಲಿ ಮತ್ತೊಮ್ಮೆ ಅಭಿನಯಿಸುತ್ತಿರುವುದು ಖುಷಿಯ ವಿಚಾರ ಎಂದರು ಮಿತ್ರ.ಕಥೆ ಇಷ್ಟವಾಯಿತು. ಅದರಲ್ಲೂ ಎರಡನೇ ಭಾಗ ಚೆನ್ನಾಗಿದೆ. ದಯಾಳ್ ನಿರ್ದೇಶನದಲ್ಲಿ ಕೆಲಸ ಮಾಡುವುದು ಉತ್ತಮ ಅನುಭವಎಂದರು ವೀಣಾ ಸುಂದರ್.
ಸಂಗೀತ ನಿರ್ದೇಶಕ ಅಭಿಷೇಕ್ ಎಸ್. ಎನ್. ಚಿತ್ರದಲ್ಲಿ ಮೂರು ಹಾಡುಗಳಿರುತ್ತವೆ ಎಂದರು. ತಾರಾಗಣದಲ್ಲಿ ಸುಭಾಷ್ ಪಾರ್ಥ, ಬಿಂಬಶ್ರೀ ಹಾಗೂ ಪ್ರಿಯಾ ಗೌಡ ಇದ್ದಾರೆ.