ನಟ ಗುರುನಂದನ್ ಸ್ನೇಹಿತರೊಂದಿಗೆ ನಿರ್ಮಿಸಿರುವ, ಸುಮಂತ್ ನಿರ್ದೇಶನದ `ಒಖ ಜಾಕ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತು. ಗುರುನಂದನ್ ಹಾಗೂ ನಟಿ ತಪಸ್ವಿನಿ ಪೂಣಚ್ಚ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರ ಇದೇ ಡಿಸೆಂ 4ರಂದು ಬಿಡುಗಡೆಯಾಗಲಿದೆ.ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಶಾಸಕರಾದ ಸಿ.ಟಿ. ರವಿ, ಡಾ. ಅಶ್ವತ್ಥ್ ನಾರಾಯಣ್, ಉದ್ಯಮಿ ಪ್ರಕಾಶ್ ಶೆಟ್ಟಿ, ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ದೇಶಕ ಸುಮಂತ್ ಮಾತನಾಡಿ ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಈಡೇರಿದೆ. ಸಾಥ್ ನೀಡಿದತಂಡದ ಸಹಕಾರಕ್ಕೆ ನಾನು ಋಣಿ. ಸದಭಿರುಚಿಯ ಚಿತ್ರ ರೂಪಿಸಲು ಸಾಧ್ಯವಾಗಿದೆ. ಎಂದರು. ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ಗುರುನಂದನ್ ಮಾತನಾಡಿ, ಸದಭಿರುಚಿಯ ಕೌಟುಂಬಿಕ ಚಿತ್ರವನ್ನು ನಿರ್ಮಿಸಿದ್ದೇವೆ. ಕುಟುಂಬ ಸಮೇತ ನೋಡಬಹುದ ಚಿತ್ರವಿದು ಎಂದರು. ನಾಯಕಿ ತಪಸ್ವಿನಿ ಪೂಣಚ್ಚ, ಹಿರಿಯ ನಟ ರಂಗಾಯಣ ರಘು ಸೇರಿದಂತೆ ಹಲವು ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.