ಕೆಜಿಎಫ್: ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ವಿವಿಧ ಅಕ್ರಮಗಳು ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಡಿಸೆಂಬರ್ 2 ಮತ್ತು 3ರಂದು ಗಡಿ ಭಾಗದ ಎನ್.ಜಿ. ಹುಲ್ಕೂರಿನಿಂದ ಕೆಜಿಎಫ್ ತಾಲೂಕು ಕಚೇರಿಯವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ವೈ. ಸಂಪAಗಿ ಅವರು ಕರೆ ನೀಡಿದರು.ಪಾದಯಾತ್ರೆಯ ಪೂರ್ವಭಾವಿಯಾಗಿ ಎನ್.ಜಿ. ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂತನಹಳ್ಳಿ, ಜೀಡಮಾಕನಹಳ್ಳಿ, ಶ್ರೀನಿವಾಸಪುರ, ಕೊತ್ತೂರು, ಹುಲ್ಕೂರು, ವೆಂಕಟಾಪುರ, ಕೋಟೆ ಕೃಷ್ಣಾಪುರ, ಪೂಗನಹಳ್ಳಿ, ಸುವರ್ಣಹಳ್ಳಿ, ತಾತೇನಹಳ್ಳಿ, ತಲ್ಲಪಲ್ಲಿ, ಸುಂದರಪಾಳ್ಯ ಹಾಗೂ ರಾಯಸಂದ್ರ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಪಕ್ಷದ ಕಾರ್ಯಕರ್ತರನ್ನು ಸಂಪರ್ಕಿಸಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವೈ. ಸಂಪಂಗಿ ಅವರು, ಕ್ಷೇತ್ರದಲ್ಲಿ ಕಲ್ಲು ಗಣಿಗಾರಿಕೆಗೆ ಶಾಸಕರೇ ಅನುಮತಿ ಪಡೆಯುವ ಮೂಲಕ ಅಕ್ರಮ ಗಣಿಗಾರಿಕೆಗೆ ಆಸ್ಪದ ನೀಡಿದ್ದಾರೆ ಹಾಗೂ ಸ್ವತಃ ಭಾಗಿಯಾಗಿ ತಾಲೂಕಿನ ಖನಿಜ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಎಂದು ವೈ. ಸಂಪಂಗಿ ಆರೋಪಿಸಿದರು.ಡಿಸಿಸಿ ಬ್ಯಾಂಕ್ ಅವ್ಯವಹಾರ: ಡಿಸಿಸಿ ಬ್ಯಾಂಕ್‌ನಿಂದ ಸುಮಾರು 950 ಸ್ತಿçÃಶಕ್ತಿ ಸಂಘಗಳ ಹೆಸರಿನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆಸುವ ಮೂಲಕ ತಾಲೂಕಿನ ಜನತೆಗೆ ಮತ್ತು ಬ್ಯಾಂಕಿಗೆ ವಂಚನೆ ಮಾಡಲಾಗಿದೆ ಎಂದು ಆರೋಪಿದರು.
ದುರುಪಯೋಗವಾಗಿರುವ ಈ ಹಣವನ್ನು ಬ್ಯಾಂಕಿನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ನಿರ್ದೇಶಕಿ ರೂಪಕಲಾ ಶಶಿಧರ್ ಅವರೇ ಮರುಪಾವತಿ ಮಾಡಬೇಕು; ಅಲ್ಲಿಯವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಸರ್ಕಾರಿ ಭೂಮಿ ಕಬಳಿಕೆ: ತಾಲೂಕಿನ ಸುಮಾರು 60 ಎಕರೆ ಸರ್ಕಾರಿ ಜಾಗವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶ್ರೀನಿವಾಸಪುರ ತಾಲೂಕಿನ ಪ್ರಭಾವಿಗಳಿಗೆ ಮಂಜೂರು ಮಾಡುವ ಮೂಲಕ ಸರ್ಕಾರಕ್ಕೆ ಹಾಗೂ ಸ್ಥಳೀಯರಿಗೆ ವಂಚಿಸಲಾಗಿದೆ ಎಂದು ದೂರಿದರು.ವಸತಿ ಯೋಜನೆ ವೈಫಲ್ಯ: ಶಾಸಕಿ ರೂಪಕಲಾ ಶಶಿಧರ್ ಅವರು ಆಯ್ಕೆಯಾದ ಕಳೆದ 10 ವರ್ಷಗಳಲ್ಲಿ ಕ್ಷೇತ್ರಕ್ಕೆ ಒಂದೇ ಒಂದು ಸರ್ಕಾರಿ ಮನೆಯೂ ಮಂಜೂರಾಗಿಲ್ಲ; ಈ ಹಿಂದೆ ಬಿಜೆಪಿ ಅಧಿಕಾರಾವಧಿಯಲ್ಲಿ ಮಂಜೂರಾದ ಮನೆಗಳೇ ಇವೆ ಎಂದು ಟೀಕಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರಂತರ ಬೆಲೆ ಏರಿಕೆಯಿಂದ ಬಡವರ ಜೇಬಿಗೆ ಕತ್ತರಿ ಬಿದ್ದಿದ್ದು, ಸಾರ್ವಜನಿಕರ ಜೀವನದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಗ್ರಾಮಾಂತರ ಘಟಕದ ಅಧ್ಯಕ್ಷರಾದ ಲಕ್ಷಿ÷್ಮÃನಾರಾಯಣ್ ಶರ್ಮ, ಹಿರಿಯ ಮುಖಂಡ ಸಿ.ವಿ.ಬಾಲಕೃಷ್ಣ, ವಕೀಲ ಕೆ.ಸಿ.ನಾಗರಾಜ್, ಜನಾರ್ಧನ್ ನಾಯ್ಡು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಮಲ್ಲಹಳ್ಳಿ ವೆಂಕಟಾಚಲಪತಿ, ಸುನಿಲ್ ಕುಮಾರ್, ಜೆಸಿಬಿ ಮುನಿಯಪ್ಪ, ಅಮರೇಶ್, , ಪುರುಷೋತ್ತಮ್, ಲಕ್ಷಿ÷್ಮಪತಿ, ಗಣೇಶ್, ರೆಡ್ಡಪ್ಪ, ಮಂಜುನಾಥ್, ರಾಧಾಕೃಷ್ಣಪ್ಪ, ನಾರಾಯಣಸ್ವಾಮಿ, ಗಂಗಾಧರ್, ಧನುಷ್, ಮಂಜು, ಬಡಮಾಕನಹಳ್ಳಿ ವೆಂಕಟೇಶ್, ನಂದೀಶ್ ಗೌಡ, ಶೇಟು, ಕೊಂಡಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.