LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ನಾವು ತುಂಬಾ ಒಳ್ಳೆಯವರು ಹಾಡುಗಳ ಲೋಕಾರ್ಪಣೆ


ಬಾಲನಟ ಜಗದೀಶ್ ಆದಿತ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನೂತನ ಚಿತ್ರಕ್ಕೆ `ನಾವು ತುಂಬಾ ಒಳ್ಳೆಯವರು’ ಎಂಬ  ಶೀರ್ಷಿಕೆ ಇಡಲಾಗಿದೆ. ಮಕ್ಕಳನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಮಿಸಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ವಿಶೇಷವೆಂದರೆ, ಚಿತ್ರದ ಬಾಲಕಲಾವಿದರ ಕೈಯಿಂದಲೇ ಚಿತ್ರದ ಗೀತೆಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಇದೇ ವೇಳೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿ, ಅನುರಾಧಾ ಭಟ್ ಹಾಡಿರುವ ಗೀತೆಯ ಮೇಕಿಂಗ್ ವಿಡಿಯೋವನ್ನು ಕೂಡ ಪ್ರದರ್ಶಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ಚಿತ್ರದ ನಾಯಕ ಆಯುಷ್ ಮಲ್ಲಿ, ಉತ್ತರ ಕರ್ನಾಟಕದ ಸಂಸ್ಕöÈತಿಯನ್ನು ತೆರೆಯ ಮೇಲೆ ತರಬೇಕೆಂಬುದು ನನ್ನ ಉದ್ದೇಶವಾಗಿತ್ತು ಎಂದರು.ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ಹಂಚಿಕೊAಡ ನಿರ್ದೇಶಕರು, ವಠಾರದ ಅಜ್ಜಿಯ ಮನೆಯಲ್ಲಿ ಬಾಡಿಗೆಗೆ ಇರುವವರು ಹಾಗೂ ಆ ಅಜ್ಜಿಯ ನಡುವೆ ನಡೆಯುವ ಹಾಸ್ಯಭರಿತ ಸನ್ನಿವೇಶಗಳೇ ಚಿತ್ರದ ಜೀವಾಳ ಎಂದರು. ಆರಂಭದಿAದ ಅಂತ್ಯದವರೆಗೂ ನಗುವಿನ ಹೊಳೆ ಹರಿಸುವ ಈ ಕಥೆ, ಕ್ಲೆöÊಮ್ಯಾಕ್ಸ್ ಹಂತದಲ್ಲಿ ಭಾವನಾತ್ಮಕ ತಿರುವು ಪಡೆಯುತ್ತದೆ. ಬಿಜಾಪುರ ಭಾಗದ ಮನೆದಾಳು ವಾಡೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಉತ್ತರ ಕರ್ನಾಟಕದ ಸ್ಥಳೀಯ ರಂಗಭೂಮಿ ಕಲಾವಿದರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದೆ ಎಂದು ಆಯುಷ್ ಮಲ್ಲಿ ವಿವರಿಸಿದರು.
ಚಿತ್ರದ ನಾಯಕಿ ಸಹನಾ ಪ್ರಕಾಶ್ ಮಾತನಾಡಿ, “ಇದು ನನ್ನ ಎರಡನೇ ಸಿನಿಮಾ. ಇದರಲ್ಲಿ ನಾನು `ಪೂರ್ಣಿ’ ಎಂಬ ಚುರುಕು ಹಾಗೂ ಬಬ್ಲಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಮ್ಮ ಕುಟುಂಬದಲ್ಲಿ ಯಾರಿಗೂ ಸಿನಿಮಾ ಹಿನ್ನೆಲೆಯಿಲ್ಲ, ಹೀಗಾಗಿ ನಟಿಯಾಗಿ ಇದೊಂದು ಹೊಸ ಮತ್ತು ಸುಂದರ ಅನುಭವ” ಎಂದರು. ಮತ್ತೋರ್ವ ನಟಿ ಸಂಜನಾ ಮೂಲಿ ಮಾತನಾಡಿ, “ನಾನು ಮೂಲತಃ ಗದಗಿನವಳು. ಚಿತ್ರದಲ್ಲಿ ನನ್ನ ನಿಜವಾದ ಹೆಸರನ್ನೇ ಪಾತ್ರಕ್ಕೂ ಇಡಲಾಗಿದ್ದು, ಶಿಕ್ಷಕಿಯಾಗಿ ಅಭಿನಯಿಸಿದ್ದೇನೆ. ನಿಜಜೀವನದಂತೆ ಇಲ್ಲಿಯೂ ನನ್ನದು ಹೆಚ್ಚು ಮೌನವಾಗಿರುವ ಪಾತ್ರವಾದ್ದರಿಂದ ನನಗೆ ಬಹಳ ಆಪ್ತವೆನಿಸಿತು” ಎಂದು ಸಂತಸ ಹಂಚಿಕೊAಡರು. ಅಲ್ಲದೆ, ಕಂಟೆAಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ ಏಳನೇ ತರಗತಿ ವಿದ್ಯಾರ್ಥಿನಿ ಸಾಹಿತಿ ಈ ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST