ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೂ ಮೀರಿದ ದಾಖಲೆ ಬರೆಯುತ್ತಿರುವ ಚಿತ್ರತಂಡವನ್ನು ಯಶ್ ಖುದ್ದಾಗಿ ಭೇಟಿಗೆ ಆಹ್ವಾನಿಸಿದರು.
ಚಿತ್ರದ ಗೆಲುವಿಗೆ ಬೆನ್ನುತಟ್ಟಿ, ಮುಂದಿನ ಪಯಣಕ್ಕೆ ಹೃತ್ಪೂರ್ವಕ ಶುಭ ಹಾರೈಸಿದರು. ಈ ಅಭಿನಂದನೆ ಚಿತ್ರತಂಡಕ್ಕೆ ಹೊಸ ಹುರುಪು ಹಾಗೂ ಸ್ಫೂರ್ತಿ ತುಂಬಿದೆ.ಮನೋಜ್ ಕುಮಾರ್ ನಿರ್ದೇಶನ, ರಂಗಾಯಣ ರಘು, ಶ್ರೀರಾಮ್, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಟನೆ ಇಲ್ಲಿದೆ. ಭಾವನಾತ್ಮಕ ಕಥಾಹಂದರ ಹಾಗೂ ಕಲಾವಿದರ ಅದ್ಭುತ ಅಭಿನಯದಿಂದ ಕನ್ನಡಿಗರ ಹೃದಯ ಗೆದ್ದಿರುವ ಈ ಚಿತ್ರ, ಕೇವಲ ಬಾಯಿಮಾತಿನ ಪ್ರಚಾರದ ಬಲದಿಂದಲೇ ಚಿತ್ರಮಂದಿರಗಳತ್ತ ಜನಸಾಗರ ಹರಿದುಬರುವಂತೆ ಮಾಡಿದೆ.ಚಿತ್ರತಂಡದ ಶ್ರಮವನ್ನು ಗುರುತಿಸಿ ಬೆಂಬಲಿಸುವ ಯಶ್ ಅವರ ಈ ಪ್ರೋತ್ಸಾಹದ ನಡೆಗೆ ಚಿತ್ರತಂಡ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದೆ.ವಿಶೇಷವೆಂದರೆ, `ಜೈಲರ್ 2’ ಮತ್ತು `ರಣಬಾಲಿ’ಯಂತಹ ಭಾರೀ ಬಜೆಟ್ನ ಬಿಗ್ ರಿಲೀಸ್ಗಳು ಎದುರಾಗಿದ್ದರೂ `ಪ್ರೇಮದ ಊರಲಿ’ ಸಿನಿಮಾದ ಅಬ್ಬರ ಕಿಂಚಿತ್ತೂ ತಗ್ಗಿಲ್ಲ. ಘಟಾನುಘಟಿ ಪರಭಾಷಾ ಮತ್ತು ಸ್ವಭಾಷಾ ಚಿತ್ರಗಳ ಪೈಪೋಟಿಯ ನಡುವೆಯೂ ರಾಜ್ಯಾದ್ಯಂತ ಹೌಸ್ಫುಲ್ ಪ್ರದರ್ಶನಗಳನ್ನು ಕಾಣುತ್ತಾ ತನ್ನ ಗಟ್ಟಿ ನೆಲೆಯನ್ನು ಉಳಿಸಿಕೊಂಡಿದೆ.