LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ನೀಟ್ ವೈಫಲ್ಯ ವ್ಯವಸ್ಥೆಯ ಕುಸಿತಕ್ಕೆ ಸಾಕ್ಷಿ..!

NEET-UG ಪರೀಕ್ಷೆ ರದ್ದಾದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯಲ್ಲಿನ ವೈಫಲ್ಯದಿಂದ ದುಃಖಿತನಾಗಿದ್ದ ನನಗೆ ಭವಿಷ್ಯದಲ್ಲಿ ದೇಶವಾಸಿಗಳನ್ನು ಕಾಪಾಡಬೇಕಾದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಮತ್ತು ಅವರುಗಳು ಮಾಡಿಕೊಂಡ ಆತ್ಮಹತ್ಯೆಯ ಸುದ್ದಿ ನನ್ನನ್ನು ಬೆಚ್ಚಿ ಬೀಳಿಸಿದೆ. ಇದರಿಂದಾಗಿ ದಿಗ್ಭ್ರಮೆಗೊಂಡಿದ್ದೇನೆ.ಆದರೂ, ಅವರೊಂದಿಗೆ ಸಂಭಾಷಣೆ ನಡೆಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇದು ಅಂಕಣ ಎಂಬುದು ಗೊತ್ತಿದೆ. ಹಾಗಂತ ನನಗೆ ಉತ್ತರ ಸಿಗದಿರಬಹುದು. ಆದರೆ ಲೇಖನ ಓದುವವರಿಂದ ನಾನು ಪ್ರತಿಕ್ರಿಯೆ ಪಡೆಯುತ್ತೇನೆ. ಒಂದೊಮ್ಮೆ ಅವರಿಂದ ಅವರ ಪ್ರತಿಕ್ರಿಯೆಯಿಂದ ವ್ಯವಸ್ಥೆಯು ವಿಫಲಗೊಂಡಾಗ ಧೈರ್ಯ ಮತ್ತು ಆತ್ಮವಿಶ್ವಾಸದ ಬದಲು ಸ್ವಯಂ ವಿನಾಶವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಯುವಜನರ ಪ್ರವೃತ್ತಿಯನ್ನು ತಡೆಯುವ ಉದ್ದೇಶವೂ ನನ್ನದಾಗಿದೆ.ಮೇ 3 ರಂದು ನಡೆಯಬೇಕಿದ್ದ ಮೂಲ ಪರೀಕ್ಷೆಯನ್ನು ಓಖಿಂ ಮೇ 12 ರಂದು ರದ್ದುಗೊಳಿಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಮೇಲೆ ಹಾಗೂ ಪ್ರಸಾರವಾದ ಊಹೆ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ನಡುವಿನ ಅನುರೂಪತೆ ಗಮನಿಸಿದ ನಂತರ ಮರು ಪರೀಕ್ಷೆಯನ್ನು ಘೋಷಿಸಿತ್ತು.ಮೇ 3ರ ಪರೀಕ್ಷೆಯ ನಂತರ, ರಾಜಸ್ಥಾನದ ಸಿಕಾರ್ ತರಬೇತಿ ಕೇಂದ್ರಗಳಲ್ಲಿ ವಾಟ್ಸಾಪ್ ಮತ್ತು ಇತರೆ ಬಗೆಯ ಮಾಧ್ಯಮಗಳ ಮೂಲಕ ಹಂಚಿಕೊಳ್ಳಲಾದ ಊಹಾ ಪತ್ರಿಕೆಯು ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಅನೇಕ ಪ್ರಶ್ನೆಗಳಿಗೆ ಬಹುತೇಕ ಹೊಂದಿಕೆಯಾಗಲಿವೆ ಎಂಬ ಆರೋಪ ಎದ್ದಿದ್ದವು. ಸಿಕಾರ್ನ ರಸಾಯನಶಾಸ್ತ್ರ ಶಿಕ್ಷಕ ಶಶಿಕಾಂತ್ ಸುತಾರ್, ಅಧಿಕೃತ ಪರೀಕ್ಷಾ ಪತ್ರಿಕೆಯೊಂದಿಗೆ ಹೋಲಿಸಿದ ನಂತರ ಸೋರಿಕೆಯಾದ ಪ್ರಶ್ನೆಗಳ ಪ್ರಸರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುಮಾರು 140 ಪ್ರಶ್ನೆಗಳು ಅದ್ಹೇಗೆ ಹೊಂದಿಕೆಯಾಗುತ್ತವೆ ಎಂದು ಪ್ರಶ್ನಿಸಿದ್ದರು. ಮೊದಲಿಗೆ ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ ಗುಂಪು ತನಿಖೆಯನ್ನು ಪ್ರಾರಂಭಿಸಿತಾದರೂ, ಹಲವರನ್ನು ಬಂಧಿಸಿದ ನಂತರ ಪ್ರಕರಣವನ್ನು ಕೇಂದ್ರ ತನಿಖಾ ದಳ, ಸಿಬಿಐಗೆ ವಹಿಸಲಾಗಿದೆ.2026 ಮೇ 12 ರಂದು, ಎನ್.ಟಿ.ಎ ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗುವುದೆಂದು ಘೋಷಿ ಸಿತು. ಜೊತೆಗೆ ವಿದ್ಯಾರ್ಥಿಗಳು ಪಾವತಿಸಿರುವ ಶುಲ್ಕವನ್ನು ಹಿಂತಿರುಗಿಸಿ. ಹೊಸ ನೋಂದಣಿ ಅಥವಾ ಹೆಚ್ಚುವರಿ ಶುಲ್ಕಗಳನ್ನು ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.ಈಗ ನನಗಿರುವ ಕೋಪ ಸೋರಿಕೆಯಾದ ಪ್ರಶ್ನೆಪತ್ರಿಕೆಯ ಬಗ್ಗೆ ಅಲ್ಲ. ಬದಲಿಗೆ ನ್ಯಾಯ, ಅರ್ಹತೆ ಮತ್ತು ಸಮಾನ ಅವಕಾಶದ ಭರವಸೆ ನೀಡಿದ ಸಂಸ್ಥೆಗಳಿಂದ ಆಗಿರುವ ದ್ರೋಹದ ಬಗ್ಗೆ ಬೇಸರವಿದೆ. ಮುಖ್ಯವಾಗಿ, ದೆಹಲಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೂ ದುಃಖವಿದೆ.ಹೌದು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತೊಮ್ಮೆ ದೇಶವನ್ನು ಬೆಚ್ಚಿಬೀಳಿಸಿದೆ. ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕೊಡಿಸುವ ಭರವಸೆ ಇಟ್ಟ ಪರೀಕ್ಷೆಯಲ್ಲಿ ರಾಜಿ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2024ರಲ್ಲಿ ಮತ್ತು ಇದೀಗ 2026ರಲ್ಲಿ ಇದೇ ಬಗೆಯ ಘಟನೆ ಜರುಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು