`ಮಿಸ್ಮ್ಯಾಚ್’ ಚಿತ್ರತಂಡ ಇದೀಗ ಬೆಂಗಳೂರಿನ ಲುಲು ಮಾಲ್ನಲ್ಲಿ ಚಿತ್ರದ `ಸುಂದರಿ’ ಹಾಡಿಗೆ ಫ್ಲಾ÷್ಯಶ್ಮಾಬ್ ಆಯೋಜಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ.
ಚಿತ್ರದ ಪ್ರಚಾರದ ಭಾಗವಾಗಿ ನಡೆದ ಈ ಫ್ಲಾ÷್ಯಶ್ಮಾಬ್ನಲ್ಲಿ ನೃತ್ಯಗಾರರು `ಸುಂದರಿ’ ಹಾಡಿನ ಲಯಕ್ಕೆ ತಕ್ಕಂತೆ ಉತ್ಸಾಹಭರಿತವಾಗಿ ಹೆಜ್ಜೆ ಹಾಕಿದರು. ಮಾಲ್ಗೆ ಆಗಮಿಸಿದ್ದ ಜನರಿಗೆ ಈ ವಿಶೇಷ ನೃತ್ಯ ಪ್ರದರ್ಶನ ಮನರಂಜನೆಯ ಅನುಭವ ನೀಡಿದೆ.ಸ್ನೇಹ, ಕುಟುಂಬ, ಪ್ರೀತಿ, ನಗು ಹಾಗೂ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಪ್ರೇಮದ ಕ್ಷಣಗಳನ್ನು ಒಳಗೊಂಡಿರುವ `ಮಿಸ್ಮ್ಯಾಚ್’ ಒಂದು ಫ್ಯಾಮಿಲಿಹಾಗೂ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ. ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ರೀತಿಯಲ್ಲಿ ನಡೆಯುವ ಪ್ರೀತಿ, ಸಂಬAಧಗಳ ಗೊಂದಲ ಹಾಗೂ ಭಾವನಾತ್ಮಕ ಸನ್ನಿವೇಶಗಳನ್ನು ಮನರಂಜನಾತ್ಮಕವಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.ಸಾಯಿ ಶ್ರೀನಿಧಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ತೇಜಸ್ ವೆಂಕಟೇಶ್ ನಿರ್ಮಿಸಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಗಣೇಶ್ ಮಹಾಬಲ ನಿರ್ವಹಿಸಿದ್ದು, ಸಂಕಲನವನ್ನು ದೀಪಕ್ ಎಂ. ಕುಲಾಲ್ ಮಾಡಿದ್ದಾರೆ.ಚಿತ್ರದ `ಸುಂದರಿ’ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿ, ಧ್ವನಿ ನೀಡಿದ್ದಾರೆ. ವಿಶೇಷವೆಂದರೆ, ಜೂಡಾ ಸ್ಯಾಂಡಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿದ್ದಾರೆ. ತ್ರಿಲೋಕ್ ತ್ರಿವಿಕ್ರಮ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಕನ್ನಡದ ಪ್ರೇಕ್ಷಕರಿಗೆ ಹೊಸ ಸಂಗೀತದ ಅನುಭವ ನೀಡುವ `ಸುಂದರಿ’ ಹಾಡು ಚಿತ್ರದ ಪ್ರಚಾರಕ್ಕೆ ಮತ್ತಷ್ಟು ಮೆರುಗು ನೀಡಿದೆ.ಫ್ಲಾ÷್ಯಶ್ಮಾಬ್ಗೆ ಸಧ್ವಿನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಸುಜನ್ ಎಸ್. ಹೆಗಡೆ ಹಾಗೂ ಅರವಿಂದ್ ಎಂ. ಸಹಾಯಕ ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ತೇಜಸ್, ಹರಿವತ್ಸ, ಲೋಚನ್, ನಿಶಾಂತ್, ಕೀರ್ತಿ, ಸಂಜನಾ, ಲಕ್ಷಿ÷್ಮ ಹಾಗೂ ಅನುಶ್ರೀ ನೃತ್ಯ ಪ್ರದರ್ಶನದಲ್ಲಿ ಭಾಗವಹಿದ್ದಾರೆ.ಕೌಶಿಕ್ ಗೌಡ, ಅಶ್ವಿತಾ ಹೆಗ್ಡೆ, ತೇಜೇಶ್ ಎಸ್.ಎಂ. ಹಾಗೂ ಅಮೃತಾ ಕೆ.ಪಿ. ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.