LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

ಚುನಾವಣಾ ಕರ್ತವ್ಯದಲ್ಲಿ ಪಾರದರ್ಶಕತೆ, ತಟಸ್ಥತೆ ಕಾಪಾಡಿ: ಚುನಾವಣಾ ವೀಕ್ಷಕ ಡಾ.ಪಿ.ಸಿ.ಜಾಫರ್


ಚಿಕ್ಕಬಳ್ಳಾಪುರ: ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್‌ಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆ-2026ರ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಲೋಪಗಳಿಗೆ ಅವಕಾಶ ನೀಡದೆ, ಪಾರದರ್ಶಕತೆ ಹಾಗೂ ತಟಸ್ಥತೆಯನ್ನು ಕಾಪಾಡಿಕೊಂಡು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಬಿ.ಎಂ.ಆರ್.ಸಿ.ಎಲ್. ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಚುನಾವಣಾ ವೀಕ್ಷಕ ಡಾ. ಪಿ.ಸಿ.ಜಾಫರ್ ಅವರು ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ್‌ನ ಸರ್ ಎಂ.ವಿ. ಸಭಾಂಗಣದಲ್ಲಿ ಶುಕ್ರವಾರ ಪಿಆರ್‌ಒ, ಎಪಿಆರ್‌ಒ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ 
ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಮಹತ್ವದ್ದಾಗಿದ್ದು, ಮತದಾನದಿಂದ ಹಿಡಿದು ಮತ ಎಣಿಕೆಯವರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.  ಚುನಾವಣಾ ಆಯೋಗದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಎಲ್ಲರೂ ನಿಪÀ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಈ ಹಿಂದೆ ತಾವು ಎಷ್ಟೇ ಚುನಾವಣೆಗಳ ಕರ್ತವ್ಯಗಳನ್ನು ನಿರ್ವಹಿಸಿ ಅನುಭವವಿದ್ದರೂ ಸಹ ಪ್ರಸ್ತುತದ ಚುನಾವಣೆಯ ನಿಯಮಗಳನ್ನು ಅರಿಯುವುದು ಅತ್ಯಗತ್ಯ. ಯಾವುದೇ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ತರಬೇತಿ ಮತ್ತು ವಿಷಯದ ಕುರಿತು ಸಂಪೂರ್ಣ ಅರಿವು ಅಗತ್ಯ. ಮಾಸ್ಟರ್ ತರಬೇತುದಾರರು ನೀಡುವ ತರಬೇತಿಯನ್ನು ಗಮನವಿಟ್ಟು ಆಲಿಸುವುದರ ಜೊತೆಗೆ, ಚುನಾವಣಾ ಆಯೋಗದ ಕೈಪಿಡಿಗಳನ್ನು  ಓದುವ ಮೂಲಕ ಚುನಾವಣಾ ಪ್ರಕ್ರಿಯೆಯ ಕುರಿತು ಸಮಗ್ರ ಜ್ಞಾನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಶಸ್ತ್ಯ ಮತದಾನದ ಬಗ್ಗೆ ಅರಿವು ಅಗತ್ಯ: ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪ್ರಾಶಸ್ತ್ಯ ಮತದಾನ ಪದ್ಧತಿ ಅನುಸರಿಸಲಾಗುತ್ತದೆ. ಮತದಾರರು ತಮ್ಮ ಆದ್ಯತೆಯ ಆಧಾರದಲ್ಲಿ ಅಭ್ಯರ್ಥಿಗಳಿಗೆ 1, 2, 3 ಹೀಗೆ ಪ್ರಾಶಸ್ತ್ಯ ಸೂಚಿಸಬಹುದು. ಆದರೆ, ಒಂದಕ್ಕಿAತ ಹೆಚ್ಚು ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯವಾಗಿ ?1? ಎಂದು ಗುರುತಿಸಿದರೆ ಅಥವಾ ನಿಯಮಾನುಸಾರ ಅಗತ್ಯವಿರುವ ರೀತಿಯಲ್ಲಿ ಮತದಾನ ಮಾಡದಿದ್ದರೆ ಮತ ಅಸಿಂಧುವಾಗುವ ಸಾಧ್ಯತೆಯಿದೆ. ಆದ್ದರಿಂದ ಮತದಾರರಿಗೆ ಸರಿಯಾದ ಮಾರ್ಗದರ್ಶನ ನೀಡುವ ಜೊತೆಗೆ ಮತಪತ್ರಗಳ ನಿರ್ವಹಣೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಗೌಪ್ಯತೆ ಕಾಪಾಡಿ: ವಿಶೇಷವಾಗಿ ಮೂರನೇ ಮತಗಟ್ಟೆ ಅಧಿಕಾರಿ ಮತ್ತು ಪಿಆರ್‌ಒ ಮತಪತ್ರದ ಗೌಪ್ಯತೆಯನ್ನು ಕಾಪಾಡುವಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಚುನಾವಣಾ ಆಯೋಗ ಒದಗಿಸಿರುವ ಅಧಿಕೃತ ಪೆನ್ನನ್ನೇ ಮತದಾನಕ್ಕೆ ಬಳಸಬೇಕು. ಪ್ರತಿಯೊಬ್ಬ ಮತದಾರರ ಗುರುತನ್ನು ನಿಯಮಾನುಸಾರ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.ಜಿಲ್ಲಾಧಿಕಾರಿ ಜಿ. ಪ್ರಭು ಅವರು ಮಾತನಾಡಿ, ಇಂದಿನ ತರಬೇತಿಯು ಚುನಾವಣಾ ಕರ್ತವ್ಯ ನಿರ್ವಹಿಸಲು ಅಗತ್ಯವಾದ ಸಂಪೂರ್ಣ ಜ್ಞಾನ ಮತ್ತು ಅರಿವು ಒದಗಿಸಲಿದೆ. ತರಬೇತಿಯಲ್ಲಿ ತಿಳಿಸುವ ನಿಯಮ ಹಾಗೂ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ಯಾವುದೇ ಲೋಪಗಳಿಗೆ ಅವಕಾಶ ನೀಡದೆ ಚುನಾವಣಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ನಿಯೋಜಿತ ಅಧಿಕಾರಿಗಳು 
ಮತ್ತು ಮತಗಟ್ಟೆ ಸಿಬ್ಬಂದಿಗೆ ಸೂಚಿಸಿದರು.ಅಕ್ಟೋಬರ್ 22ರಂದು ಜಿಲ್ಲಾ ಕೇಂದ್ರದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕೆ ಹಾಜರಾಗಬೇಕು. ಮತದಾನಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಪರಿಶೀಲನಾ ಪಟ್ಟಿಯ ಪ್ರಕಾರ ಪಡೆದು, ಅವುಗಳನ್ನು ಖಚಿತಪಡಿಸಿಕೊಂಡು ತಮ್ಮ ನಿಯೋಜಿತ ಮತಗಟ್ಟೆಗಳಿಗೆ ತೆರಳಿ ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಮಾಸ್ಟರ್ ತರಬೇತುದಾರ ಶಂಕರ್ ರೆಡ್ಡಿ ಅವರು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಕ್ರಿಯೆ, ಮತದಾನ ವಿಧಾನ ಹಾಗೂ ಅಧಿಕಾರಿಗಳ ಕರ್ತವ್ಯಗಳ ಕುರಿತು ವಿಸ್ತೃತವಾಗಿ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್ ಸೇರಿದಂತೆ ಸಂಬAಧಪಟ್ಟ ಪಿ.ಆರ್.ಒ, ಎ.ಪಿ.ಆರ್.ಒ ಹಾಗೂ ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST