LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಪಿತೃಪಕ್ಷ: ಪಂಚಭೂತಗಳ ಹಿನ್ನೆಲೆಯಲ್ಲಿ ಬಂಧುತ್ವದ ಚಿಂತನೆ


ನಾವು ಇಂದು ಒಂದು ವಿಚಿತ್ರ ಕಾಲದಲ್ಲಿ ಬದುಕುತ್ತಿದ್ದೇವೆ. ಮಾಡಬಾರದ್ದನ್ನೆಲ್ಲ ಮಾಡಿ, ಹಾಡಬಾರದ್ದನ್ನೆಲ್ಲ ಹಾಡಿ, ಕೊನೆಗೆ ದೇವರ ಮೊರೆ ಹೋಗಿ ವಿಶೇಷ ಪೂಜೆ, ಹರಕೆ ಮಾಡಿಸಿದರೆ ಪಾಪ ಪರಿಹಾರವಾಗುತ್ತದೆ ಎಂದು ನಂಬುತ್ತೇವೆ. ಆ ಪೂಜೆ ಮೂರ್ಖತನವಲ್ಲವೇ?, ಈ ಪ್ರಶ್ನೆಯೊಂದಿಗೆ ಪಿತೃಪಕ್ಷವನ್ನು ನಾವು ಅರ್ಥ ಮಾಡಿಕೊಳ್ಳಬೇಕು.
1. ಪಿತೃಪಕ್ಷ ಎಂದರೇನು?, ಖಗೋಳದ ಸತ್ಯ
ಇಂದಿನ ಪೂರ್ವಿಕರ ಮಾತಿನಂತೆ..
“ಪಕ್ಷ” ಎಂದರೆ 15 ದಿನ. ಚಂದ್ರ ಭೂಮಿಯನ್ನು ಸುತ್ತಲು 30 ದಿನ ತೆಗೆದುಕೊಳ್ಳುತ್ತಾನೆ.
- ಶುಕ್ಲ ಪಕ್ಷ: ಅಮಾವಾಸ್ಯೆಯಿಂದ ಹುಣ್ಣಿಮೆವರೆಗೆ - ಚಂದ್ರ ಬೆಳೆಯುವ ಬೆಳಕಿನ 15 ದಿನ.
- ಕೃಷ್ಣ ಪಕ್ಷ: ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ - ಚಂದ್ರ ಕರಗುವ ಕತ್ತಲೆಯ 15 ದಿನ.!
ನಾವು ಆಚರಿಸುವ ಪಿತೃಪಕ್ಷವು  ಕೃಷ್ಣ ಪಕ್ಷದಲ್ಲಿ ಬರುತ್ತದೆ. ಭಾದ್ರಪದ ಹುಣ್ಣಿಮೆಯಿಂದ ಆಶ್ವಯುಜ ಅಮಾವಾಸ್ಯೆವರೆಗಿನ 15 ದಿನಗಳೇ ಪಿತೃಪಕ್ಷ. ನಮ್ಮ ಹಿರಿಯರು ಇದನ್ನು “ಪಿತೃಗಳ ಪರವಾಗಿ, ಅವರ ಜೊತೆ ನಿಲ್ಲುವ 15 ದಿನ” ಎಂದು ಕರೆದರು. ಪಕ್ಷ ಎಂದರೆ ಬೆಂಬಲಕ್ಕೆ ನಿಲ್ಲುವುದು ಎಂದೂ ಅರ್ಥ. ಇದು ಭಯದ ಪಕ್ಷವಲ್ಲ, ಕೃತಜ್ಞತೆಯ ಪಕ್ಷ.
2. ಪಂಚಭೂತಗಳೇ ನಿಜವಾದ ದೇವರು - ವೈಚಾರಿಕ ನೋಟ
ನಮ್ಮ ದೇಹ ಪಂಚಭೂತಗಳಿAದ ಆಗಿದೆ - ಗಾಳಿ, ನೀರು, ಬೆಂಕಿ, ಭೂಮಿ, ಆಕಾಶ. ಇವು ಒಂದು ದಿನ ರಜೆ ತೆಗೆದುಕೊಂಡರೆ ಜಗತ್ತಿನ ಕಥೆ ಏನು?.
“ಒಂದು ದಿನ ಹಬ್ಬ ಮಾಡದಿದ್ದರೂ ನಡೆಯುತ್ತದೆ, ಶಾಲೆ ಬಂದ್ ಮಾಡಿದರೂ ನಡೆಯುತ್ತದೆ. ಆದರೆ ಗಾಳಿ, ನೀರು, ಬೆಂಕಿ ಭೂಮಿ.ಆಕಾಶ,ಒಂದು ದಿನ ರಜೆ ತೆಗೆದುಕೊಂಡರೆ?” ನಿಮ್ಮ ಕಥೆ ಏನು..!?
- ಗಾಳಿಗೆ ನಾವು ಪೂಜೆ ಮಾಡುವುದಿಲ್ಲ, ಆದರೂ ಅದು ಉಸಿರು ಕೊಡುತ್ತದೆ.
- ನೀರಿಗೆ ನಾವು ಹರಕೆ ಹೊರುವುದಿಲ್ಲ, ಆದರೂ ಅದು ಜೀವ ಕೊಡುತ್ತದೆ.
- ಭೂಮಿ ತಾಯಿ ಏನನ್ನೂ ಕೇಳದೆ ಬೆಳೆ ಕೊಡುತ್ತಾಳೆ.
ನಿಜವಾದ ಧಾರ್ಮಿಕತೆ ಎಂದರೆ ಈ ಪಂಚಭೂತಗಳನ್ನು ಕಾಪಾಡುವುದೇ ಹೊರತು, ಅವುಗಳನ್ನು ಮಲಿನ ಮಾಡುವುದಲ್ಲ.
3. ಎಡೆಗಿಟ್ಟ ಅನ್ನ, ಪ್ಲಾಸ್ಟಿಕ್ ಎಲೆ, ಕೆಮಿಕಲ್ ಹೊಗೆ - ಮೂರು ದೊಡ್ಡ ಅಪಾಯ
ನಮ್ಮ ಹಿರಿಯರು ಹೇಳಿದ ಪಿತೃಪಕ್ಷದ ಮೂಲ ಉದ್ದೇಶ - ಬಂಧು-ಬಳಗ, ಹೆಣ್ಣು ಮಕ್ಕಳು ಒಂದೆಡೆ ಸೇರುವುದು, ಹಿರಿಯರನ್ನು ನೆನೆಯುವುದು. ಇದು ಬಾಂಧವ್ಯದ ಸಂಕೇತ. ಆದರೆ ಇಂದು ಇದರ ಮೇಲೆ ಮೂಢನಂಬಿಕೆಯ ಕಸ ತುಂಬಲಾಗಿದೆ.
ಅ) ಎಡೆಗಿಟ್ಟ ಅನ್ನ: ಬೆಳಿಗ್ಗೆ ಇಟ್ಟ ಅನ್ನ ಮಧ್ಯಾಹ್ನದವರೆಗೆ ಹಾಳಾಗಿ, ಬ್ಯಾಕ್ಟೀರಿಯಾ ಸೇರಿಕೊಂಡು ವಿಷವಾಗುತ್ತದೆ. ಅದನ್ನು ಪ್ರಸಾದ ಎಂದು ತಿನ್ನುವುದು ರೋಗಕ್ಕೆ ಆಹ್ವಾನ.  ಅನ್ನದ ಕಾಲಾವಧಿ ಮುಗಿಯುವ ಮುಂಚೆಯೇ..ಹಸಿದ ಬಡವನಿಗೆ ಜಲಚರಗಳಿಗೆ ಆ ಎಡೆ ಅನ್ನ ಕೊಟ್ಟರೆ ಅದು ನಿಜವಾದ ತರ್ಪಣ.
ಆ) ಪ್ಲಾಸ್ಟಿಕ್ ಎಲೆಯ ವಿಷ: ಬಿಸಿ ಅನ್ನ, 80 ಡಿಗ್ರಿ ಬಿಸಿ ಸಾಂಬಾರನ್ನು ಪ್ಲಾಸ್ಟಿಕ್ ಲೇಪಿತ ಎಲೆಯ ಮೇಲೆ ಹಾಕಿದಾಗ ಪ್ಲಾಸ್ಟಿಕ್ ಕರಗಿ ಮೈಕ್ರೋಪ್ಲಾಸ್ಟಿಕ್ ನೇರವಾಗಿ ಆಹಾರಕ್ಕೆ ಸೇರುತ್ತದೆ. ಇದು ಕ್ಯಾನ್ಸರ್, ಹಾರ್ಮೋನ್ ಸಮಸ್ಯೆಗೆ ಕಾರಣ. ಇದು ಧರ್ಮವಲ್ಲ, ಅಧರ್ಮ. ಉಪಾಯ: 
ಪ್ಲಾಸ್ಟಿಕ್ ಎಲೆಗಳನ್ನು ಬಳಸುವ ಬದಲು..
ಬಾಳೆ ಎಲೆ, ಅಡಿಕೆಪಟ್ಟೆ ಎಲೆ ಮುತ್ತುಗದ ಎಲೆ .ತಾವರೆ ಎಲೆ.ಅಥವಾ ಸ್ಟೀಲ್ ತಟ್ಟೆ ಬಳಸಿ.. ಕಂಚಿನ ಕಟ್ಟೆ...!ಬಳಸಿ
ಇ) ಕೆಮಿಕಲ್ ಹೊಗೆ: ಮಾರುಕಟ್ಟೆಯ ಶೇ.90 ಅಗರಬತ್ತಿ, ಕರ್ಪೂರ, ಸಾಮ್ರಾಣಿಯಲ್ಲಿ ಬೆಂಜೀನ್, ಫಾರ್ಮಾಲ್ಡಿಹೈಡ್ ವಿಷ ಇದೆ. ಸಣ್ಣ ಮನೆಯಲ್ಲಿ ದಿನಾ ಈ ಹೊಗೆ ಕುಡಿದರೆ ಮಕ್ಕಳಿಗೆ ಅಸ್ತಮಾ ಗ್ಯಾರಂಟಿ. ದೇವರಿಗೆ ನಿಜವಾದ ಹೂವು, ಒಂದು ದೀಪ ಸಾಕು.
4. ವಂಚನೆಗೆ ಧಿಕ್ಕಾರ: ಕಾಗೆ, ಜಾತಿ, ಜ್ಯೋತಿಷ್ಯದ ಸುಳ್ಳು
“ಕಾಗೆಗೆ ಇಡಿ, ಪಿತೃಗಳಿಗೆ ಸೇರುತ್ತದೆ”, “ಬ್ರಾಹ್ಮಣರಿಗೆ ದಾನ ಮಾಡಿದರೆ ಪುಣ್ಯ” ಎಂದು ಹೇಳಿ ಅಮಾಯಕರನ್ನು ಹೆದರಿಸುವುದು ಕೆಲವರ ಹೊಟ್ಟೆಪಾಡಿನ ತಂತ್ರ. ಕಾಗೆ ಪರಿಸರದ ಸ್ವಚ್ಛತಾ ಕೆಲಸಗಾರ, ಅದಕ್ಕೂ ಪಿತೃಗಳಿಗೂ ಸಂಬAಧವಿಲ್ಲ.
“ಇAತಹವರೇ ಕುರಿ ಕೊಯ್ಯಬೇಕು, ಬಲಿ ಕೊಡಬೇಕು ಇಂತಹವರೇ ಎಡೆ ಹೊರಬೇಕು” ಎಂದು ಜಾತಿ , ಧರ್ಮ ಮಾಡುವುದು,
ಇಂಥವರಿಗೆ ದಾನ ಮಾಡಬೇಕೆಂದು ಜಾತಿ ಧರ್ಮದ ಭೇದ ಭಾವ ಮಾಡುವುದು ಮೌಢ್ಯದ ಪರಮಾವಧಿ. ಕೊಯ್ದ ಮೇಲೆ ಎಲ್ಲಾ ಮಾಂಸ ಒಂದೇ, ಎಲ್ಲಾ ರಕ್ತ ಕೆಂಪೇ.
ವಸ್ತುಗಳು ಸಹ ಮಾನವ ನಿರ್ಮಿತವೇ..!
ನೂರು ಜ್ಯೋತಿಷ್ಯದ ಸುಳ್ಳಿಗಿಂತ, ಒಂದು ಬೆವರಿನ ಹನಿ ದೊಡ್ಡದು. ಹೂ ಮಾರುವವನ ಬೆವರು ದೇವರಿಗೆ ಸಮ, ಹಣ್ಣು ಮಾರುವವನ ದುಡಿಮೆ ಪೂಜೆಗೆ ಸಮ.
5. ಹಬ್ಬದ ಹೆಸರಿನಲ್ಲಿ ಸಾಲ ಮತ್ತು ಪರಿಸರ ನಾಶ
- ಗಣೇಶೋತ್ಸವ: ಪಿ.ಒ.ಪಿ ಗಣಪತಿಯಿಂದ ಕೆರೆ, ನದಿ ನೀರು ಮಲಿನ, ಬಣ್ಣದ ವಿಷದಿಂದ ಮೀನುಗಳಿಗೆ ಸಾವು.
- ದಸರಾ: ತಿನ್ನುವ ಕುಂಬಳಕಾಯಿಯನ್ನು ರಸ್ತೆಯಲ್ಲಿ ಹೊಡೆದು ಆಹಾರ ವ್ಯರ್ಥ.
- ದೀಪಾವಳಿ: ಪಟಾಕಿಯ ಶಬ್ದ-ಹೊಗೆಯಿಂದ ಹೃದಯಾಘಾತ, ಅಸ್ತಮಾ. ಇಂದು ಹೃದಯಾಘಾತ ಹೆಚ್ಚಾಗಲು ಈ ಮಾಲಿನ್ಯವೂ ಒಂದು ಕಾರಣ.
ಹಬ್ಬಕ್ಕಾಗಿ ಸಾಲ ಮಾಡಿ ಬಡ್ಡಿ ಕಟ್ಟಿ ಇಡೀ ವರ್ಷ ಅಳುವುದು ಯಾವ ಸಂಪ್ರದಾಯ?
6. ನಾವು ಏನು ಮಾಡಬೇಕು? ಬಂಧುತ್ವದ, ವೈಜ್ಞಾನಿಕ ಹಬ್ಬ
1.  ಪಿತೃಪಕ್ಷವನ್ನು ಮಿಲನ ದಿನವನ್ನಾಗಿ ಮಾಡೋಣ: ಹೆಣ್ಣು ಮಕ್ಕಳು, ಬಂಧುಗಳನ್ನು ಕರೆದು ಹಿರಿಯರ ಫೋಟೋ ಇಟ್ಟು ಅವರ ಕಥೆ ಹೇಳೋಣ. ಅವರ ಹೆಸರಿನಲ್ಲಿ ಒಂದು ಗಿಡ ನೆಡೋಣ, ಬಡ ವಿದ್ಯಾರ್ಥಿಗೆ ಪುಸ್ತಕ, ರಕ್ತದಾನ ಮಾಡೋಣ.
ಬಂಧು ಬಾಂಧವ್ಯದ ಹಬ್ಬ ಮಾಡೋಣ
2.  ಪ್ಲಾಸ್ಟಿಕ್ ಬ್ಯಾನ್: ಬಾಳೆ ಎಲೆ, ಅಡಿಕೆಪಟ್ಟೆ ಎಲೆ. ಮುತ್ತುಗದಎಲೆ. ತಾವರೆ ಎಲೆಯ  ಎಲೆಗಳು.ಪರಿಸರ ಯುಕ್ತ ಊಟದಎಲೆಗಳು..ಸ್ಟೀಲ್ ತಟ್ಟೆ.ಕಂಚಿನತಟ್ಟೆ ಮಾತ್ರ.
3.  ಕೆಮಿಕಲ್ ಬೇಡ: ಕೆಮಿಕಲ್ ಧೂಪದ ಬದಲು  ಹೂವು, ಮೂಲವಾದ ಗಂಧದ ಚಕ್ಕೆ. ಒಂದು ದೀಪ ಸಾಕು.
4  ಬದುಕಿರುವ ಪಿತೃಗಳನ್ನು ಗೌರವಿಸಿ: ಸತ್ತ ಮೇಲೆ ತರ್ಪಣಕ್ಕಿಂತ, ಬದುಕಿರುವಾಗಲೇ ತಂದೆ-ತಾಯಿಯ ಹೊಟ್ಟೆ ತುಂಬಿಸುವುದೇ ದೊಡ್ಡ ಪಿತೃಪಕ್ಷ.
ಕೊನೆಯ ಮಾತು:
ಪಿತೃಪಕ್ಷ ಎಂದರೆ ಸತ್ತವರಿಗೆ ಹೆದರುವ ಪಕ್ಷವಲ್ಲ..
ಬದುಕನ್ನು ಕಟ್ಟಿಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುವ ಪಕ್ಷ. ..
ತೆನೆ ಬಿಟ್ಟ ಪೈರು ಬಾಗುವಂತೆ.., ನಮ್ಮ ಹಿರಿಯರ ಮುಂದೆ ವಿನಮ್ರತೆಯಿಂದ ಬಾಗೋಣ...
ಹಬ್ಬವೆಂದರೆ ಭಯವಲ್ಲ, ಬಾಂಧವ್ಯ. ..
ಆಡಂಬರವಲ್ಲ, ಆರೋಗ್ಯ. ..
ಮೌಢ್ಯವಲ್ಲ, ಮಾನವೀಯತೆ...
ಸುಳ್ಳು ಹೇಳಿ ಬದುಕುವ ಜ್ಯೋತಿಷ್ಯ ಬೇಡ, ಬೆವರು ಸುರಿಸಿ ದುಡಿಯುವವನಿಗೆ ಬೆಂಬಲವಿರಲಿ! ಇದು ಬಂದೂಕಿನ ಭಾರತವಲ್ಲ, ಇದು ಬಂಧುತ್ವದ ಭಾರತ.
- ಎ.ಬಿ. ಶಿವರಾಜ, ಪತ್ರಕರ್ತ
ಬಂಧುತ್ವ ಭಾರತಕ್ಕಾಗಿ.
ಬಂಧುತ್ವ ಭಾರತ ವಿಚಾರ ವೇದಿಕೆ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST