LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಪಂಚ ಕ್ಷೇತ್ರಗಳ ಮೇಲೆ ಬಿ. ಶ್ರೀರಾಮುಲು ಕಣ್ಣು!

ಗೆಲುವು ಸಾಧಿಸಿ, ಉನ್ನತ ಸ್ಥಾನ ಅಲಂಕರಿಸಲು ಸಜ್ಜಾಗುತ್ತಿರುವ ರಾಮುಲು! ಹೇಗಿರಲಿದೆ ಗೊತ್ತಾ, ರಾಮುಲು ಅಣ್ಣನ ಗೆಲುವಿನ ಲೆಕ್ಕಾಚಾರ? ಡಾ.ಜಿ.ವೈ. ಪದ್ಮ ನಾಗರಾಜು


ಬಿ.ಶ್ರೀರಾಮುಲು. ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿಯ ಕೋರ್ ಕಮಿಟಿ ಸದಸ್ಯ. ಬಿ.ಎಸ್. ಯಡಿಯೂರಪ್ಪರ ಗರಡಿಯಲ್ಲಿ ಪಳಗಿ, ಶಾಸಕನಾಗಿ, ಸಚಿವನಾಗಿ, ಸಂಸದನಾಗಿಯೂ ಕಾರ್ಯನಿರ್ವಹಣೆ ಮಾಡಿರುವ ರಾಜಕಾರಣಿ. ಆದ್ರೆ ಕಳೆದ ಎರಡು ಬಾರಿಯೂ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದು, ಸದ್ಯ ಸೋಲಿನ ಮುಖವಾಡ ಕಳಚಿ ಗೆಲುವು ಸಾಧಿಸುವ ಉತ್ಸಾಹದಲ್ಲಿರುವ ರಾಮುಲು ರಾಜಕಾರಣದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಗುರಿಯಿಟ್ಟುಕೊಂಡು ಈಗಾಗಲೇ ಕೆಲಸ ಶುರು ಮಾಡಿದ್ದಾರೆ. 
2028 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಶುರು ಮಾಡಿರುವ ರಾಮುಲು, ಪಂಚ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂಬ Exclusive   ಮಾಹಿತಿ "ಇಂದು ಸಂಜೆ" ಗೆ ಸಿಕ್ಕಿದೆ. 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಾಗೂ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿ ಹಿನ್ನಡೆ ಅನುಭವಿಸಿದ್ದನ್ನು ನೆನಪಿನಲ್ಲಿಟ್ಟುಕೊಂಡು, ಯಾವುದೇ ಎಡವಟ್ಟುಗಳು ನಡೆಯದಂತೆ ಸಲೀಸಾಗಿ ಚುನಾವಣೆ ನಡೆಸಿ, ಗೆಲುವಿನ ದಡ ಮುಟ್ಟಬೇಕೆಂದಿರುವ ರಾಮುಲು, ಈಗಾಗಲೇ ಪಂಚ ಕ್ಷೇತ್ರಗಳಲ್ಲೂ ತಮ್ಮದೇ ಪಡೆ ಬಿಟ್ಟು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಹಾಗಾದ್ರೆ ಯಾವುದು ಆ ಪಂಚ ಕ್ಷೇತ್ರ? ಅದನ್ನೇ ನಾವು ಇಂದು ಹೇಳುತ್ತೇವೆ ಕೇಳಿ. ಮೂಲತಃ ಬಳ್ಳಾರಿ ಜಿಲ್ಲೆಯವರಾದ ಬಿ. ಶ್ರೀರಾಮುಲು, ಪ್ರಬಲ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಸೇರುವ ವಾಲ್ಮೀಕಿ ಸಮುದಾಯದಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ರಾಮುಲು, ಬಳ್ಳಾರಿ ಗ್ರಾಮೀಣ, ಕೂಡ್ಲಿಗಿ, ಮೊಳಕಾಲ್ಮೂರು, ಗದಗ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಫರ್ಧೆ ಮಾಡುವುದು ನಿಶ್ಚಿತ ಎನ್ನಲಾಗಿದ್ದು, ಈ ಪಂಚ ಕ್ಷೇತ್ರಗಳಲ್ಲಿ ಕೆಲಸ ಶುರು ಮಾಡಿದ್ದಾರೆ. 
ಬಳ್ಳಾರಿ ಗ್ರಾಮೀಣ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ರಾಮುಲು ಈ ಹಿಂದೆ ಕೂಡ ಸ್ಫರ್ಧೆ ಮಾಡಿದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಹೀಗಾಗಿ ಅವರಿಗೆ ಕ್ಷೇತ್ರದ ಪರಿಚಯವಿದೆ. ಕ್ಷೇತ್ರದ ಜನತೆ ರಾಮುಲು ಅಂದರೆ ಬಹಳ ಪ್ರೀತಿಸುವ ವಾತಾವರಣ ಕೂಡ ಈ ಕ್ಷೇತ್ರದಲ್ಲಿದೆ. ಆದ್ರೆ ಮೂಲತಃ ಬಳ್ಳಾರಿ ಜಿಲ್ಲೆಯವರಾಗಿರುವುದರಿಂದ ಕಲ್ಯಾಣ ಕರ್ನಾಟಕದ ಒಂದು ಕ್ಷೇತ್ರ ಸಿಕ್ಕರೇ ಸೂಕ್ತ ಎಂಬುದು ರಾಮುಲು ಅವರ ಲೆಕ್ಕಾಚಾರ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಚಿತ್ರದುರ್ಗ ಜಿಲ್ಲೆಗೆ ಸೇರಿದ್ದಾಗಿದ್ದು, ಮಧ್ಯ ಕರ್ನಾಟಕ ಭಾಗಕ್ಕೆ ಬರುತ್ತದೆ. 2018 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ರಾಮುಲು ವಿಧಾನಸಭೆಗೆ ಪ್ರವೇಶ ಪಡೆದಿದ್ದರು. ಈಗ ಆ ಕ್ಷೇತ್ರದಲ್ಲೂ ಕಾರ್ಯ ಆರಂಭಿಸಿದ್ದಾರೆ. ಇನ್ನು ಕೂಡ್ಲಿಗಿ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳು ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೇರಲಿದ್ದು, ಇಲ್ಲೂ ಒಂದು ಕಣ್ಣು ಇಟ್ಟಿದ್ದಾರೆ ಎಂಬ ಮಾಹಿತಿ ಇದೆ. ಇತ್ತ ಗದಗ ಆಯ್ಕೆ ಮಾಡಿಕೊಳ್ಳಲು ಅವರ ರಾಜಕಾರಣದ ಉನ್ನತ ಸ್ಥಾನಮಾನಕ್ಕೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಗದಗ ಕ್ಷೇತ್ರ ಕಿತ್ತೂರು ಕರ್ನಾಟಕ ವ್ಯಾಪ್ತಿಗೆ ಬರುತ್ತದೆ.ಬಳ್ಳಾರಿ ಗ್ರಾಮೀಣ, ಮಸ್ಕಿ, ಕೂಡ್ಲಿಗಿ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರವಾದ್ರೆ, ಇತ್ತ ಗದಗ ಸಾಮಾನ್ಯ ಕ್ಷೇತ್ರ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಜನಪ್ರಿಯತೆ ಗಳಿಸಿರುವ ರಾಮುಲು ಈ ಒಂಚ ಕ್ಷೇತ್ರಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನಲಾಗಿದ್ದು, ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ರಾಮುಲು ನಡೆ ಕುತೂಹಲ ಕೆರಳಿಸಿದೆ. ಒಂದು ಸಂದರ್ಭ ನೆನಪು ಮಾಡಿಕೊಳ್ಳಬೇಕು ಅಂದರೆ, ಅದು 2018 ರ ರಾಜ್ಯ ವಿಧಾನಸಭಾ ಚುನಾವಣೆ. ಆ ಚುನಾವಣೆಯಲ್ಲಿ ರಾಮುಲು ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ವಿಧಾನಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿದ್ರು. ಅಂದು ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆದ್ದು ಬೀಗಿದ್ರು. ಆದ್ರೆ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಅವರು ಎದುರಿಸಿದ್ದು ಸಾಮಾನ್ಯರನ್ನಲ್ಲ. ಅಂದಿನ ಸಿಎಂ ಸಿದ್ಧರಾಮಯ್ಯರನ್ನ. ಬಾದಾಮಿಯಲ್ಲಿ ಕೇವಲ ಬೆರಳೆಣಿಕೆಯಷ್ಟು ಮತಗಳ ಅಂತರದಿAದ ರಾಮುಲುಗೆ ಹಿನ್ನಡೆಯಾಗಿದ್ದು. ಸ್ವಲ್ಪ ಶ್ರಮವಹಿಸಿದ್ರೆ, ಅಂದು ಸಿಟ್ಟಿಂಗ್ ಸಿಎಂ ಸಿದ್ಧರಾಮಯ್ಯರನ್ನೇ ಸೋಲಿಸಿದ ಕೀರ್ತಿ ರಾಮುಲು ಅವರ ಬತ್ತಳಿಕೆಗೆ ಸೇರುತ್ತಿತ್ತು. ಆದ್ರೆ ಬೆರಳೆಣಿಕೆಯಷ್ಟು ಮತಗಳಲ್ಲಿ ರಾಮುಲು ಸೋಲು ಅನುಭವಿಸಬೇಕಾಯಿತು. ಇನ್ನು 2014 ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಮುಲು, ಸಂಸತ್‌ಗೂ ಆಯ್ಕೆಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಆ ಸ್ಥಾನವನ್ನು ಅಲಂಕರಿಸಲು ತಾವು ಕೂಡ ಒಂದು ಕಾರಣ ಎಂಬುದನ್ನು ಮರೆತಿಲ್ಲ. ಇನ್ನು ಶಾಸಕ- ರಾಗಿ, ಸಚಿವರಾಗಿ ಹಾಗೂ ಸಂಸದರಾಗಿಯೂ ರಾಮುಲು ಸೇವೆ ಸಲ್ಲಿಸಿದ್ದಾರೆ.ಇನ್ನು ರಾಜಕೀಯವಾಗಿ ಮಹತ್ವದ ಸ್ಥಾನ ಪಡೆಯಲು ರಾಮುಲು ಮುಂದಾಗಿದ್ದು, ಸದ್ಯ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ವಾಲ್ಮೀಕಿ ಸಮುದಾಯದ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬುದನ್ನು ಬಿಂಬಿಸಲು ಪಣತೊಟ್ಟಿದ್ದಾರೆ. ಒಂದು ಕಡೆ ಗ್ಯಾರೆಂಟಿಗಳ ಹಾವಳಿ, ಇನ್ನೊಂದೆಡೆ ಸರ್ಕಾರದ ದುರಾಳಿತ. ಇದನ್ನೇ ಅಸ್ತçವಾಗಿ ಮಾಡಿಕೊಂಡು ಚುನಾವಣೆಗೆ ಸಿದ್ಧತೆ ಆರಂಭಿಸಿರುವ ರಾಮುಲು, ಪಂಚ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST