LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ರುಧಿರ್ವನ'ಕ್ಕೆ ರಾಜಾಶೀರ್ವಾದ 


 ಮೈಸೂರಿನ ಪ್ರತಿಭಾವಂತ ಚಿತ್ರ ತಂಡವೊಂದು ರೂಪಿಸಿರುವ ಕನ್ನಡದ ಜಾನಪದ ಹಾರರ್ ಚಿತ್ರ `ರುಧಿರ್ವನ’ ನವೆಂಬರನಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆ ದಿನಾಂಕವನ್ನು ಘೋಷಿಸುವ ಪೋಸ್ಟರ್ ಅನ್ನು  ಮಹಾರಾಜ  ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಅನಾವರಣಗೊಳಿಸಿದರು.ಚಿತ್ರದ ಬಿಡುಗಡೆ ಪೋಸ್ಟರ್ ಕೂಡ ತನ್ನದೇ ಆದ ವಿಶಿಷ್ಟ ಆಶಯವನ್ನು ಹೊಂದಿದೆ. ಇದರಲ್ಲಿ ದೇವಿ ಚಾಮುಂಡಿಯ ಎರಡು ವಿಭಿನ್ನ ಸ್ವರೂಪಗಳಾದ ರಕ್ಷಕ ಶಕ್ತಿ ಮತ್ತು ಸಂಹಾರಕ ಶಕ್ತಿಗಳನ್ನು ಪ್ರತಿಬಿಂಬಿಸಲಾಗಿದೆ. ಭಕ್ತರನ್ನು ಕಾಪಾಡುವ ತಾಯಿಯೇ ಅಧರ್ಮ ಮತ್ತು ದುಷ್ಟ ಶಕ್ತಿಗಳ ವಿರುದ್ಧ ಸಂಹಾರಕ್ಕೆ ಮುಂದಾಗುವ ಆದಿಶಕ್ತಿ ಎಂಬ  ಪರಿಕಲ್ಪನೆಯನ್ನು ಪೋಸ್ಟರ್ ಬಿಂಬಿಸುತ್ತದೆ.`ಸಲಹೋಳು ಅವಳೇ’ ಸಂಹಾರ ಮಾಡೋಳು ಅವಳೇ!? ಎಂಬ ಆಶಯದ ಮೂಲಕ, ಕರುಣೆ ಮತ್ತು ಉಗ್ರತೆ ಎರಡನ್ನೂ ತನ್ನೊಳಗೆ ಹೊಂದಿರುವ ದೇವಿಯ ಪರಮಶಕ್ತಿಯನ್ನು ಚಿತ್ರತಂಡ ಪರಿಚಯಿಸಲು ಮುಂದಾಗಿದೆ.
ಪ್ರಕೃತಿಯನ್ನು ಕಾಪಾಡುವ ಶಕ್ತಿಯಾಗಿ ದೇವಿಯನ್ನು ಚಿತ್ರಿಸುವುದರ ಜೊತೆಗೆ, ಪ್ರಕೃತಿಯ ಸಮತೋಲನವನ್ನು ನಾಶಮಾಡುವ ದುಷ್ಟ ಶಕ್ತಿಗಳ ವಿರುದ್ಧದ ಸಂಘರ್ಷವನ್ನೂ ಈ ಪೋಸ್ಟರ್ ಸಂಕೇತಿಸುತ್ತದೆ.ಅರಣ್ಯನಾಶ ಮತ್ತು ಪ್ರಕೃತಿಯ ಮೇಲಿನ ಮಾನವನ ದುರಾಸೆ ಚಿತ್ರದ ಪ್ರಮುಖ ಆಶಯಗಳಾಗಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ನಾಶಪಡಿಸುವ ಅಮಾನವೀಯ ಪ್ರವೃತ್ತಿಯನ್ನು ಪುರಾಣ ಮತ್ತು ಜಾನಪದದ ರೂಪಕಗಳೊಂದಿಗೆ ಬೆಸೆಯುವ ಮೂಲಕ, `ರುಧಿರ್ವನ’ ಕೇವಲ ಭಯಾನಕ ಅನುಭವಕ್ಕೆ ಸೀಮಿತವಾಗದೆ, ಪ್ರಕೃತಿ ಮತ್ತು ಮಾನವನ ನಡುವಿನ ಸಂಘರ್ಷದ ಕುರಿತು ಚಿಂತನೆಗೆ ಪ್ರೇರೇಪಿಸುವ ಪ್ರಯತ್ನ ಮಾಡುತ್ತದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST