ನಾವು ಸ್ವತಂತ್ರ ದೇಶವಾಗಿ ಮೂರು ತಲೆಮಾರುಗಳು ಸಾಗಿ ಹೋಗಿದೆ. ನನಗೀಗ ನಾವು ಹಿಂದುಸ್ತಾನಿಗಳೋ, ಭಾರತೀಯರೋ ಅಥವಾ ಇಂಡಿಯನ್ನರೋ ಎಂಬ ಪ್ರಶ್ನೆಯೂ ಕಾಡುತ್ತಿದೆ. ಇವು ಮೂರು ಹೆಸರುಗಳು ನಮ್ಮ ದೇಶದ ವರ್ಣರಂಜಿತ ಇತಿಹಾಸವನ್ನು ಕಾಲ ಗರ್ಭದಲ್ಲಿ ಅವಿತಿಟ್ಟುಕೊಂಡಿದೆ. ಹಿಂದೂಸ್ಥಾನ ಎಂಬ ಹೆಸರನ್ನು ಕ್ರಿ.ಶ 971 -1030 ಘಜ್ನಿ ಮೊಹಮದ್ ಕೊಟ್ಟಿದ್ದ. 1000 - 1027 ರ ಮಧ್ಯೆ 17 ಬಾರಿ ನಮ್ಮ ದೇಶದ ಮೇಲೆ ದಂಡೆತ್ತಿ ಲೂಟಿ ಮಾಡಿದ್ದ. "ಇಂಡಿಯಾ" ಎಂಬ ಹೆಸರು ಪಶ್ಚಿಮದೊಂದಿಗಿನ ನಮ್ಮ ಸಂಪರ್ಕವನ್ನು ನೆನಪಿಸುತ್ತದೆ. ವಾಯುವ್ಯದಲ್ಲಿ ಸಿಂಧೂ ನದಿ ಹರಿಯುತ್ತಿರುವುದು ಮೊದಲಿಗೆ ಗ್ರೀಕರಿಗೆ ತಿಳಿದಿತ್ತು. ಇದನ್ನೇ ಅವರು "ಇಂಡಸ್ " ಎಂದು ಕರೆದರು. ಇದೇ ಇಂಡಸ್ ನಿಂದಾಗಿ "ಇಂಡಿಯಾ" ಆಯಿತು.
ಕಿ.ಪೂ.5ನೇ ಶತಮಾನದಲ್ಲಿ ಗ್ರೀಕ್ ಇತಿಹಾಸಕಾರ ಹಾಗೂ ಭೂಗೋಳ ಶಾಸ್ತçಜ್ಞ ಹೇರಾಡೋಟಸ್ ನಮ್ಮ ದೇಶವನ್ನು "ಇಂಡಿಯಾ" ಎಂದು ಕರೆದ ಮೊದಲ ವಿದೇಶಿಗ. ಇದೇನೇ ಇರಲಿ, ನನ್ನ ದೇಶ ಕೆಲವೇ ಘಂಟೆಗಳಲ್ಲಿ ಸ್ವತಂತ್ರ ದಿನಾಚರಣೆ ಆಚರಿಸಿಕೊಳ್ಳಲು ಶೃಂಗಾರಗೊಳ್ಳುತ್ತದೆ. ನಮ್ಮ ಪಡೆಗಳು ಕವಾಯಿತು ನಡೆಸುವ ಮೂಲಕ ದೇಶದ ಸುರಕ್ಷತೆ ಮತ್ತು ಘನತೆಯ ಬಗ್ಗೆ ಬೀಗುವಂತೆ ಮಾಡಲು ಸಿದ್ಧಗೊಳ್ಳುತ್ತಿದೆ. ಗೊತ್ತಿರಲಿ, ನಮ್ಮ ದೇಶ ಕೃಷಿ ಅವಲಂಬಿತ ಆರ್ಥಿಕತೆಯನ್ನೇ ಮೊದಲಿಗೆ ಹೆಚ್ಚಾಗಿ ನಂಬಿತ್ತು. ಆದರೆ ಇವತ್ತು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿ ರೂಪಾಂತರಗೊAಡಿದೆ. ನಮ್ಮ ಐ.ಟಿ ವಲಯ ಜಾಗತಿಕ ಶಕ್ತಿಯಾಗಿ ಬೆಳೆದಿದೆ . ಉತ್ಪಾದನಾ ಕೇಂದ್ರಗಳು ಹಗಲಿರುಳು ಚಟುವಟಿಕೆಯಿಂದ ಕೂಡಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ದೊಡ್ಡ ಸಾಧನೆ ಮಾಡಿದ್ದೆ. ಇದೆಲ್ಲಕ್ಕಿಂತ ಮಿಗಿಲಾಗಿ 1.45 ಶತಕೋಟಿ ಜನಸಂಖ್ಯೆಯ ನಡುವೆ ನೂರಾರು ಭಾಷೆಗಳನ್ನು, ಸಾವಿರಾರು ಸಾಂಸ್ಕöÈತಿಕ ಎಳೆಗಳನ್ನು ಹೊಂದಿದ್ದರೂ, ದೇಶವಾಸಿಗಳೆಲ್ಲರೂ ಕೂಡಿಕೊಂಡು ಚುನಾವಣೆಯನ್ನು ವಿಶ್ವಾಸವಾಗಿ ನಡೆಸುತ್ತಿದ್ದಾರೆ.
" ವೈವಿಧ್ಯತೆಯಲ್ಲಿ ಏಕತೆ " ಎಂಬ ನುಡಿಗಟ್ಟು ಕೇವಲ ಘೋಷಣೆಯಲ್ಲ . ಅದು ನಮ್ಮೆಲ್ಲರ ವಾಸ್ತವ ಎಂಬಂತೆಯೂ ಬದುಕುತ್ತಿದ್ದೇವೆ ಆದರೂ ನಿಜವಾದ ಪ್ರಾಮಾಣಿಕ ಆಚರಣೆಗೆ "ಆತ್ಮವಲೋಕನ" ಅಗತ್ಯ ಎಂಬುದು ನನ್ನ ಬಲವಾದ ನಂಬಿಕೆ . ಸಂವಿಧಾನದಲ್ಲಿ ಪ್ರತಿಪಾದಿಸಲಾದ "ಸಮಾನತೆ"ಯ ಭರವಸೆ ಕಾಗದದ ಮೇಲೆಯೇ ಉಳಿದಿದೆ . ಅಕ್ಷರ, ಆಹಾರ, ಆರೋಗ್ಯ ಆರ್ಥಿಕತೆ ಕೆಲವೇ ಕೆಲವರ ಸ್ವತ್ತಾಗಿದೆ.ಇದರಲ್ಲಿ ಮತಕ್ಕಾಗಿ ಅಕ್ಷರ, ಆಹಾರ ಕುರಿತಂತೆ ಹಲವು ಯೋಜನೆಗಳು ಬಂದಿವೆಯಾದರೂ "ಆರೋಗ್ಯ" ಮಾತ್ರ ಮರೀಚಿಕೆಯಾಗುಳಿದಿದೆ. ಹಾಗಾದರೆ, ಕಳೆದ 80 ವರ್ಷಗಳಿಂದ ದೇಶವಾಸಿಗಳ ಆರೋಗ್ಯಕ್ಕಾಗಿ ಹೂಡಿರುವ ಹೂಡಿಕೆ ತಲುಪಿರುವುದಾದರೂ ಎಲ್ಲಿಗೆ?ನಮ್ಮ ದೇಶವಾಸಿಗಳ ಅನಾರೋಗ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆರ್ಥಿಕತೆಯ ಮೇಲೆ ಬಹು ದೊಡ್ಡ ಹೊಡೆತವನ್ನು ಬಿದ್ದಿರುವುದನ್ನು ವರದಿಯೊಂದು ಬಹಿರಂಗಪಡಿಸಿದೆ. ಬೈನ್ ಕಂಪನಿ ಮತ್ತು ನೆಟ್ಹೆಲ್ತ÷್ನ ವರದಿಯಂತೆ, ನಮ್ಮ ದೇಶ ಪ್ರತಿವರ್ಷ ಸುಮಾರು 0.8 ರಿಂದ 1 ಟ್ರಿಲಿಯನ್ ಡಾಲರ್ಗಳಷ್ಟು ಆರ್ಥಿಕ ನಷ್ಟವನ್ನು ಎದುರಿಸುತ್ತಿದೆ. ಇಂತಹ ಆರ್ಥಿಕ ನಷ್ಟಕ್ಕೆ ಕಾರಣ, ಜನರು ಕೆಲಸ ಮಾಡಲು ಸಾಧ್ಯವಾಗದಿರುವುದರ ಜೊತೆಗೆ ಅನಾರೋಗ್ಯದಿಂದಾಗಿ ಕೆಲಸ ಮಾಡುವ ಸಾಮರ್ಥ್ಯಕಳೆದುಕೊಳ್ಳುತ್ತಿದ್ದಾರೆ. ನಿಜಕ್ಕೂ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಮಾಡಬೇಕೆಂದರೆ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ. ಜನರ ಆರೋಗ್ಯ ಸುಧಾರಿಸಿದರೆ ಮಾತ್ರ ದೇಶದ ಆರ್ಥಿಕ ಪ್ರಗತಿ ಉಂಟಾಗುತ್ತದೆ. ಹೌದು, ಒಂದು ದೇಶದ ಪ್ರಗತಿಯು ಕೇವಲ ಕೈಗಾರಿಕೆ, ತಂತ್ರಜ್ಞಾನ ಅಥವಾ ಹೂಡಿಕೆಯ ಮೇಲಷ್ಟೇ ಅವಲಂಬಿತವಾಗಿಲ್ಲ.