ನಗೋಯಾ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತ 5ನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ವೈಯಕ್ತಿಕ ಶೂಟಿಂಗ್‌ನಲ್ಲಿ ಶೂಟರ್ ನೀರು ಧಂಡಾ ಅವರು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಐಚಿ-ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್ನ 10ನೇ ದಿನದಲ್ಲಿ ನೀರು ಧಂಡಾ ಅವರು ಚಿನ್ನದ ಪದಕ ಬೇಟೆಯಾಡಿದ್ದಾರೆ. ಈ ಮೂಲಕ ಭಾರತ ಒಟ್ಟು 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ: ಂsiಚಿಟಿ ಉಚಿmes 2026 | ಭಾರತಕ್ಕೆ ಮತ್ತೊಂದು ಪದಕ ? ಬೆಳ್ಳಿಗೆ ಇಶಾ ಶೂಟ್. ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ಸ್ಪರ್ಧೆಯಲ್ಲಿ ನೀರು ಧಂಡಾ ಅವರು ಅರ್ಹತಾ ಹಂತ ಹಾಗೂ ಫೈನಲ್ ಎರಡರಲ್ಲೂ ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಚೀನಾದ ಸನ್ ಯುನಾಂಗ್ ಮತ್ತು ಕುವೈತ್‌ನ ಹಜಾರ್ ಅಬ್ದುಲ್ಮಲಿಕ್ ಅವರನ್ನು ಹಿಂದಿಕ್ಕಿದರು. ಮಳೆಯ ನಡುವೆ ಒಟ್ಟು ಎಂಟು ಶೂಟರ್‌ಗಳಿದ್ದ ಫೈನಲ್‌ನಲ್ಲಿ ನೀರು ಧಂಡಾ 26 ಅಂಕ ಗಳಿಸುವ ಮೂಲಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.