ಇತ್ತೀಚೆಗೆ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿAದ ಪರಾಭವಗೊಂಡಿದ್ದ ಕಾಂಗ್ರೆಸ್‌ನ ನಾಯಕ ಪುಟ್ಟಣ್ಣ, ಸುಮ್ಮನೆ ಕುಳಿತಿಲ್ಲ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಪ್ರವೇಶ ಬಯಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪುಟ್ಟಣ್ಣ ಹಿನ್ನಡೆ ಅನುಭವಿಸಿದ ಬಳಿಕ ಸುಮ್ಮನೆ ಕೂರದೇ ಮುಂದಿನ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 2023 ರಲ್ಲಿ ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಪುಟ್ಟಣ್ಣ, ಬಿಜೆಪಿಯ ಎಸ್. ಸುರೇಶ್‌ಕುಮಾರ್ ವಿರುದ್ಧ 8 ಸಾವಿರ ಮತಗಳ ಅಂತರದಿAದ ಪರಾಭವಗೊಂಡಿದ್ದರು. ಇದಾದ ಬಳಿಕ ಇತ್ತೀಚೆಗೆ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೇ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿAದ ಪುಟ್ಟಣ್ಣ ಪರಾಭವಗೊಂಡಿದ್ದು, ಇದೀಗ ಮುಂದಿನ ಒಂದುವರೆ ವರ್ಷಗಳಲ್ಲಿ ಎದುರಾಗಲಿರುವ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಈಗಲೇ ಪುಟ್ಟಣ್ಣ ತಯಾರಿ ಆರಂಭಿಸಿದ್ದಾರೆ. ಕ್ಷೇತ್ರದಲ್ಲೆಲ್ಲಾ ಈಗಾಗಲೇ ಪುಟ್ಟಣ್ಣರ ಫ್ಲೆಕ್ಸ್, ಬಂಟಿಂಗ್ಸ್! ಇನ್ನು ಶತಾಯಗತಾಯ ಈ ಬಾರಿ ರಾಜಾಜಿನಗರ ವಿಧಾನಸಭಾ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ಪಡೆಯಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್, ಈಗಲೇ ಪುಟ್ಟಣ್ಣರಿಗೆ ಸ್ವಾತಂತ್ರ್ಯ ಕೊಟ್ಟಿದೆ. 2008, 2013, 2018 ಹಾಗೂ 2023 ರಲ್ಲಿ ಅಭ್ಯರ್ಥಿಗಳನ್ನು ಕ್ಷೇತ್ರದಲ್ಲಿ ಬದಲಾವಣೆ ಮಾಡುತ್ತಾ ಬಂದಿದ್ದ ಕಾಂಗ್ರೆಸ್, ಇದೀಗ ಪುಟ್ಟಣ್ಣರಿಗೆ ಮಣೆ ಹಾಕಿದೆ. 2008 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಪದ್ಮಾವತಿ, 2013 ರಲ್ಲಿ ಮಂಜುಳಾ ನಾಯ್ಡು, 2018 ರಲ್ಲಿ ಪದ್ಮಾವತಿ, 2023 ರಲ್ಲಿ ಪುಟ್ಟಣ್ಣರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಇದ್ಯಾವ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಹೀಗಾಗಿ, ಸದ್ಯ ಈಗಿನಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ತಯಾರಿಯನ್ನು ಆರಂಭಿಸಿದ್ದು, ಪುಟ್ಟಣ್ಣರಿಗೆ ಕೆಲಸ ಮಾಡಲು ಮೌಖಿಕವಾಗಿ ಸೂಚಿಸಿದೆ.ಎಸ್.ಸುರೇಶ್‌ಕುಮಾರ್ ವಿರುದ್ಧ ಈ ಬಾರಿ ಗೆಲುವು ಸಾಧಿಸಲು ಗ್ಯಾರೆಂಟಿಗಳ ಅಸ್ತçದಿಂದ ಹಿಡಿದು, ಹಲವು ವಿಚಾರಗಳನ್ನು ಈಗಿನಿಂದಲೇ ಜನರ ಮುಂದೆ ಬಿಂಬಿಸಲು ಪುಟ್ಟಣ್ಣ ರೆಡಿಯಾಗಿದ್ದು, ಕ್ಯಾಂಪೇನ್ ಈಗಲೇ ಆರಂಭವಾಗಿದೆ. ಒಟ್ನಲ್ಲಿ, ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿಯಿರುವಾಗಲೇ ಕೆಲ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಚುನಾವಣಾ ತಯಾರಿ ಆರಂಭವಾಗಿದ್ದು, ಜಿದ್ದಾಜಿದ್ದಿನ ಸ್ಫರ್ಧೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.