LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಶ್ರೀಅನ್ನದಾನೀಶ್ವರ ಮಹಾತ್ಮೆ’ ಟ್ರೇಲರ್ ಅನಾವರಣ


ಮಮತಾ ಎನ್. ಎಸ್. ನಿರ್ಮಾಣದ, ಗೌರಿ ಎಲ್. ರಾಮೇಗೌಡ ಅವರ ನಿರ್ದೇಶನದ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಾ||ಅನ್ನದಾನೀಶ್ವರ ಸ್ವಾಮಿಗಳ ಜೀವನ ಚರಿತ್ರೆ ಆಧಾರಿತ   “ಶ್ರೀಅನ್ನದಾನೀಶ್ವರ ಮಹಾತ್ಮೆ” ಚಿತ್ರದ ಟ್ರೇಲರ್ ಅನಾವರಣ ಸಮಾರಂಭ ಇತ್ತೀಚೆಗೆ  ನಡೆಯಿತು. “ ಚಿತ್ರದ ಟ್ರೇಲರ್ ಅನ್ನು ಇಟಗಿ ಶ್ರೀಗಳು ಬಿಡುಗಡೆ ಮಾಡಿದರು.”ಶ್ರೀ ಅನ್ನದಾನೀಶ್ವರ ಸ್ವಾಮಿಗಳ” ಕುರಿತು ಮಾತುಗಳನ್ನಾಡಿ, ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು .ಅಂತಃಪುರ ಶ್ರೀಗಳು ಸಾನಿಧ್ಯ ವಹಿಸಿ ಜ್ಞಾನ ಮೇರುವಾಗಿ ಹಾಡನ್ನು ಬಿಡುಗಡೆ ಮಾಡಿ ಕುಟುಂಬ ಸಮೇತ ಆಗಮಿಸಿ ಈ ಚಿತ್ರವನ್ನು ವೀಕ್ಷಿಸಿ  ಎಂದರು. ನಟ ಅಭಿಜಿತ್  ಅನ್ನದಾನೀಶ್ವರ ಶ್ರೀಗಳ ಪಾತ್ರ ನಿರ್ವಹಿಸಿದ್ದು, ಮತ್ತು ಅನ್ನದಾನೀಶ್ವರ ಶಾಖಾಮಠದ ಕುಕುನೂರಿನ ಡಾ||ಮಹದೇವ ದೇವರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಸಂಜಯ್ ಕುಮಾರ್ ಬೇವಿನಾಳ್ ಅವರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿರುವ ಈ ಚಿತ್ರಕ್ಕೆ  ವಿ.ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದಾರೆ.ವೇದಿಕೆಯಲ್ಲಿ ನಿರ್ದೇಶಕಿ ಗೌರಿ ಅವರು ಮಾತನಾಡಿ, ಹಲವಾರು ಸಿನಿಮಾಗಳು, ಧಾರಾವಾಹಿಗಳಲ್ಲಿ ನಟಿಸಿರುವ ನನಗೆ ನಿರ್ದೇಶಕಿಯಾಗಿ ಇದು ಮೊದಲ ಚಿತ್ರ. ನನಗೆ ದೈವದ ಬಗ್ಗೆ ಒಲವು ಜಾಸ್ತಿ. ರಾಯರ ಪರಮ ಭಕ್ತೆ. ಅಭಿಜಿತ್ ಅವರು ಅನ್ನದಾನೀಶ್ವರ ಸ್ವಾಮಿಗಳ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. 100ಕ್ಕೂ ಹೆಚ್ಚು ಸ್ವಾಮಿಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ,  ಸಿದ್ದಗಂಗಾ ಮತ್ತು ಅನ್ನದಾನೀ ಶ್ವರ ಮಠಧ 25 ಸಾವಿರ ಮಕ್ಕಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.   ಕೊಪ್ಪಳ, ಶಿವಯೋಗ ಮಂದಿರ   ಮುಂಡರಗಿ  ಬೆಂಗಳೂರು, ಶ್ರೀರಂಗಪಟ್ಟಣ ಸಿದ್ದಗಂಗಾ ಮಠದ ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎಂದರು. ನಾಯಕ ನಟ ಅಭಿಜಿತ್ ಮಾತನಾಡಿ ಈ ಚಿತ್ರದಲ್ಲಿ ಎಲ್ಲವನ್ನೂ ಗುರುಗಳು ನನ್ನ ಕೈಯಿಂದ ಮಾಡಿಸಿದ್ದಾರೆ. ಅದು ಗುರುಗಳ ಆಶೀರ್ವಾದ ಹಾಗೂ ಇಚ್ಛೆ ಆಗಿತ್ತು. ಗೌರಿ ಅವರು ನನ್ನಿಂದ ತುಂಬಾ ಚೆನ್ನಾಗಿ ಪಾತ್ರ ಮಾಡಿಸಿದ್ದಾರೆ. ಇಂಥ ಕಥೆ ಮಾಡಬೇಕಾದರೆ ನೇಟಿವಿಟಿ ಬಹಳ ಮುಖ್ಯ.  ಛಾಯಾಗ್ರಾಹಕರಾದ  ಮೈಸೂರು ಸಿದ್ದರಾಜು ಮತ್ತು ಶಿವಶರಣ ವಿ ಸುಗ್ನಳ್ಳಿ ಅದ್ಭುತವಾಗಿ ಚಿತ್ರವನ್ನು ಸೆರೆ ಹಿಡಿದಿದ್ದು  ವಿ.ಮನೋಹರ್ ಸಂಗೀತ ಸಂಯೋಜನೆ ಅದ್ಭುತವಾಗಿದೆ. ಎಂದರು.  ನಿರ್ಮಾಪಕಿ ಮಮತಾ ಎನ್ ಎಸ್ ಆಗಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬನ್ನಿ... ಜಾನಪದ ಉಳಿಯಲಿ ಕಲೆಗಳು ಚಿರನೂತನವಾಗಲಿಜಾನಪದ ಕಲಾವಿದರ ಮಾಶಾಸನ ಹೆಚ್ಚಳ, ವಯೋಮಿತಿ ಕಡಿತಕ್ಕೆ ಸಿಎಂ ಜೊತೆ ಚರ್ಚೆ: ಉಮಾಶ್ರೀ2028ರ ಚುನಾವಣೆಯಲ್ಲಿ ರೈತ ವಿರೋಧಿ ಕಾಂಗ್ರೆಸ್ಸಿಗರನ್ನು ಜನರೇ ಮನೆಗೆ ಕಳುಹಿಸಲಿದ್ದಾರೆ: ನಿಖಿಲ್ ಕುಮಾರಸ್ವಾಮಿ`ಶ್ರೀಅನ್ನದಾನೀಶ್ವರ ಮಹಾತ್ಮೆ’ ಟ್ರೇಲರ್ ಅನಾವರಣಧಗೆ ಚಿತ್ರದಲ್ಲಿ ಸುರಕ್ಷ ಚಹಾ ಪಾತ್ರವಾಗಿ ಮೂಡಿಬಂದಿದೆಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ `ಮಹಿಮಾ’ ಚಿತ್ರ ನವದೆಹಲಿಯಲ್ಲಿ ಡಿ.ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಸಂಭ್ರಮಕನ್ನಡ ಸಿನಿ ಬದುಕಿನ ಒಳನೋಟ ಶುಭಂ ಪತ್ರಕರ್ತರು ಗಣೇಶ್ ಕಾಸರಗೋಡುರಚಿತಾ ರಾಮ್ ಬರ್ತ್ಡೇ; ಅಭಿಮಾನಿಗಳ ಸಂಭ್ರಮ ನಟಿ `ಡಿಂಪಲ್ ಕ್ವೀನ್’ ರಚಿತಾ ರಾಮ್  ಜನ್ಮದಿನದ ಸಂಭ್ರಮರೋಲೆಕ್ಸ್’ ಈಗ ‘ರಿಲಾಕ್ಸ್’