ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್, ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪುö್ಪ ಇಹಲೋಕ ತ್ಯಜಿಸಿ ಇಂದಿಗೆ 5 ವರ್ಷಗಳು ಕಳೆದಿದೆ. 5 ವರ್ಷಗಳ ಕಾಲ ಅವರಿಲ್ಲದ ಮನಸ್ಸು ಎಷ್ಟು ಭಾರ ಎಂಬುದು ಅವರನ್ನು ಬಹಳ ಹತ್ತಿರದಿಂದ ಬಲ್ಲ ಮನಸ್ಸುಗಳಿಗೆ ಮಾತ್ರ ಗೊತ್ತಾಗುವುದು. ಇಂದಿಗೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪುö್ಪ ಆಗಲಿ 5 ವರ್ಷಗಳು ಕಳೆದಿದೆ. ಕೆಲವರು ಇನ್ನು ಅವರ ನೆನಪಿನಲ್ಲಿ ಇದ್ರೆ, ಇನ್ನು ಕೆಲವರು ಅವರು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಜೀವಂತವಾಗಿ ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆಯಲ್ಲಿ ಬದುಕು ನಡೆಸುತ್ತಿದ್ದಾರೆ. "ಜೊತೆಗಿರದ ಜೀವ, ಎಂದೆಂದಿಗೂ ಜೀವಂತ!" ಎಂಬ ಮಾತಿನಂತೆ ಅಪ್ಪು ಭೌತಿಕವಾಗಿ ನಮ್ಮನ್ನು ಆಗಲಿದ್ರೂ, ಅವರು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ಸದಾಕಾಲ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಅದು ಅಕ್ಟೋಬರ್ 29, 2021. ಯಾರೂ ಊಹಿಸಿರದ, ನಿರೀಕ್ಷೆಯೇ ಮಾಡಿರದ ಸುದ್ದಿಯೊಂದು ಕನ್ನಡಿಗರ ಕಿವಿ ಬಂದು ಹಠಾತ್ತನೇ ಬಿತ್ತು. ಅದುವೇ "ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ" ಎಂಬುದು. ಇದು ನಿಜವೋ, ಸುಳ್ಳೋ
ಎಂಬುದನ್ನು ಅರ್ಥೆÊಸಿಕೊಳ್ಳುವುದ ರಲ್ಲೇ ಕೆಲಕಾಲ ಸಾಗಿತಾದ್ರೂ, ಯಾವೊಬ್ಬ ಕನ್ನಡಿಗನು ಈ ಸುದ್ದಿ ಸುಳ್ಳಾಗಲಿ ಎಂದು ದೇವರ ಮುಂದೆ ಕೈ ಜೋಡಿಸಿ ಬೇಡಿಕೊಂ ಡಿದ್ದು ಮಾತ್ರ ಸುಳ್ಳಲ್ಲ. ಆದ್ರೆ, ವಿಧಿಯಾಟ. ವಿಧಿ ಹಾಗೂ ದೇವರ ಮುಂದೆ ನಾವೆಲ್ಲಾ ಹುಲು ಮಾನವರೇ. "ಆಡಿಸಿದಾಗ ಬೇಸರ ಮೂಡಿ ಆಟ ಮುಗಿಸಿದ" ಎಂಬ "ಕಸ್ತೂರಿ ನಿವಾಸ" ಚಿತ್ರದ ಗೀತೆಯ ಸಾಲಿನಂತೆ ಅಪ್ಪು ಬಂದ ದಾರಿಯ ಪ್ರಯಾಣ ಮುಗಿಸಿ ನಮ್ಮನ್ನೆಲ್ಲಾ ಬಿಟ್ಟು ಅವರ ಹಾದಿ ಹಿಡಿದುಬಿಟ್ಟರು. ಕೇವಲ ಅವರ ಕುಟುಂಬಸ್ಥರು ಮಾತ್ರವಲ್ಲದೇ, ಇಡೀ ಚಿತ್ರರಂಗ ಮಾತ್ರ ವಲ್ಲದೇ, ರಾಜ್ಯದ ಜನರೆಲ್ಲಾ ಅಪುö್ಪ ನಿಧನಕ್ಕೆ ಕಂಬನಿ ಮಿಡಿದಿದ್ದು, ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದಂತೂ ಮರೆಯುವಂತಿಲ್ಲ. 2021 ರ ಅಕ್ಟೋಬರ್ 29 ರಂದು ಎಂದಿನಂತೆ ನಿತ್ಯ ಕರ್ಮಗಳನ್ನು ಮುಗಿಸಿದ್ದ ಪುನೀತ್ ರಾಜ್‌ಕುಮಾರ್‌ಗೆ ಎದೆ ನೋವು ಕಾಣಿಸಿಕೊಂಡಿತ್ತು. ಮನೆಯಲ್ಲಿದ್ದ ಪತ್ನಿಯ ಬಳಿ ಎದೆ ನೋವು ಎಂಬ ವಿಚಾರ ತಿಳಿಸಿ
ಅಪ್ಪು ರನ್ನ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ರು. ಆದ್ರೆ, ವಿಧಿ ಮಾರ್ಗ ಮಧ್ಯೆಯೇ ಅಪ್ಪು ಅವರ ಉಸಿರು ಕಸಿದಿದ್ದು. ಯಾರೂ ಕೂಡ ಊಹಿಸದೇ ಇದ್ದ ಈ ಘಟನೆ ನಡೆದು ಇಂದಿಗೆ 5 ವರ್ಷಗಳು ಕಳೆದಿದೆ.ಅದ್ರೆ, ಇದೆಲ್ಲದರ ಮಧ್ಯೆ ಇಂದು ಅಪ್ಪು ಅವರ 5 ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅವರ ಸಮಾಧಿಗೆ ಸಾವಿರಾರು ಅವರ ಅಭಿಮಾನಿಗಳು ಭೇಟಿ ನೀಡಿ ನಮಸ್ಕಾರ ಮಾಡುತ್ತಿದ್ದಾರೆ. ಇನ್ನು ಅವರ ಕುಟುಂಬಸ್ಥರು ಕೂಡ ಅಪ್ಪುಸಮಾಧಿ ಬಳಿ ಬಂದು ಪೂಜೆ ನೆರವೇರಿಸಿದ್ದಾರೆ. ಸ್ಯಾಂಡಲ್ ವುಡ್‌ನ ಪವರ್ ಸ್ಟಾರ್, ಕರ್ನಾಟಕ ರತ್ನ, ನಗುವಿನ ರಾಜಕುಮಾರ ಎಂದೆಂದಿಗೂ ನಮ್ಮ ಹಾಗೂ ನಮ್ಮ ಮನಸ್ಸಿನಲ್ಲಿ ರಾರಾಜಿ ಸುತ್ತಲೇ ಇರುತ್ತಾರೆ. ಇಂದು ಅವರ ಪುಣ್ಮ ಸ್ಮರಣೆಯ ಸಂದರ್ಭ ದಲ್ಲಿ "ಇಂದು ಸಂಜೆ" ತಂಡ ಕೂಡ ಅವರನ್ನು ನೆನಪು ಮಾಡಿ ಕೊಳ್ಳುತ್ತಿದೆ.
ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಪ್ಪು, ಭಕ್ತಪ್ರಹ್ಲಾದ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ. ಚಲಿಸುವ ಮೋಡಗಳು, ವಸಂತ ಗೀತಾ, ಯಾರಿವನು? ಚಿತ್ರಗಳು ಆತನ ಬಾಲ ಪ್ರತಿಭೆಗೆ ಹಿಡಿದ ಕೈಗನ್ನಡಿ. ಇನ್ನು ಪರಶುರಾಮ್ ಚಿತ್ರದಲ್ಲಿ ಆತ ಹಾಕಿದ್ದ ಸ್ಟೆಪ್ಸ್ ಎಲ್ಲರನ್ನೂ ರಂಜಿಸಿದ್ದು ಸುಳ್ಳಲ್ಲ. ಇತ್ತ ಪೂರ್ಣ ಪ್ರಮಾಣದ ನಾಯಕನಾಗಿ "ಅಪ್ಪು" ಚಿತ್ರದ ಮೂಲಕ ಬಡ್ತಿ ಪಡೆದ ಪುನೀತ್ ರಾಜ್‌ಕುಮಾರ್, ಪವರ್‌ಸ್ಟಾರ್ ಆಗಿ ಬೆಳದಿದ್ದು ಸಾಧನೆಯೇ ಸರಿ. ಅಪ್ಪು, ಅಭಿ, ವೀರ ಕನ್ನಡಿಗ,
ಆಕಾಶ್, ವಂಶಿ, ನಿನ್ನಂದಲೇ, ರಣವಿಕ್ರಮ, ಅಜಯ್, ಮೌರ್ಯ, ಪೃಥ್ವಿ, ಪರಮಾತ್ಮ, ಜಾಕಿ, ಅಣ್ಣಾ ಬಾಂಡ್, ಮಿಲನ ಹೀಗೆ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದು, ಸ್ಯಾಂಡಲ್‌ವುಡ್‌ನ ಕೀರ್ತಿಯನ್ನು ಹೆಚ್ವಿಸುವಂತೆ ಮಾಡಿತ್ತು. ಕರ್ಮಷಿಯಲ್ ಹಿಟ್ ಚಿತ್ರ ರಾಜಕುಮಾರ ಯಾರೂ ಮರೆಯಲು ಸಾಧ್ಯವಿಲ್ಲದಂತಹ ಪಾತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದು ವಿಶೇಷ. ಅನಂತ್ ನಾಗ್, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಂಗಾಯಣ ರಘು ಅಂತಹ ದೈತ್ಯ ಪ್ರತಿಭೆಗಳ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದ ಪುನೀತ್ ರಾಜ್‌ಕುಮಾರ್ ಇಂದು ಸ್ಯಾಂಡಲ್ ವುಡ್‌ನಲ್ಲಿ ಇದ್ದಿದ್ರೆ, ಅಗರೇ ನಂಬರ್ ಒನ್ ಸ್ಟಾರ್ ಆಗಿರುತ್ತಿದ್ರು. ಆದ್ರೆ ಇಂದು ಅವರಿಲ್ಲ. ಆ ನೋವು ಸದಾಕಾಲ ಬಾಧಿಸುತ್ತಲೇ ಇರುತ್ತದೆ. ಕಾಲಾಯಾ ತಸ್ಮೆöÊ ನಮಃ ಅಂತರಲ್ಲ ಹಾಗೇ. ನಾವು ಎಲ್ಲವನ್ನೂ ಮರೆಯಬೇಕು. ಕಾಲದ ಜೊತೆಗೆ ಹೆಜ್ಜೆ ಹಾಕಬೇಕು ಅಷ್ಟೇ.ಪುನೀತ್ ರಾಜ್‌ಕುಮಾರ್ ಇಂದಿಗೂ ಎಂದೆಗೂ, ಎಂದೆAದಿಗೂ ಅಜರಾಮರ.