LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಇಂದಿನಿಂದ ಡೆನ್ಮಾರ್ಕ್ ಓಪನ್: ಪಿವಿ ಸಿಂಧು, ಲಕ್ಷ್ಯ ಸೇನ್ ಮೇಲೆ ಭಾರತದ ನಿರೀಕ್ಷೆ


ಒಡೆನ್ಸೆ: ಒಟ್ಟು 9.08 ಕೋಟಿ ರೂ. ಬಹುಮಾನ ಮೊತ್ತದ ಡೆನ್ಮಾರ್ಕ್ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಶುರುವಾಗಲಿದ್ದು, ಭಾರತ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ ಇಟ್ಟಿದೆ. ಆದರೆ ಇವರಿಬ್ಬರೂ ಮೊದಲ ಸುತ್ತಿನಿಂದಲೇ ಕಠಿಣ ಸವಾಲು ಎದುರಿಸಲಿದ್ದಾರೆ.ಮಾಜಿ ವಿಶ್ವ ಚಾಂಪಿಯನ್ ಹಾಗೂ ಹಾಲಿ ವಿಶ್ವ ನಂ. 11 ಪಿವಿ ಸಿಂಧು ಮೊದಲ ಸುತ್ತಿನಲ್ಲಿ ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್ ಆನ್ ಸೆ-ಯಂಗ್ ವಿರುದ್ಧ ಆಡುವ ಕಠಿಣ ಸವಾಲು ಹೊಂದಿದ್ದಾರೆ. ಮತ್ತೊಂದೆಡೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ. 10 ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲೇ 3ನೇ 
ಶ್ರೇಯಾಂಕಿತ ಚೌ ಟಿಯೆನ್ ಚೆನ್ ವಿರುದ್ಧ ಆಡಲಿದ್ದಾರೆ.ಕಳೆದ ಜುಲೈನಲ್ಲಿ ಜಪಾನ್ ಓಪನ್ ಗೆದ್ದು ಬೀಗಿದ್ದ 31 ವರ್ಷದ ಸಿಂಧು ಬಳಿಕ ಏಷ್ಯನ್ ಗೇಮ್ಸ್ ಮತ್ತು ಆರ್ಕ್ಟಿಕ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದ್ದರು. ದಕ್ಷಿಣ ಕೊರಿಯಾ ತಾರೆ ಆನ್ ಸೆ-ಯಂಗ್ ವಿರುದ್ಧದ ಕಳೆದ 10 ಮುಖಾಮುಖಿಯಲ್ಲೂ ಸೋತಿರುವ ಕೆಟ್ಟ ದಾಖಲೆಯನ್ನೂ ಸಿಂಧು ಹೊಂದಿದ್ದಾರೆ. ತನ್ವಿ ಶರ್ಮ, ಅಶ್ಮಿತಾ ಚಲಿಹಾ, ದೇವಿಕಾ ಸಿಹಾಗ್ ಮತ್ತು ಉನ್ನತಿ ಹೂಡ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿರುವ ಭಾರತದ ಯುವ ಆಟಗಾರ್ತಿಯರಾಗಿದ್ದಾರೆ. 25 ವರ್ಷದ ಲಕ್ಷ್ಯ ಸೇನ್ ಏಷ್ಯಾಡ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ಬಳಿಕ ಮೊದಲ ಟೂರ್ನಿ ಆಡಲಿದ್ದು, ತೈವಾನ್‌ನ ಚೆನ್ ವಿರುದ್ಧ ಗೆಲ್ಲಬೇಕಾದರೆ ಶ್ರೇಷ್ಠ ಆಟವನ್ನೇ ಪ್ರದರ್ಶಿಸಬೇಕಾಗಿದೆ.ಕನ್ನಡಿಗ ಆಯುಷ್ ಶೆಟ್ಟಿ ಮೊದಲ ಸುತ್ತಿನಲ್ಲಿ ಇಂಡೋನೇಷ್ಯಾದ ಅಲ್ವಿ ರ್ಹಾನ್ ವಿರುದ್ಧ ಆಡಲಿದ್ದಾರೆ. ವಿಶ್ವ ಚಾಂಪಿಯನ್ಷಿಪ್‌ನಲ್ಲಿ ರ್ಹಾನ್ ವಿರುದ್ಧ ಕಂಡಿದ್ದ 
ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಆಯುಷ್‌ಗೆ ಇದೆ. 2017ರ ಆವೃತ್ತಿಯ ಚಾಂಪಿಯನ್ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಫ್ರಾನ್ಸ್ನ ಅನೌಡ್ ಮೆರ್ಕೆ್ಲ ವಿರುದ್ಧ ಸೆಣಸಲಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಮಾಜಿ ವಿಶ್ವ ನಂ. 1 ಸಾತ್ವಿಕ್ ಸಾಯಿರಾಜ್-
ಚಿರಾಗ್ ಶೆಟ್ಟಿ ಜೋಡಿ ಕಣಕ್ಕಿಳಿಯಲಿದ್ದು, ಏಷ್ಯಾಡ್‌ನಲ್ಲಿ ಮೊದಲ ಸುತ್ತಿನಲ್ಲೇ ಕಂಡ ಆಘಾತದಿಂದ ಪುಟಿದೆದ್ದು ಬರುವ 
ಹಂಬಲದಲ್ಲಿದೆ. ಮಹಿಳಾ ಡಬಲ್ಸ್ ವಿಭಾಗದಲ್ಲಿ ತ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್ ಜೋಡಿ ಭಾರತದ ಸವಾಲು ಮುನ್ನಡೆಸಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST