LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಬಿ.ಎಸ್.ಯಡಿಯೂರಪ್ಪರನ್ನು ಬಿಟ್ಟು ಏನನ್ನೂ ಮಾಡಬೇಡಿ...

ಹೊಸ ಉಸ್ತುವಾರಿ ರಾಜ್ಯಕ್ಕೆ ಎಂಟ್ರಿ ಮುನ್ನವೇ ಹೈಕಮಾಂಡ್ ನಾಯಕರಿಂದ ಖಡಕ್ ಸೂಚನೆ ಡಾ.ಜಿ.ವೈ. ಪದ್ಮ ನಾಗರಾಜು


ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪನವರೇ ಸುಪ್ರೀಂ ಲೀಡರ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯ ಬಿಜೆಪಿಯನ್ನು ಸಂಘಟನಾತ್ಮಕವಾಗಿ ಬಲಪಡಿಸಿ, ಸದೃಢಗೊಳಿಸಿ 2028 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಾಗೂ 2029 ರ ಲೋಕಸಭಾ ಚುನಾವಣೆಗೆ ಸಿದ್ಧಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಬಿಜೆಪಿ ಹೈಕಮಾಂಡ್ ನಾಯಕರು, ಹೊಸ ಉಸ್ತುವಾರಿಯಾಗಿ ಉತ್ತರಪ್ರದೇಶ ಮೂಲದ ಹರೀಶ್ ದ್ವಿವೇದಿಗೆ ಹೊಣೆಗಾರಿಕೆ ನೀಡಿದೆ. ಈಗ ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ನೇಮಕವಾದ್ರೂ, ಈವರೆಗೂ ರಾಜ್ಯಕ್ಕೆ ಅವರ ಆಗಮನವಾಗಿಲ್ಲ. ಈಗ ಮುಂದಿನ ವಾರ ಅಂದರೆ ಅಕ್ಟೋಬರ್ 11 ರಂದು ರಾಜ್ಯಕ್ಕೆ ಹರೀಶ್ ದ್ವಿವೇದಿ ಆಗಮನ ಆಗುತ್ತಿದ್ದು, ಅವರಿಗೆ ಹೈಕಮಾಂಡ್ ನಾಯಕರು ಸಾಲು ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ ಎಂಬ Iಟಿsiಜe ಓeತಿs "ಇಂದು ಸಂಜೆ" ಗೆ ಲಭ್ಯವಾಗಿದೆ. 
ಬಿಜೆಪಿಯ ಹೈಕಮಾಂಡ್ ನಾಯಕರ ಮೂಲಗಳ ಪ್ರಕಾರ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ಒಂದೇ ಒಂದು ಕಡ್ಡಿ ಅಲುಗಾಡಬೇಕು ಅಂದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ, ಹಾಲಿ ಬಿಜೆಪಿ ಕೇಂದ್ರ ಚುನಾವಣಾ ಮಂಡಳಿ ಹಾಗೂ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪರ ಅನುಮತಿ ಬೇಕೇ ಬೇಕು. ಕಳೆದ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಹಿನ್ನಡೆಯಾಗಿದ್ದು, ಅದನ್ನು ಈಗ ಎದುರಾಗಲಿರುವ 2028 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸರಿಪಡಿಸಲೇಬೇಕಾದ ಸ್ಥಿತಿಗೆ ಬಿಜೆಪಿ ತಲುಪಿದೆ. ಹೀಗಾಗಿ, ನೂತನ ಬಿಜೆಪಿ ಉಸ್ತುವಾರಿ ಹರೀಶ್ ದ್ವಿವೇದಿಗೆ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಎಂಟ್ರಿ ಕೊಡುವ ಮುನ್ನವೇ ಸಾಲು ಸಾಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. 
ಹಾಗಾದ್ರೆ ಏನದು ಸಾಲು ಸಾಲು ಸಲಹೆ ಸೂಚನೆಗಳು ಎಂಬುದನ್ನು ನೋಡುವುದಾದರೆ,
1. ಬಿ.ಎಸ್.ಯಡಿಯೂರಪ್ಪ ಹಿರಿಯ ರಾಜಕಾರಣಿ. ಅನುಭವಿಗಳು.
2. ಕರ್ನಾಟಕದ ಬಿಜೆಪಿಗೆ ಅವರೇ ಸುಪ್ರೀಂ ಲೀಡರ್
3. ಈವರೆಗೂ ನಾಲ್ಕುವರೆ ದಶಕಗಳಿಂದ ರಾಜಕಾರಣದಲ್ಲಿ ಏಳು ಬೀಳು ನೋಡಿದವರು. 
4. ಕರ್ನಾಟಕದಲ್ಲಿ 1983 ರಿಂದ ಈವರೆಗೂ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿರುವವರು.
5. ಕರ್ನಾಟಕವನ್ನು ಈವರೆಗೂ ಹಲವು ಬಾರಿಸುತ್ತಿರುವ ಧೀಮಂತ ನಾಯಕ.
6. ಇನ್ನು ಅಷ್ಟು ಮಾತ್ರವಲ್ಲದೇ, ರಾಜ್ಯದ ಎಲ್ಲಾ ಹಳ್ಳಿಗಳಲ್ಲೂ ಸುತ್ತಿ ಬಂದಿರುವ ಏಕೈಕ ರಾಜಕಾರಣಿ.
7. ನೀವು ಅಲ್ಲಿ ಹೋದಾಗ ಅವರ ಅನುಭವ ಬಳಸಿಕೊಳ್ಳಿ.
8. ಅವರು ತಿಳಿಸಿದ ಹಾಗೇ ಕೆಲಸ ಮಾಡಿ. 
9. ರಾಜ್ಯಕ್ಕೆ ನೀವು ಭೇಟಿ ನೀಡುವ ಮೊದಲು ಅಲ್ಲಿನ ವಸ್ತುಸ್ಥಿತಿ ಅರ್ಥೈಸಿಕೊಳ್ಳಿ. 
10. ಉತ್ತರ ಭಾರತದ ಹಾಗೇ ಅಲ್ಲಿ ವಾತಾವರಣ ಇಲ್ಲ.
11. ಅಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದವರು ಬಿ.ಎಸ್.ಯಡಿಯೂರಪ್ಪ. 
12. ಹೀಗಾಗಿ, ಅಲ್ಲಿ ಅವರೇ ಸುಪ್ರೀಂ ಲೀಡರ್. 
13. ಅವರ ಅಣತಿಯಂತೆ ಕೆಲಸ ಮಾಡಿದ್ರೆ ಮಾತ್ರ ನಾವು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. 
14. ಅವರನ್ನು ಬಿಟ್ಟು ಅಥವಾ ಅವರ ಮಾತಿಗೆ ಮನ್ನಣೆ ಕೊಡದೇ ಚುನಾವಣೆ ಮಾಡುವುದು ಅಸಾಧ್ಯ.
15. ಈ ನಿಟ್ಟಿನಲ್ಲಿ ಅವರು ಹೇಳಿದ ಹಾಗೇ ಕೆಲಸ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತರುವುದು ನಿಮ್ಮ ಗುರುತರ ಜವಾಬ್ದಾರಿ ಎಂದಿರುವ ಹೈಕಮಾಂಡ್ ನಾಯಕರು.
ಹೀಗೆ ಸಾಲು ಸಾಲು ಸಲಹೆ ಸೂಚನೆಗಳನ್ನು ಹೈಕಮಾಂಡ್ ನಾಯಕರು ಹರೀಶ್ ದ್ವಿವೇದಿ ಅವರಿಗೆ ನೀಡಿದ್ದು, ಇದೇ ಅಕ್ಟೋಬರ್ 11 ರಂದು ಮೊದಲ ಬಾರಿಗೆ ಹರೀಶ್ ದ್ವಿವೇದಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. 
ಬಂದ ಕೂಡಲೇ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾಗಿ ಹರೀಶ್ ದ್ವಿವೇದಿ ಮಾತುಕತೆ ನಡೆಸಲಿದ್ದು, 2028 ರ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಧಿಕೃತವಾಗಿ ಆಗಮಿಸಲಿದೆ ಎಂಬ ಮಾಹಿತಿ "ಇಂದು ಸಂಜೆ" ಗೆ ಲಭ್ಯವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST