LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

4*400 ರಿಲೇಯಲ್ಲಿ ಮಹಿಳೆಯರಿಗೆ ಚಿನ್ನ, ಪುರುಷರಿಗೆ ಕಂಚು


ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನ ಮಹಿಳೆಯರ 4್ಠ400 ಮೀಟರ್ ರಿಲೇ ಓಟದಲ್ಲಿ ಭಾರತ ತಂಡವು ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಪುರುಷರ ತಂಡ ಕಂಚಿನ ಪದಕವನ್ನು ಗೆದ್ದುಕೊಂಡಿದೆ.ಕಿರಣ್ ಪಹಾಲ್, ಎಂ.ಆರ್. ಪೂವಮ್ಮ, ಪ್ರಾಚಿ ಮತ್ತು ವಿಥ್ಯಾ ರಾಮರಾಜ್ ಅವರ ತಂಡ 3:29.69 ಸೆಕೆಂಡುಗಳಲ್ಲಿ ರೇಸ್ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆಯಿತು. ಬಹ್ರೇನ್ ತಂಡವು (3:30.21) ಬೆಳ್ಳಿ ಪದಕ ಹಾಗೂ ಚೀನಾ ತಂಡವು (3:31.02) ಕಂಚಿನ ಪದಕವನ್ನು ಪಡೆದುಕೊಂಡವು.ಇದು 2026ರ ಏಷ್ಯನ್ ಗೇಮ್ಸ್ನ ಟ್ರ್ಯಾ ಕ್ ಆಂಡ್ ಫೀಲ್ಡ್ (ಅಥ್ಲೆಟಿಕ್ಸ್) ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕವಾಗಿದೆ. ಭಾರತದ ಸ್ಟಾರ್ ಅಥ್ಲೀಟ್ ವಿಥ್ಯಾ ರಾಮರಾಜ್ ಅವರು ಈ ಟೂರ್ನಿಯಲ್ಲಿ ಈಗಾಗಲೇ 400 ಮೀಟರ್ ಹರ್ಡಲ್ಸ್ನಲ್ಲಿ ಕಂಚು ಹಾಗೂ ಮಿಶ್ರ 4್ಠ400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದು, ಈಗ ಚಿನ್ನದ ಪದಕವನ್ನೂ ತಮ್ಮದಾಗಿಸಿಕೊಂಡಿದ್ದಾರೆ.ಪುರುಷರಿಗೆ ಕಂಚು: ಮನು ಟಿ.ಎಸ್., ವಿಶಾಲ್ ಟಿ.ಕೆ., ಧರ್ಮವೀರ್ ಚೌಧರಿ ಮತ್ತು ರಾಜೇಶ್ ರಮೇಶ್ ಒಳಗೊಂಡ ಅತ್ಯುತ್ತಮ ಪ್ರದರ್ಶನ ನೀಡಿತು. ವಿಶೇಷವಾಗಿ ಮನು ಟಿ.ಎಸ್ ಮತ್ತು ವಿಶಾಲ್ ಟಿ.ಕೆ ಅವರು ಕ್ರಮವಾಗಿ ಎರಡನೇ ಹಾಗೂ ನಾಲ್ಕನೇ ಲೆಗ್‌ಗಳಲ್ಲಿ ಅತ್ಯಂತ ವೇಗವಾಗಿ ಓಡಿ ತಂಡಕ್ಕೆ ಕಂಚಿನ ಪದಕ ತಂದುಕೊಟ್ಟರು. ಈ 
ರೇಸ್‌ನಲ್ಲಿ ಅತ್ಯಂತ ಬಲಿಷ್ಠ ಪ್ರದರ್ಶನ ನೀಡಿದ ಜಪಾನ್ ಚಿನ್ನದ ಪದಕವನ್ನು ಹಾಗೂ ಕತಾರ್ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡವು. ಸದ್ಯ ಭಾರತ 6 ಚಿನ್ನ, 21 ಬೆಳ್ಳಿ, 25 ಕಂಚಿನ ಪದಕವನ್ನು ಪಡೆದು ಒಟ್ಟು 52 ಪದಕಗಳನ್ನು ಪಡೆಯುವ 
ಮೂಲಕ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಜಿಗಿದಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST