ಯೋಗರಾಜ್ ಭಟ್ ಸಾಹಿತ್ಯಕ್ಕೆ ಭರ್ಜರಿ ರೆಸ್ಪಾನ್ಸ್ಡಾಲಿ ಧನಂಜಯ್ ಅಭಿನ ಯದ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾ ಡಿಸೆಂಬರ್ 24ರಂದು ತೆರೆಗೆ ಬರಲಿದೆ.
‘ಹೋಗೋಣ ಬಾರಾ ಮೆಕ್ಸಿಕೋ’ ಎಂಬ ಲಿರಿಕಲ್ ವಿಡಿಯೋ ಸಾಂಗ್ ಇದೀಗ ‘ಆನಂದ್ ಆಡಿಯೋ’ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರ ಲೇಖನಿಯಲ್ಲಿ ಮೂಡಿಬಂದಿರುವ ಈ ಹಾಡು ಗಮನ ಸೆಳೆಯುತ್ತಿದೆ. “ಬಾರಾ ಬೇಬಿ ಬಾರಾ ಬೇಬಿ.. ಪ್ಯಾರು ಮಾಡೋಣು.. ತುಟಿಗೆ ತುಟಿ ತಾಕಿಸೋಣು.. ನೌವ್ನ್ ಆಗಿದ್ದು ಆಗೋಗ್ಲಿ.. ಬಾರಾ ಬಾಬು ಬಾರಾ ಬಾಬು ಸೇರಿ ಹಾಡೋಣು.. ಕೊಟಿಗಿ ಕತ್ಲಾಗ ಮೀಟ್ ಆಗೋಣು..” ಎಂಬುದು ಭಟ್ಟರ ಸಾಲುಗಳು.. ನಾಯಕ ಡಾಲಿ ಧನಂಜಯ್ ಮತ್ತು ನಾಯಕಿ ರೀಷ್ಮಾ ನಾಣಯ್ಯ ಅವರ ಜೋಡಿ ಮೋಡಿ ಮಾಡಿದೆ. ಇಬ್ಬರ ಕೆಮಿಸ್ಟಿç ಹಾಗೂ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಅಭಿಮಾನಿಗಳಿಗೆ ಮುದ ನೀಡಲಿದೆ.ನಟಿ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದಾರೆ. ನಟ ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಈ ಚಿತ್ರ ನಿರ್ಮಿಸಿದ್ದಾರೆ.