LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ರಿಕರ್ವ್ ವಿಭಾಗದಲ್ಲಿ ಭಾರತಕ್ಕೆ ಒಲಿದ ಚಿನ್ನದ ಪದಕ


ನಾಗೋಯಾ: ಏಷ್ಯನ್ ಗೇಮ್ಸ್ 2026ರ ರಿಕರ್ವ್ ಮಹಿಳಾ ತಂಡ ವಿಭಾಗದಲ್ಲಿ ಭಾರತದ ಬಿಲ್ಲುಗಾರಿಕೆ ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಅಂಕಿತಾ ಭಕತ್, ಕೀರ್ತಿ ಹಾಗೂ ಕುಮ್‌ಕುಮ್ ಅನಿಲ್ ಮೊಹೋಡ್ ಅವರನ್ನೊಳಗೊಂಡ ಭಾರತೀಯ ಮಹಿಳಾ ತ್ರಿವಳಿ ಪಡೆ, ಬಲಶಾಲಿ ದಕ್ಷಿಣ ಕೊರಿಯಾ ತಂಡವನ್ನು ರೋಚಕ ಫೈನಲ್‌ನಲ್ಲಿ ಮಣಿಸಿ ಭಾರತಕ್ಕೆ ಪ್ರಥಮ ಬಾರಿಗೆ ಏಷ್ಯನ್ ಗೇಮ್ಸ್ ರಿಕರ್ವ್ ಮಹಿಳಾ ತಂಡ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟಿದೆ.ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತದ ಮಹಿಳಾ ರಿಕರ್ವ್ ತಂಡವು ಎಂದಿಗೂ ಫೈನಲ್ ಪ್ರವೇಶಿಸಿರಲಿಲ್ಲ. ಆದರೆ ಈ ಬಾರಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಪಡೆ, ಕೌಂಗ್ ಚೇಯಂಗ್, ಲೀ ಯುಂಜಿ ಹಾಗೂ ಓ ಯೇಜಿನ್ ಅವರನ್ನೊಳಗೊಂಡ ಬಲಶಾಲಿ ಕೊರಿಯನ್ ತಂಡಕ್ಕೆ ಶಾಕ್ ನೀಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.ಆರಂಭಿಕ ಎಂಡ್ : ಸ್ಕೋರ್ 54-54 (ಸಮಬಲ 1-1) ಫೈನಲ್‌ನ ಮೊದಲ ಎಂಡ್‌ನ ಆರಂಭಿಕ 3 ಬಾಣಗಳ ಹೊಡೆತದಲ್ಲಿ ಭಾರತ 28-26 ರ ಮುನ್ನಡೆ ಸಾಧಿಸಿತು. ಆದರೆ, ನಂತರ ಕೀರ್ತಿ ಅವರು 7 ಅಂಕಕ್ಕೆ ಗುರಿ ನೆಟ್ಟು ಸಣ್ಣ ಹಿನ್ನಡೆ ಅನುಭವಿಸಿದರು. ಈ ಹಂತದಲ್ಲಿ ಸಮಯಪ್ರಜ್ಞೆ ಮೆರೆದ ಕುಮ್‌ಕುಮ್, ಕೊನೆಯ ಬಾಣದಲ್ಲಿ '10' ಅಂಕಗಳ ಬುಲ್‌ಐ ಹೊಡೆಯುವ ಮೂಲಕ 54-54 ರಿಂದ ಎಂಡ್ ಸಮಬಲಗೊಳ್ಳುವಂತೆ ಮಾಡಿದರು. ಇದರಿಂದ ಉಭಯ ತಂಡಗಳು 1-1 ಸೆಟ್ ಪಾಯಿಂಟ್ ಹಂಚಿಕೊಂಡವು.ಎರಡನೇ ಎಂಡ್‌ನಲ್ಲಿ ದಕ್ಷಿಣ ಕೊರಿಯಾ ಮೊದಲ 3 ಯತ್ನಗಳಲ್ಲಿ 10-9-9 (28 ಅಂಕ) ಗಳಿಸಿತು. ಭಾರತದ ಪರ ಅಂಕಿತಾ '10' ರೊಂದಿಗೆ ಶುಭಾರಂಭ ಮಾಡಿದರೂ ಕೀರ್ತಿ ಮತ್ತೆ `8' ಗಳಿಸಿ ಹಿನ್ನಡೆ ತಂದಿತ್ತರು. ಆದರೆ ಕುಮ್‌ಕುಮ್ ಮತ್ತೆ ರಕ್ಷಣೆಗೆ ನಿಂತು '10' ಬಾರಿಸಿ 28-28 ರ ಸಮಬಲ ತಂದರು. ಮುಂದಿನ 3 ಯತ್ನಗಳಲ್ಲೂ ಕೊರಿಯಾ 28 ಅಂಕ ಬಾಗಿಸಿ ಒಟ್ಟು 56 ಅಂಕ ಗಳಿಸಿತು. ಒತ್ತಡದ ನಡುವೆಯೂ ಅಂಕಿತಾ (10) ಹಾಗೂ ಕುಮ್‌ಕುಮ್ (10) ಅವರ ಪ್ರದರ್ಶನದಿಂದ ಭಾರತ ಮತ್ತೆ 56-56 ರ ಸಮಬಲ ಸಾಧಿಸಿ, ಸೆಟ್ ಪಾಯಿಂಟ್ಸ್ ಅನ್ನು 2-2 ಮಾಡಿಕೊಂಡಿತು.ಮೂರನೇ ಎಂಡ್ : ಭಾರತಕ್ಕೆ 55-51ರ ಮುನ್ನಡೆ (ಸೆಟ್ ಪಾಯಿಂಟ್ಸ್ 4-2)ಮೂರನೇ ಎಂಡ್‌ನಲ್ಲಿ ಭಾರತ ಕ್ರಮಾಂಕ ಬದಲಿಸಿ, ಕೀರ್ತಿ ಅವರನ್ನು ಮೊದಲು ಕಣಕ್ಕಿಳಿಸಿತು. ತಪುö್ಪ ತಿದ್ದುಕೊಂಡ ಕೀರ್ತಿ '10' ಅಂಕ ಗಳಿಸಿದರೆ, ಅಂಕಿತಾ ಮತ್ತು ಕುಮ್‌ಕುಮ್ ತಲಾ `9' ಬಾರಿಸಿ 28-27ರ ಸಣ್ಣ ಮುನ್ನಡೆ ಒದಗಿಸಿದರು. ಕೊರಿಯನ್ ಬಿಲ್ಲುಗಾರ್ತಿಯರು ಒತ್ತಡಕ್ಕೆ ಸಿಲುಕಿ ಕೊನೆಯ 3 ಯತ್ನಗಳಲ್ಲಿ ತಲಾ 8 ಅಂಕಗಳನ್ನಷ್ಟೇ ಗಳಿಸಿದರು. ಇದನ್ನು ಸರಿಯಾಗಿ ಬಳಸಿಕೊಂಡ ಭಾರತೀಯ ಆಟಗಾರ್ತಿಯರು 8-9-10 ಬಾರಿಸುವ ಮೂಲಕ 3ನೇ ಎಂಡ್ ಅನ್ನು 55-51 
ರಿಂದ ಗೆದ್ದು 4-2 ರ ಸ್ಪಷ್ಟ ಮುನ್ನಡೆ ಸಾಧಿಸಿದರು.ನಾಲ್ಕನೇ ಎಂಡ್ : ಕೊನೆಯ ಬಾಣದಲ್ಲಿ 10 ಬಾರಿಸಿ ಇತಿಹಾಸ ಬರೆದ ಕುಮ್‌ಕುಮ್!ಅಂತಿಮ ಹಾಗೂ ನಿರ್ಣಾಯಕ ಎಂಡ್‌ನಲ್ಲಿ ಕೊರಿಯಾ ಮೊದಲ 3 ಯತ್ನಗಳಲ್ಲಿ 28 ಅಂಕಗಳಿಸಿತು (9-9-10). ಭಾರತದ ಪರ ಕೀರ್ತಿ (9), ಅಂಕಿತಾ (8) ಹಾಗೂ ಕುಮ್‌ಕುಮ್ (8) ಗಳಿಸಿ ಅರ್ಧದಷ್ಟರಲ್ಲಿ 25-28 ರಿಂದ ಹಿನ್ನಡೆಯಲ್ಲಿದ್ದರು. ನಂತರ ಕೊರಿಯಾ ತನ್ನ ಉಳಿದ 3 ಯತ್ನಗಳಲ್ಲಿ 8, 9, 9 ಬಾರಿಸಿ ಒಟ್ಟು 54 ಅಂಕಗಳೊಂದಿಗೆ ಮುಗಿಸಿತು.ಚಿನ್ನದ ಪದಕ ಗೆಲ್ಲಲು ಭಾರತಕ್ಕೆ ಕೊನೆಯ 3 ಬಾಣಗಳಲ್ಲಿ ಎರಡು 9 ಹಾಗೂ ಒಂದು 10 ಅಂಕಗಳ ಅಗತ್ಯವಿತ್ತು. ಕೀರ್ತಿ `9' ಹಾಗೂ ಅಂಕಿತಾ `9' ಬಾರಿಸಿ ಆಸೆ ಜೀವಂತವಾಗಿರಿಸಿದರು. ಕೊನೆಯ ಬಾಣ ಎಸೆಯಲು ಬಂದ ಕುಮ್‌ಕುಮ್ ಅನಿಲ್ ಮೊಹೋಡ್, ಇಡೀ ಭಾರತವೇ ಉಸಿರುಬಿಗಿಡಿದು ನೋಡುತ್ತಿದ್ದಾಗ ಕರಾರುವಾಕ್ಕಾಗಿ '10' ಅಂಕಗಳ ಬುಲ್‌ಐ ಹೊಡೆಯುವ ಮೂಲಕ ಸೆಟ್ ಅನ್ನು 54-54 ರಿಂದ ಸಮಬಲಗೊಳಿಸಿ, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕವನ್ನು ತಂದುಕೊಟ್ಟರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೋವಿಂದರಾಜನಗರ ಪ್ರಥಮ ಮಹಿಳಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಪತ್ರಕರ್ತೆ ಪದ್ಮ ನಾಗರಾಜು ಕನ್ನಡ ಜಾನಪದ ಪರಿಷತ್ತಿನಿಂದ ಅಧಿಕೃತ ಆಹ್ವಾನಮತ್ತೆ 2 ಅರ್ಜಿ ಸಲ್ಲಿಸಿದ  ಆರೋಪಿ, ನಟ ದರ್ಶನ್ದೆಹಲಿಯಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಧರಣಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರಾಜಕೀಯ ಕೆಸರೆರಚಾಟರಾಜ್‌ಘಾಟ್‌ನಲ್ಲಿ ಗಾಂಧಿ ಸಮಾಧಿಗೆ ಪ್ರಧಾನಿ ಗೌರವಬಡ ಮಕ್ಕಳ ಶಿಕ್ಷಣಕ್ಕಾಗಿ ರೂ.30 ಕೋಟಿ ಮೌಲ್ಯದ 10 ಎಕರೆ ಭೂಮಿ ದಾನಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿನಗು-ಬದುಕಿನ ಮೌನ ಭಾಷೆ50 ಲಕ್ಷ ಮತದಾರರನ್ನು ಕೈಬಿಡುವ ಷಡ್ಯಂತ್ರದ ಆರೋಪ ಮಾಡಿರುವ ಸಿಎಂ ಡಿಕೆಶಿ ಅದನ್ನು ಸಾಬೀತು ಪಡಿಸಲಿ, ಇಲ್ಲವೇ ರಾಜೀನಾಮೆ ನೀಡಲಿ: ಬಿ.ವೈ.ವಿಜಯೇಂದ್ರ ಆಗ್ರಹ