LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಧಗೆ ಚಿತ್ರದಲ್ಲಿ ಸುರಕ್ಷ ಚಹಾ ಪಾತ್ರವಾಗಿ ಮೂಡಿಬಂದಿದೆ


`ಧಗೆ’ ಚಿತ್ರದ ಪೋಸ್ಟರ್ ಹಾಗೂ `ಸುರಕ್ಷ ಟೀ’ ಫ್ರಾಂಚೈಸಿ ಮತ್ತು ಡಿಸ್ಟಿçಬ್ಯೂಟರ್ ಅನಾವರಣ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೀ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಗಂಗಾವತಿ ಪ್ರಾಣೇಶ್, ನಟ ನವೀನ್ ಶಂಕರ್, ನಟಿ ಮಮತಾ ರಾವುತ್, ಕನ್ನಡ ಸೇನೆ ಅಧ್ಯಕ್ಷ ಕುಮಾರ್, ಚಾಣಾಕ್ಯ  ಎನ್.ಎಂ.ಬಿರೆದಾರ್, ಬಸವರಾಜ ಮಹಾಮನಿ, ಶ್ರೀಮತಿ ಲತಾ ಕುಂದರಗಿ ಮುಂತಾದವರು ಉಪಸ್ತಿತರಿದ್ದರು.ನಂತರ ಮಾತನಾಡಿದ ಸ್ವಾಮೀಜಿಗಳು `ಧಗೆ’ ಚಿತ್ರವು ಯಶಸ್ವಿಯಾಗಲಿ. ನನ್ನ ಎಪ್ಪತ್ತೈದು ವರ್ಷಗಳಲ್ಲಿ ಇಲ್ಲಿಯವರೆಗೂ ಚಹಾ ಕುಡಿದಿಲ್ಲ. ಭಕ್ತ ಅರವಿಂದ ಪಾಟೀಲ ಉತ್ಪಾದನೆ ಮಾಡಿದ ಸುರಕ್ಷ ಚಹಾ ಕುಡಿಯಲು ಕೇಳಿಕೊಂಡರು. ಅವರ ಕೋರಿಕೆಗೆ ಬೇಸರ ಪಡಿಸದೆ ಚಹಾ ಸೇವಿಸಿದೆ. ತುಂಬ ರುಚಿಯಾಗಿತ್ತು. ಅಂದಿನಿಂದ ಇದೇ ಟೀಯನ್ನು ಕುಡಿಯುತ್ತಿದ್ದೇನೆ ಎಂದರು.ಚಿತ್ರಕ್ಕೆ ಕಥೆ,ಚಿತ್ರಕಥೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕೆರ್ನಳ್ಳಿ ಈಶ್ವರ್ ಹೇಳುವಂತೆ ಸಿನಿಮಾದಲ್ಲಿ `ಸುರಕ್ಷ ಚಹಾ’ ಒಂದು ಪಾತ್ರವಾಗಿ ಮೂಡಿಬಂದಿದೆ. ಇದನ್ನು ಚಿತ್ರೀಕರಣದಲ್ಲಿ ಬಳಸಲು ಅನುಮತಿ ನೀಡಿದ್ದಕ್ಕೆ ಅರವಿಂದ ಪಾಟೀಲ್‌ಗೆ ಕೃತಜ್ಞತೆಯನ್ನು ಸಲ್ಲಿಸಿದರು.ನಾಯಕನಾಗಿ ಕಾಣಿಸಿಕೊಂಡಿರುವ ಡಾ.ಸಂಗಮೇಶ ಉಪಾಸೆ ಪಾತ್ರದ ಪರಿಚಯ ಮಾಡಿಕೊಂಡು, ಸುರಕ್ಷ ಟೀ ಸಿನಿಮಾ ಕಥೆಯ ಭಾಗವಾಗಿದೆ. . ನಮ್ಮ ಉತ್ತರ ಕರ್ನಾಟಕದಲ್ಲಿ ಯಾರೇ ಬಂದರೂ ಎಲ್ಲೇ ಹೋದರೂ ಮೊದಲು ಚಹಾ ಕುಡಿಯುತ್ತಾರೆ. ಚಿತ್ರವು ಅಲ್ಲಿನ ಭಾಷೆ, ಸಂಸ್ಕçತಿಯನ್ನು ಬಿಂಬಿಸುತ್ತದೆ. ತಮಗೆಲ್ಲರಿಗೂ ಇಷ್ಟವಾಗುತ್ತದೆಂದು ನಂಬಿರುತ್ತೇನೆ ಎಂದರು.ಸಿನಿಮಾಕ್ಕೆ ಸಹಕಾರ ನೀಡಿರುವ ಅರವಿಂದ ಪಾಟೀಲ್ ಮಾತನಾಡಿ, ಎಲ್ಲರೂ ಸರ್ಕಾರಿ ನೌಕರಿ ಅಂತ ಹೋದರೆ ಕಷ್ಟವಾಗುತ್ತದೆ. ಬದುಕಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಗೆಯ ಸಾರಥಿ ಗಂಗಾವತಿ ಪ್ರಾಣೇಶ್ ಸ್ಪೂರ್ತಿಯಿಂದಲೇ ಸುರಕ್ಷ ಟೀ ಶುರು ಮಾಡಿದೆ. ಸ್ವಾಮಿಗಳ ಆರ್ಶಿವಾದರಿಂದ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ. ಅದರಿಂದಲೇ ಫ್ರಾಂಚೈಸಿ ತೆರೆದು ವಿತರಕರಿಗೆ ಜವಬ್ದಾರಿ ನೀಡುತ್ತಿದ್ದೇನೆ. ಇದರಿಂದ ನಿರುದ್ಯೋಗಿಗಳಿಗೆ ಕೆಲಸ ಸಿಕ್ಕಂತೆ ಆಗುತ್ತದೆ ಎಂದರು.
ನಮ್ಮ ಕಾಲದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ತಂಗಡಕಿ ಟೀ ಕೊಡುತ್ತಿದ್ದರು. ಕಾಲ ಬದಲಾದಂತೆ ಹಲವು ಕಂಪೆನಿಗಳ ಟೀ ಬಂದಿದೆ. ಸುರಕ್ಷ ಚಹಾ ರುಚಿ ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಹೆಸರಲ್ಲೇ ಸುರಕ್ಷ ಅಡಗಿದೆ. ಸಮಾಜ, ಸಮುದಾಯದಿಂದ ದೂರವಾದ ನನಗೆ ಸ್ವಾವಲಂಬಿಯಾಗಲು ಜಾನಪದ ಕಲೆ ಸಹಾಯ ಮಾಡಿತು. ಅದರಿಂದಲೇ ಹಳ್ಳಿಯಿಂದ ದಿಲ್ಲಿವೆರೆಗೂ ಗುರುತಿಸಿಕೊಂಡೆ. ಸಿನಿಮಾದಲ್ಲಿ ಅಮ್ಮನಾಗಿ ಕಾಣಿಸಿಕೊಂಡಿದ್ದೇನೆ. ಸುರಕ್ಷ ಚಹಾ ಸನ್ನಿವೇಶಗಳಲ್ಲಿ ಹಾಸು ಹೊಕ್ಕಾಗಿದೆ ಎಂದು ಪದ್ಮಶ್ರೀ ಮಂಜಮ್ಮ ಜೋಗತಿ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬನ್ನಿ... ಜಾನಪದ ಉಳಿಯಲಿ ಕಲೆಗಳು ಚಿರನೂತನವಾಗಲಿಜಾನಪದ ಕಲಾವಿದರ ಮಾಶಾಸನ ಹೆಚ್ಚಳ, ವಯೋಮಿತಿ ಕಡಿತಕ್ಕೆ ಸಿಎಂ ಜೊತೆ ಚರ್ಚೆ: ಉಮಾಶ್ರೀ2028ರ ಚುನಾವಣೆಯಲ್ಲಿ ರೈತ ವಿರೋಧಿ ಕಾಂಗ್ರೆಸ್ಸಿಗರನ್ನು ಜನರೇ ಮನೆಗೆ ಕಳುಹಿಸಲಿದ್ದಾರೆ: ನಿಖಿಲ್ ಕುಮಾರಸ್ವಾಮಿ`ಶ್ರೀಅನ್ನದಾನೀಶ್ವರ ಮಹಾತ್ಮೆ’ ಟ್ರೇಲರ್ ಅನಾವರಣಧಗೆ ಚಿತ್ರದಲ್ಲಿ ಸುರಕ್ಷ ಚಹಾ ಪಾತ್ರವಾಗಿ ಮೂಡಿಬಂದಿದೆಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ `ಮಹಿಮಾ’ ಚಿತ್ರ ನವದೆಹಲಿಯಲ್ಲಿ ಡಿ.ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಸಂಭ್ರಮಕನ್ನಡ ಸಿನಿ ಬದುಕಿನ ಒಳನೋಟ ಶುಭಂ ಪತ್ರಕರ್ತರು ಗಣೇಶ್ ಕಾಸರಗೋಡುರಚಿತಾ ರಾಮ್ ಬರ್ತ್ಡೇ; ಅಭಿಮಾನಿಗಳ ಸಂಭ್ರಮ ನಟಿ `ಡಿಂಪಲ್ ಕ್ವೀನ್’ ರಚಿತಾ ರಾಮ್  ಜನ್ಮದಿನದ ಸಂಭ್ರಮರೋಲೆಕ್ಸ್’ ಈಗ ‘ರಿಲಾಕ್ಸ್’