LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

ಮೊಬೈಲ್ ಆಪ್ ಬಳಸಿ ರಸಗೊಬ್ಬರ ಖರೀದಿಸಿ-ಡಿಸಿ


ಚಿಕ್ಕಬಳ್ಳಾಪುರ: ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ, ಸಮರ್ಪಕ ನಿರ್ವಹಣೆ ಹಾಗೂ ಸುಲಭವಾಗಿ ಗೊಬ್ಬರ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಹೊಸ ಡಿಜಿಟಲ್ ರಸಗೊಬ್ಬರ ಮಾರಾಟ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅವರು ತಿಳಿಸಿದರು.
ರೈತರು ತಮ್ಮ ಮೊಬೈಲ್‌ನಲ್ಲಿಯೇ ಆಧಾರ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಮೂಲಕ ರಸಗೊಬ್ಬರ ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬAಧ ಫರ್ಟಿಲೈಸರ್ ಸೇಲ್ ಅಪ್ಲಿಕೇಶನ್ ಸಿಸ್ಟಮ್  ಹಾಗೂ ಫರ್ಟಿಲೈಸರ್ ಸೇಲ್ ಆಪ್  ಭಿವೃದ್ಧಿಪಡಿಸಲಾಗಿದೆ. ಹೊಸ ವ್ಯವಸ್ಥೆಯು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ 2026ರ ಡಿಸೆಂಬರ್ 1ರಿಂದ ಅನುಷ್ಟಾ ನಗೊಳ್ಳಲಿದೆ. ರೈತರು ತಮ್ಮ ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ವಿವರಗಳಿಗೆ ಅನುಗುಣವಾಗಿ ಅಗತ್ಯವಿರುವ ಪ್ರಮಾಣದ ರಸಗೊಬ್ಬರವನ್ನು ಖರೀದಿಸಬಹುದಾಗಿದೆ. ಮೊಬೈಲ್ ಆಪ್ ಮೂಲಕ ಬುಕ್ ಮಾಡಿದ ನಂತರ ಸಮೀಪದ ಅಧಿಕೃತ ಮಾರಾಟ ಕೇಂದ್ರಗಳಲ್ಲಿ ಗೊಬ್ಬರ ಪಡೆಯಲು ಅವಕಾಶವಿರುತ್ತದೆ.
ಈ ವ್ಯವಸ್ಥೆಯಲ್ಲಿ ರೈತರ ಆಧಾರ್ ಸಂಖ್ಯೆ, ಜಮೀನಿನ ವಿವರ ಹಾಗೂ ರೈತರ ಗುರುತಿನ ಮಾಹಿತಿಯನ್ನು ಸಂಯೋಜಿಸಲಾಗುತ್ತದೆ. ಇದರಿಂದ ರಸಗೊಬ್ಬರ ಮಾರಾಟದಲ್ಲಿ ನಿಖರತೆ ಕಾಪಾಡುವುದರ ಜೊತೆಗೆ ಅನಧಿಕೃತ ಮಾರಾಟ ಮತ್ತು ದುರುಪಯೋಗವನ್ನು ತಡೆಯಲು ಸಾಧ್ಯವಾಗುತ್ತದೆ. ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಕಸ್ಟಮರ್ ಸರ್ವಿಸ್ ಸೆಂಟರ್ , ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು , ಸಹಕಾರ ಸೊಸೈಟಿಗಳು ಹಾಗೂ ರಸಗೊಬ್ಬರ ಅಂಗಡಿಗಳ ಮೂಲಕ ರೈತರಿಗೆ ಸಹಾಯ ಮಾಡಲಾಗುತ್ತದೆ. ಅಲ್ಲದೆ, ಇಂಟಿಗ್ರೇಟೆಡ್ ಫರ್ಟಿಲೈಸರ್ ಮ್ಯಾನೇಜ್‌ಮೆಂಟ್ ಸಿಸ್ಟಮ್  ಮೂಲಕ ರಸಗೊಬ್ಬರ ದಾಸ್ತಾನು, ವಿತರಣಾ ಸಾಗಾಣಿಕೆ ಮತ್ತು ಸರಬರಾಜಿನ ಸಂಪೂರ್ಣ ನಿರ್ವಹಣೆ ಹಾಗೂ ಪರಿಶೀಲನೆ ನಡೆಸಲಾಗುತ್ತದೆ.ಆಧಾರ್ ಮೊಬೈಲ್ ರಸಗೊಬ್ಬರ ಟ್ರ‍್ಯಾಕ್ ವ್ಯವಸ್ಥೆಯ ಮೂಲಕ ವಿತರಿಸಲಾದ ರಸಗೊಬ್ಬರದ ಪ್ರಮಾಣ ಮತ್ತು ವಿವರಗಳನ್ನು ನಿಖರವಾಗಿ ದಾಖಲಿಸಲಾಗುತ್ತದೆ. ಸಬ್ಸಿಡಿ ದರದಲ್ಲಿ ದೊರೆಯುವ ರಸಗೊಬ್ಬರವನ್ನು ಅರ್ಹ ರೈತರಿಗೆ ಮಾತ್ರ ತಲುಪಿಸುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.ಗೊಬ್ಬರ ಖರೀದಿ ಪ್ರಕ್ರಿಯೆ: ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಆಪ್ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆಯನ್ನು ನಮೂದಿಸಿ ಅಗತ್ಯ ಪರಿಶೀಲನೆ ಪೂರ್ಣಗೊಳಿಸಿದ ನಂತರ ರೈತರ ಗುರುತಿನ ವಿವರಗಳು ಲಭ್ಯವಾಗುತ್ತವೆ. ಆಪ್‌ನಲ್ಲಿ ಲಭ್ಯವಿರುವ ಬೆಳೆ ಮತ್ತು ಜಮೀನಿನ ವಿವರಗಳ ಆಧಾರದ ಮೇಲೆ 2ರಿಂದ 3 ದಿನಗಳ ಅವಧಿಯಲ್ಲಿ ಅಗತ್ಯವಿರುವ ಗೊಬ್ಬರವನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಬುಕಿಂಗ್ ಮಾಡಿದ ನಂತರ ದೊರೆಯುವ ಕ್ಯೂಆರ್ ಕೋಡ್  ಅನ್ನು ಗೊಬ್ಬರದ ಅಂಗಡಿಯಲ್ಲಿ ಸ್ಕ್ಯಾನ್ ಮಾಡಿಸಿ ಗೊಬ್ಬರ ಪಡೆಯಬಹುದು. ರೈತರು ಮೊಬೈಲ್ ಬಳಕೆಯಲ್ಲಿ ತೊಂದರೆ ಅನುಭವಿಸಿದಲ್ಲಿ ಸಮೀಪದ ಅಧಿಕೃತ ಗೊಬ್ಬರ ಮಾರಾಟ ಕೇಂದ್ರ, ಕಸ್ಟಮರ್ ಸರ್ವಿಸ್ ಸೆಂಟರ್ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಾಯ ಪಡೆಯಬಹುದಾಗಿದೆ.ಈ ಡಿಜಿಟಲ್ ವ್ಯವಸ್ಥೆಯ ಮೂಲಕ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ರೈತರಿಗೆ ಸಕಾಲದಲ್ಲಿ ಗೊಬ್ಬರ ದೊರೆಯಲು ಹಾಗೂ ಸಬ್ಸಿಡಿ ದುರುಪಯೋಗ ತಡೆಗಟ್ಟಲು ಸಹಕಾರಿಯಾಗಲಿದೆ. ಆದ್ದರಿಂದ ಜಿಲ್ಲೆಯ ರೈತರು ಹೊಸ ವ್ಯವಸ್ಥೆಯ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಇದರ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಅವರು 
ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST