LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಮಹಾನ್’ ಚಿತ್ರದ `ಒಡಹುಟ್ಟಿದವಳು’

ಹಾಡಿಗೆ ಮೆಚ್ಚುಗೆಯ ಮಹಾಪೂರ


ಪಿ.ಸಿ.ಶೇಖರ್ ನಿರ್ದೇಶನದ,  ಪ್ರಕಾಶ್ ಬೂದೂರು  ನಿರ್ಮಿಸಿರುವ  ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ “ಮಹಾನ್” ಚಿತ್ರದ ಮೊದಲ ಹಾಡು  “ಒಡಹುಟ್ಟಿದವಳು” ಬಿಡುಗಡೆಯಾಯಿತು.ನಾಗೇಂದ್ರಪ್ರಸಾದ್  ಬರೆದಿರುವ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಹಾಡನ್ನು ಸಿದ್  ಶ್ರೀರಾಮ್ - ಲಹರಿ ಹಾಡಿದ್ದಾರೆ.“ಮಹಾನ್”ಎಂದರೆ ರೈತ.  ಇದು ಕೂಡ ರೈತನ ಕುರಿತಾದ ಚಿತ್ರ. ಜೊತೆಗೆ ಅಣ್ಣ - ತಂಗಿ ಬಾಂಧವ್ಯ ಕೂಡ ಇದೆ. ನಾಯಕನ ಪಾತ್ರದ ವಿಜಯ ರಾಘವೇಂದ್ರ. ಅವರು ಈ ಪಾತ್ರಕ್ಕಾಗಿ ನ್ಯಾಯ ಒದಗಿಸಿದ್ದಾರೆ.  ಕನ್ನಡತಿ ವರ್ಷ ಬೊಳ್ಳಮ್ಮ ವಿಜಯ್ ರಾಘವೇಂದ್ರ ತಂಗಿಯಾಗಿ ನಟಿಸಿದ್ದಾರೆ. ಶಿವರಾಜಕುಮಾರ್  ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಶರತ್ ಲೋಹಿತಾಶ್ವ, ಮಿತ್ರ ಅವರು ಸೇರಿದಂತೆ ಬಹು ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ನಾನು ಅಧ್ಯಯನ ಮಾಡಿದ ಕಾಲೇ ಜಿನ ಅಧ್ಯಾಪಕರೆ ಈ ಚಿತ್ರದ ನಿರ್ಮಾಪಕರಾಗಿರುವುದು ವಿಶೇಷ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಎಲ್ಲ ಹಾಡುಗಳು ಸುಮಧುರವಾಗಿ ಮೂಡಿಬಂದಿದೆ. ಎಂದರು ನಿರ್ದೇಶಕ ಪಿ.ಸಿ.ಶೇಖರ್.ಶಿವರಾಜಕುಮಾರ್ ಜೊತೆಗೆ ಅಭಿನಯಿಸಿರುವು ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು ನಾಯಕ ವಿಜಯ್ ರಾಘವೇಂದ್ರ. ನಾನು ಕನ್ನಡದವಳು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಹಾಗಾಗಿ ನಾನು ಕನ್ನಡ ಚಿತ್ರದಲ್ಲಿ ನಟಿಸಲು ಹತ್ತು ವರ್ಷ ಬೇಕಾಯಿತು ಎಂದರು ನಟಿ ವರ್ಷ ಬೊಳ್ಳಮ್ಮ, ಇಂದು ಬಿಡುಗಡೆಯಾಗಿರುವ ಹಾಡು ಹಾಗೂ ನನ್ನ ಪಾತ್ರ  ಮನಸ್ಸಿಗೆ ಹತ್ತಿರವಾಯಿತು ಎಂದು ನಟ ಶರತ್ ಲೋಹಿತಾಶ್ವ ತಿಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST