`ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ `ಗಾ ಗರಗ’ ಗೀತೆ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಜನಪ್ರಿಯ ಗಾಯಕ ಕೈಲಾಶ್ ಖೇರ್ ಜೀವ ತುಂಬಿದ್ದಾರೆ. ಈ ಗೀತೆಯ ರಚನೆಕಾರ ಪ್ರಮೋದ್ ಮರವಂತೆ. ನಾಯಕ ನಿರೂಪ್ ಭಂಡಾರಿಗೆ ನಾಯಕಿಯರಾಗಿ ಬೃಂದಾ ಆಚಾರ್ಯ ಹಾಗೂ ಅಂಕಿತಾ ಅಮರ್ ಅಭಿನಯಿಸಿದ್ದಾರೆ. ಶಿವಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿ ಕುಮಾರ್, ಮಧುಸೂಧನ್ ರಾವ್, ಸ್ವಾತಿ ಗುರುದತ್, ಅಶ್ವಿನ್ ಹಾಸನ್, ಅಭಿಷೇಕ್ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.