LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಟ್ರಂಪ್ ಪಕ್ಷಕ್ಕೆ ಹೀನಾಯ ಸೋಲು

ಅಮೆರಿಕ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷಕ್ಕೆ ಜಯ


ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮೋಕ್ರಾಟ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಎರಡೂ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ಹಲವು ಅಚ್ಚರಿ ಫಲಿತಾಂಶಗಳೊಂದಿಗೆ ಡೆಮೋಕ್ರಾಟ್ ಪಕ್ಷ ಜಯಭೇರಿ ಬಾರಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷಕ್ಕೆ ಮತದಾರರು ತೀವ್ರ ಹಿನ್ನಡೆ ನೀಡಿದ್ದಾರೆ.ಈ ಗೆಲುವಿನಿಂದ ಡೆಮೋಕ್ರಾಟ್ ಪಕ್ಷಕ್ಕೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರಲ್ಲೂ ಬಹುಮತ ದೊರೆತಿದೆ. ಇದರಿಂದ ಟ್ರಂಪ್ ಅವರ ಕಾರ್ಯಸೂಚಿಗೆ ತಡೆಯೊಡ್ಡಲು ಹಾಗೂ ಅವರ ಅಧ್ಯಕ್ಷೀಯ ಅವಧಿಯ ಕೊನೆಯ ಎರಡು ವರ್ಷಗಳಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸಲು ಡೆಮೋಕ್ರಾಟ್ ಪಕ್ಷಕ್ಕೆ ಅಧಿಕಾರ ಸಿಕ್ಕಂತಾಗಿದೆ.ಜೀವನ ನಿರ್ವಹಣೆಯ ಹೆಚ್ಚುತ್ತಿರುವ ವೆಚ್ಚ, ಸುಂಕ ನೀತಿ ಮತ್ತು ಇರಾನ್ ವಿರುದ್ಧ ಟ್ರಂಪ್ ನಡೆಸುತ್ತಿರುವ ಯುದ್ಧದ ಬಗ್ಗೆ ಮತದಾರರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇರಾನ್ ಯುದ್ಧದಿಂದ ಇಂಧನ ಬೆಲೆಗಳು ಗಗನಕ್ಕೇರಿದ್ದು, ಈಗಾಗಲೇ ಜನಪ್ರಿಯತೆ ಕಳೆದುಕೊಂಡಿರುವ ಅಧ್ಯಕ್ಷರ ವಿರುದ್ಧದ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ.ಡೆಮೋಕ್ರಾಟ್ ಪಕ್ಷಕ್ಕೆ ಸೆನೆಟ್‌ನಲ್ಲಿ ನಿರ್ಣಾಯಕ ಮುನ್ನಡೆ ತಂದುಕೊಟ್ಟ ಪ್ರಮುಖ ರಾಜ್ಯಗಳೆಂದರೆ ಕಾನ್ಸಾಸ್ ಮತ್ತು ಅಯೋವಾ. ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಐದು ಮತ್ತು ಆರನೇ ಸ್ಥಾನಗಳನ್ನು ಡೆಮೋಕ್ರಾಟ್ ಪಕ್ಷ ತನ್ನದಾಗಿಸಿಕೊಂಡಿದೆ.ಕಾನ್ಸಾಸ್‌ನಲ್ಲಿ ಮೆಥಡಿಸ್ಟ್ ಧರ್ಮಗುರು ಆಡಂ ಹ್ಯಾಮಿಲ್ಟನ್ ರಿಪಬ್ಲಿಕನ್ ಪಕ್ಷದ ಹಾಲಿ ಸೆನೆಟರ್ ರೋಜರ್ ಮಾರ್ಷಲ್ ಅವರನ್ನು ಸೋಲಿಸಿದ್ದಾರೆ. ಇದರಿಂದ ಸಂಪ್ರದಾಯವಾದಿ ಪ್ರಾಬಲ್ಯವಿರುವ ಕಾನ್ಸಾಸ್ ರಾಜ್ಯದಿಂದ 1932ರ ಬಳಿಕ ಮೊದಲ ಬಾರಿಗೆ ಡೆಮೋಕ್ರಾಟ್ ಪಕ್ಷದ ಅಭ್ಯರ್ಥಿಯೊಬ್ಬರು ಸೆನೆಟ್‌ಗೆ ಆಯ್ಕೆಯಾದಂತಾಗಿದೆ.ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳಲ್ಲೂ ಡೆಮೋಕ್ರಾಟ್ ಗೆಲುವು
ಪೆನ್ಸಿಲ್ವೇನಿಯಾ, ನ್ಯೂಜೆರ್ಸಿಯಿಂದ ಹಿಡಿದು ಕೆಂಟುಕಿ, ಅರಿಜೋನಾ ಮತ್ತು ಉತ್ತರ ಕೆರೊಲಿನಾವರೆಗಿನ ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಡೆಮಾಕ್ರಟಿಕ್ ಪಕ್ಷ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲೂ ಬಹುಮತ ಗಳಿಸಿದೆ.2024ರ ಚುನಾವಣೆಯಲ್ಲಿ ಟ್ರಂಪ್ ಸುಲಭವಾಗಿ ಗೆದ್ದಿದ್ದ ಹಲವು ಕ್ಷೇತ್ರಗಳಲ್ಲೂ ಡೆಮೋಕ್ರಾಟ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಹೌಸ್ ಸ್ಥಾನಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ರಿಪಬ್ಲಿಕನ್ ಪಕ್ಷ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರುವಿಂಗಡಣೆ ಮಾಡಿದ್ದರೂ, ಅದರಿಂದ ನಿರೀಕ್ಷಿತ ಫಲ ಸಿಕ್ಕಿಲ್ಲ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST