LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಮೈ ಬೇಬಿ’ ಫಸ್ಟ್ ಲುಕ್ ಅನಾವರಣ

`
ಪ್ರೇಮಕಥೆಗಳನ್ನು ಬೆಳ್ಳಿತೆರೆಯ ಮೇಲೆ ವಿಭಿನ್ನವಾಗಿ ಕಟ್ಟಿಕೊಡುವಲ್ಲಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪ್ರೀತಮ್ ಗುಬ್ಬಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ `ಮೈ ಬೇಬಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್  ಬಿಡುಗಡೆಯಾಗಿದೆ. ನವ ಪ್ರತಿಭೆಗಳಾದ ಸುಮುಖ ಹಾಗೂ ಇಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ರಂಗನಾಥ್ ಕೆಂಪನಹಳ್ಳಿ ನಿರ್ಮಿಸುತ್ತಿದ್ದಾರೆ.
ಇಂದಿನ ತಲೆಮಾರಿನ ಯುವಪೀಳಿಗೆ ಪ್ರೀತಿ, ಜೀವನ, ಬಾಂಧವ್ಯ ಹಾಗೂ ಸಂಬAಧಗಳ ಬದಲಾಗುತ್ತಿರುವ ಸಮೀಕರಣಗಳನ್ನು ಹೇಗೆ ನೋಡುತ್ತದೆ ಎಂಬುದನ್ನು ಕೇಂದ್ರೀಕರಿಸಿ ಈ ಸಮಕಾಲೀನ ಪ್ರೇಮಕಥೆಯನ್ನು ಹೆಣೆಯಲಾಗಿದೆ. ತಮ್ಮದೇ ಆದ ನಿಲುವುಗಳು ಮತ್ತು ದೃಷ್ಟಿಕೋನಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳ ಪ್ರೇಮ ಪಯಣವನ್ನು ಚಿತ್ರದಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಡಲಾಗುತ್ತಿದ್ದು, ಇದು ಇಂದಿನ ಯುವ ಪ್ರೇಕ್ಷಕರಿಗೆ ಸುಲಭವಾಗಿ ಕನೆಕ್ಟ್ ಆಗುವಂತಿದೆ.ಚಿತ್ರದ ಬಹುತೇಕ ಭಾಗದ ಚಿತ್ರೀಕರಣವನ್ನು ಹಿಮಾಚಲ ಪ್ರದೇಶ ಹಾಗೂ ಮನಾಲಿಯ ಹಿಮಾವೃತ ರಮಣೀಯ ತಾಣಗಳಲ್ಲಿ ಸೆರೆಹಿಡಿಯಲಾಗಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಚಿತ್ರತಂಡ ಬೆಂಗಳೂರಿನತ್ತ ಮುಖ ಮಾಡಿದ್ದು, ನಗರದ ವಿಭಿನ್ನ ಪರಿಸರದಲ್ಲಿ ಅಂತಿಮ ಹಂತದ ಚಿತ್ರೀಕರಣವನ್ನು ಆರಂಭಿಸಲು ಭರದಿಂದ ಸಿದ್ಧತೆ ನಡೆಸುತ್ತಿದೆ. ಹಿಮಾಚಲ ಪ್ರದೇಶದ ನೈಸರ್ಗಿಕ ಸೊಬಗು ಮತ್ತು ಬೆಂಗಳೂರಿನ ಆಧುನಿಕ ಜೀವನಶೈಲಿಯ ಹಿನ್ನೆಲೆಯಲ್ಲಿ ಈ ಪ್ರೇಮಕಥೆ ತೆರೆದುಕೊಳ್ಳಲಿದೆ.ಚಿತ್ರಕ್ಕೆ ಪ್ರತಿಭಾವಂತ ತಂತ್ರಜ್ಞರ ತಂಡ ಬೆನ್ನೆಲುಬಾಗಿ ನಿಂತಿದ್ದು, ಅಭಿಲಾಷ್ ಕಲಾತಿ ಅವರ ಕಣ್ಮನ ಸೆಳೆಯುವ ಛಾಯಾಗ್ರಹಣ ಹಾಗೂ ಖ್ಯಾತ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಅವರ ಇಂಪಾದ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST