LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಭಾರತ್ ಸ್ಕೌಟ್ಸ್-ಗೈಡ್ಸ್ ಸಂಸ್ಥೆಯಿಂದ ಗಿಡ ನೆಡುವ ಮೂಲಕ ಪರಿಸರ ಆಂದೋಲನ


ಕೋಲಾರ: ನಗರದ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ 'ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್' ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಮಾದರಿ ಕೆಲಸ ಮಾಡುತ್ತಿದೆ. ನಗರದ ಪ್ರಮುಖ ರಸ್ತೆಗಳ ಡಿವೈಡರ್‌ಗಳು, ರಸ್ತೆ ಬದಿಗಳು ಹಾಗೂ ಉದ್ಯಾನವನಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಕೋಲಾರದಲ್ಲಿ ಹಸಿರು ಆಂದೋಲನವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಕೋಲಾರ ನಗರದಲ್ಲಿ ಹಲವಾರು ಉದ್ಯಾನವನಗಳಿವೆ. ಉದ್ಯಾನವನಗಳನ್ನು ನಗರಸಭೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಸಾರ್ವಜನಿಕರು ಸಹ ಉದ್ಯಾನವನಗಳ ಹಸರೀಕರಣಕ್ಕೆ ಆಸಕ್ತಿ ತೋರುತ್ತಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪರಿಸರ ಆಂದೋಲನ ಕೈಗೊಂಡಿದೆ. ಉದ್ಯಾನವನಗಳು ಮತ್ತು ನಗರದ ಪ್ರಮುಖ ರಸ್ತೆಗಳ ಮಧ್ಯೆಯ ಡಿವೈಡರ್‌ಗಳ ಹಾಗೂ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ನಗರದಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದೆ. ಭಾರತ್ ಮತ್ತು ಸ್ಕೌಟ್ಸ್ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕೋಲಾರ ನಗರದ ಹೊರವಲಯದ ದೇವರಾಜ್ ಅರಸು ಉದ್ಯಾನವನದಲ್ಲಿ ಮಂಗಳವಾರ ಗಿಡಗಳನ್ನು ನೆಡಲಾಯಿತು. ಹೆಚ್ಚುವರಿ ಜಿಲ್ಲಾ ಮತ್ತು ಸೆ?Àನ್ಸ್ ನ್ಯಾಯಾಧೀಶರಾದ ಬಿ.ಜಯಶ್ರೀ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಾನವನಗಳನ್ನು ಸಾರ್ವಜನಿಕರು ನಿರ್ವಹಣೆ ಮಾಡಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಸೃಷ್ಠಿ ಮಾಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶರಾದ ಬಿ. ಜಯಶ್ರೀ ಸಾರ್ವಜನಿಕರು ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯಬಾರದು. ಸಾರ್ವಜನಿಕರು ಉದ್ಯಾನವನದಲ್ಲಿ ಗಿಡಗಳನ್ನು ಬೆಳೆಸಿ ಪೋಷಣೆ ಮಾಡಬೇಕು. ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ ಪ್ಲಸ್ಟಿಕ್ ಪರಿಸರಕ್ಕೆ ಹಾನಿಯಲ್ಲದೆ ವಿ?Àಕಾರಿಯಾಗಿದೆ. ಮನುಷ್ಯರ ರೀತಿಯಲ್ಲಿ ಇತರೆ ಜೀವಜಂತುಗಳು ಬದುಕಬೇಕು. ಬೀದಿಯಲ್ಲಿ ಪ್ಲಾಸ್ಟಿಕ್ ಎಸೆದಾಗ ನಾಯಿ ಮತ್ತು ಹಸುಗಳು ತಿನ್ನುತ್ತವೆ. ಇದರಿಂದಾಗಿ ಜೀವ ಜಂತುಗಳು ಸಾಯುತ್ತವೆ. ಪ್ರಕೃತಿಯ ಜೊತೆ ನಾವು ಬದುಕಬೇಕು ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು ಗಿಡಮರಗಳನ್ನು ಬೆಳೆಸಬೇಕು ಆಗ ಭೂಮಿ ಉಳಿಯುತ್ತದೆ ಎಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಘಟಕ ಬಾಬು ಮಾತನಾಡಿ ಹಸಿರು ಆಂದೋಲನದ ಮುಂಚೂಣಿಯಲ್ಲಿದೆ. ಕೇವಲ ಗಿಡಗಳನ್ನು ನಡೆವುದಲ್ಲದೆ ಬೇಸಿಗೆಯಲ್ಲಿ ನೀರುಣಿಸಿ ಪೋ?Àಣೆ ಮಾಡುತ್ತಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜೊತೆ ಇತರೆ ಸಂಸ್ಥೆಗಳು ಕೈಜೋಡಿಸಿವೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಘಟಕ ಬಾಬು ಉದ್ಯಾನವನಗಳಲ್ಲಿ ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸುವ ಆಂದೋಲನವನ್ನು ಸಂಸ್ಥೆ ಹಮ್ಮಿಕೊಂಡಿದೆ. ಸಾರ್ವಜನಿಕರು ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವು ಪರಿಸರ ಆಸಕ್ತರು ತಮ್ಮ ಹುಟ್ಟುಹಬ್ಬದಂದು ಸಸಿ ನೆಟ್ಟು ಗಿಡಗಳಿಗೆ ಒಂದು ಟ್ಯಾಂಕರ್ ನೀರಿನ ದೇಣಿಗೆ ನೀಡುತ್ತಿದ್ದಾರೆ. ಪ್ರತಿ ಹುಟ್ಟುಹಬ್ಬದಂದು ಗಿಡನೆಟ್ಟು ಉದ್ಯಾನವನದಲ್ಲಿ ವಾಕಿಂಗ್ ಮಾಡುವ ಸಮಯದಲ್ಲಿ ನೆಟ್ಟ ಗಿಡವನ್ನು ಕಂಡಾಗ ಹುಟ್ಟುಹಬ್ಬದ ನೆನಪು ಬರುತ್ತದೆ ಎಂದು ತಿಳಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸಿದ್ದಗಂಗಯ್ಯರಾಜು ಮಾತನಾಡಿ ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆ ಸಹ ಪರಿಸರ ಆಂದೋಲನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದೆ. ಪರಿಸರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾಧ್ಯಂತ ಹಮ್ಮಿಕೊಂಡಿದೆ. ಪ್ರತಿವ?Àð ಅರಣ್ಯ ಪ್ರದೇಶದಲ್ಲಿ ಒಂದು ಲಕ್ಷ ಗಿಡಗಳನ್ನು ಬೆಳೆಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಅವ್ಯಾಹತವಾಗಿ ಗಿಡಮರಗಳನ್ನು ನಾಶಪಡಿಸಲಾಗುತ್ತಿದೆ. ಪ್ರಾಣಿಪಕ್ಷಿಗಳಿಗೆ ಆಹಾರದ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಗಿಡಗಳನ್ನು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಯ್ದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಆಯುಕ್ತ ಕೆ.ವಿ. ಶಂಕರಪ್ಪ, ಸಿ.ಎಂ.ಆರ್. ಶ್ರೀನಾಥ್, ಜನವಾದಿ ಮಹಿಳಾ ಸಂಘಟನೆಯ ವಿ. ಗೀತಾ, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಶಿವಾನಂದ ಆಚಾರ್ಯ, ಪರಿಸರ ಅಧಿಕಾರಿ ಗೋವಿಂದ್ ನಾಯಕ್, ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಶಶಿಕುಮಾರ್ ಭಾಗವಹಿಸಿದ್ದರು. ಪರಿಸರ ಸಂರಕ್ಷಣೆ ಎಂಬುದು ಕೇವಲ ಯಾವುದೋ ಒಂದು ಸಂಸ್ಥೆಯ ಜವಾಬ್ದಾರಿಯಲ್ಲ, ಬದಲಿಗೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಮುಂದಿನ ಆರೋಗ್ಯಕರ ಪೀಳಿಗೆಗಾಗಿ ನಾವೆಲ್ಲರೂ ಕೈಜೋಡಿಸಿ ಮರಗಿಡಗಳನ್ನು ಬೆಳೆಸಿ, ಭೂಮಿಯನ್ನು ಉಳಿಸೋಣ ಎಂದು ಘೋಷಣೆ ಕೂಗಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST