LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಎಸ್. ನಾರಾಯಣ್ ನಿರ್ದೇಶನ: ನೂತನ ಚಿತ್ರಕ್ಕೆ ಶುಭಾರಂಭ


ಸದಭಿರುಚಿಯ ಚಿತ್ರಗಳ ನಿರ್ದೇಶಕಎಸ್. ನಾರಾಯಣ್  ನಿರ್ದೇಶನದ ನೂತನ ಚಿತ್ರದ ಮುಹೂರ್ತನೆರವೇರಿದೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಬಳಿಕಎಸ್. ನಾರಾಯಣ್, ಇದೀಗ ಚಿತ್ರದ ಮುಹೂರ್ತ ನೆರವೇರಿಸುವ ಮೂಲಕ ಹೊಸ ಚಿತ್ರಕ್ಕೆ ಶುಭಾರಂಭ ನೀಡಿದ್ದಾರೆ. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ  ಲತಾ ಜಯಪ್ರಕಾಶ್  ಆರಂಭ ಫಲಕ ತೋರಿದರೆ,  ಭಾಗ್ಯವತಿ ಎಸ್. ನಾರಾಯಣ್ ಅವರು ಕ್ಯಾಮೆರಾ ಚಾಲನೆ ಮಾಡಿದರು. ಕ್ರಿಯೇಟಿವ್ ಪ್ರೊಡ್ಯೂಸರ್ ಅಜಯ್ ಹಾಗೂ ಪ್ರೊಡಕ್ಷನ್ ಹೆಡ್ ಪುಷ್ಪಮಾಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ನೂತನ ಚಿತ್ರಕ್ಕೆ ವಿ. ಹರಿಕೃಷ್ಣ ಅವರು ಸಂಗೀತ ಸಂಯೋಜಿಸುತ್ತಿದ್ದು, ಎಸ್. ನಾರಾಯಣ್ ಹಾಗೂ ವಿ. ಹರಿಕೃಷ್ಣ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರ ಇದಾಗಿದೆ. ಗಿರಿಧರ್ ದಿವಾನ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಇರಲಿದೆ. ತಾರಾಬಳಗದ ಕುರಿತಾದ ಮಾಹಿತಿಯನ್ನು ಸದ್ಯಕ್ಕೆ ಗೌಪ್ಯವಾಗಿಟ್ಟಿರುವ  ಎಸ್. ನಾರಾಯಣ್ ಅವರು, ಶೀಘ್ರದಲ್ಲೇ  ವಿವರಗಳನ್ನು  ಪ್ರಕಟಿಸುವೆ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST