LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಬೆಂಗಳೂರು ರ‍್ನಾಟಕದ ಕಿರೀಟ

ಕಲ್ಯಾಣ ರ‍್ನಾಟಕ ಶಕ್ತಿಪೀಠ: ಸಿಎಂ



ಕಲಬರ‍್ಗಿ: ಕಲ್ಯಾಣ ರ‍್ನಾಟಕ ಭಾಗದಲ್ಲಿ 50 ಸಾವಿರ ನಿವೇಶನ ಹಂಚಿಕೆ, 30 ಎಕರೆ ಪ್ರದೇಶದಲ್ಲಿ ಐಟಿ ಪರ‍್ಕ್ ಅಭಿವೃದ್ಧಿ, ಕೀಡೆಗೆ ಪ್ರೋತ್ಸಾಹ ನೀಡಲು ಹಡಗಿಲ ಹಾರುತಿ ಗ್ರಾಮದಲ್ಲಿ ಕ್ರೀಡಾ ನಗರ ಸ್ಥಾಪನೆ, ಕೋಟಿ ವೃಕ್ಷ ಅಭಿಯಾನ ಸೇರಿದಂತೆ 10 ಹೊಸ ಕರ‍್ಯಕ್ರಮಗಳನ್ನು ಕಲ್ಯಾಣ ರ‍್ನಾಟಕ ವಿಮೋಚನಾ ದಿನದ ಅಂಗವಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.
ಕಲಬರ‍್ಗಿಯಲ್ಲಿ 79ನೇ ಕಲ್ಯಾಣ ರ‍್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ಗುರುವಾರ ಧ್ವಜಾರೋಹಣ ನೆರವೇರಿಸಿದರು. 
"ಕಲ್ಯಾಣ ರ‍್ನಾಟಕ ಭಾಗದಲ್ಲಿ ಗಂಭೀರ ಸಮಸ್ಯೆಯಾದ ರಕ್ತಹೀನತೆ ಆರೋಗ್ಯ ತಡೆ ಯೋಜನೆ, ಅಪರಾಧ ತಡೆ, ಸಂಚಾರ ನಿಯಂತ್ರಣ ಕ್ಕೆ ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾ, ಸೇಡಂ ರಸ್ತೆಯ ರಿಂಗ್ ರೋಡ್‌ನಲ್ಲಿ ಮೇಲ್ಸೇತುವೆ ನರ‍್ಮಾಣ, ಹೊಸ ಪೆರಿಫೆರಲ್ ರಿಂಗ್ ರಸ್ತೆಗೆ ಯೋಜನಾ ವರದಿ, ಸ್ಟರ‍್ಟ್ಅಪ್‌ಗಳು ಮತ್ತು ಯುವ ಉದ್ಯಮಿಗಳನ್ನು ಉತ್ತೇಜಿಸಲು ಕ್ರಿಯಾ ಸ್ಥಾಪನೆ, ಕಲ್ಯಾಣ ರ‍್ನಾಟಕ ಎಕಾನಮಿ ಮಿಷನ್ ಸ್ಥಾಪನೆ, ಜೈವಿಕ ರ‍್ಥಿಕ ಮಿಷನ್, 50 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಈ ಹೊಸ ಘೋಷಣೆಗಳಲ್ಲಿ ಒಳಗೊಂಡಿದೆ" ಎಂದರು.
"ಬೆಂಗಳೂರು ರ‍್ನಾಟಕದ ಕಿರೀಟ. ಕಲ್ಯಾಣ ರ‍್ನಾಟಕ ಶಕ್ತಿಪೀಠ. ಕಲ್ಯಾಣ ರ‍್ನಾಟಕದ ಕಲ್ಯಾಣವೇ ನಮ್ಮ ಆದ್ಯತೆ. ಕಲ್ಯಾಣ ರ‍್ನಾಟಕದಲ್ಲಿ ತುಂಗಭದ್ರಾ, ಕೃಷ್ಣೆಯಂತೆ ಅಭಿವೃದ್ದಿ ತುಂಬಿ ಹರಿಯುತ್ತಿದೆ. ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ರ‍್ಕಾರ ಪ್ರತಿರ‍್ಷ 5 ಸಾವಿರ ಕೋಟಿ ನೀಡಿದೆ. ಕಲ್ಯಾಣ ರ‍್ನಾಟಕ ಅಭಿವೃದ್ಧಿಯಿಂದ ಸಮಗ್ರ ರ‍್ನಾಟಕದ ಪ್ರಗತಿ" ಎಂದು ಹೇಳಿದರು.
"371 ಜೆ ಜಾರಿಯಾದ ನಂತರ ಅದರಲ್ಲಿ 79,383 ಹುದ್ದೆಗಳನ್ನು ಈಗಾಗಲೇ ರ‍್ತಿ ಮಾಡಲಾಗಿದೆ. ಹೊಸದಾಗಿ ರ‍್ತಿ ಮಾಡುತ್ತಿರುವ 72 ಸಾವಿರ ಹುದ್ದೆಗಳಲ್ಲಿ 32 ಸಾವಿರ ಹುದ್ದೆಗಳು ಈ ಭಾಗದ ಯುವಜನರಿಗೆ ದೊರೆಯಲಿವೆ. ಕೆಕೆಆರ್‌ಡಿಬಿಗೆ 2013-14ನೆ ರಿಂದ 2025-26ನೆ ಸಾಲಿನವರೆಗೆ 24,780 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ 14,000 ಕೋಟಿ ರೂ.ಅನುದಾನ ರ‍್ಚು ಮಾಡಲಾಗಿದೆ. 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 32,985 ಕಾಮಗಾರಿಗಳು ಪರ‍್ಣಗೊಂಡಿವೆ. 8,118 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ" ಎಂದರು.
"ನಮ್ಮೊಂದಿಗೆ ನೀವು, ನಿಮ್ಮೊಂದಿಗೆ ನಾವು ಸೇರಿ ಮುನ್ನಡೆಯುವುದೇ ಅಭಿವೃದ್ಧಿ. ಬಸವಣ್ಣನವರ ಹೋರಾಟದ ನೆಲ. ಸಮಾನತೆ, ಮಾನವೀಯತೆ, ಸಹಬಾಳ್ವೆಯ ಸಂದೇಶ ನೀಡಿದ ಪುಣ್ಯಭೂಮಿ ಕಲ್ಯಾಣ ರ‍್ನಾಟಕ. ಆಗ ಬಾ, ಈಗ ಬಾ, ಹೋಗಿ ಬಾ ಎನ್ನದೇ, ಈಗಲೇ ಕೊಡುವುದೇ ಮಾನವರ‍್ಮ ಎಂದು ವಚನಕಾರ ರ‍್ವಜ್ಞ ಹೇಳಿದ್ದಾರೆ. ನೀರಿನಿಂದ ಸ್ನಾನ ಮಾಡಿದವನು ಬಟ್ಟೆ ಬದಲಾಯಿಸುತ್ತಾನೆ.ಬೆವರಿನಿಂದ ಸ್ನಾನ ಮಾಡಿದವನು ಇತಿಹಾಸ ನರ‍್ಮಿಸುತ್ತಾನೆ ಎಂದು ಸಂತ ಸೇವಾಲಾಲ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಕಲ್ಯಾಣ ರ‍್ನಾಟಕದ ವಿಮೋಚನೆಗೆ ರಕ್ತ, ಬೆವರು ಹರಿಸಿದೆ" ಎಂದರು.
"ಇಡುವ ಹೆಜ್ಜೆ ಚಿಕ್ಕದಿರಬಹುದು. ಆದರೆ ಆಲೋಚನೆ ದೊಡ್ಡದಿರಬೇಕು. ರ‍್ದಾರ್ ವಲ್ಲಭಾಯಿ ಪಟೇಲ್, ನೆಹರು ಅವರು ಕಲ್ಯಾಣ ರ‍್ನಾಟಕವನ್ನ ಕಾಪಾಡಿದರು. ಕಟ್ಟಡಗಳ ನರ‍್ಮಾಣದ ಜೊತೆಗೆ ಕಟ್ಟ ಕಡೆಯ ವ್ಯಕ್ತಿಯ ನೆಮ್ಮದಿ ಬದುಕೇ ಅಭಿವೃದ್ಧಿ ಈ ನಿಟ್ಟಿನಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಮಲ್ಲಿಕರ‍್ಜುನ ರ‍್ಗೆ, ಸಿದ್ದರಾಮಯ್ಯ ಅವರು ಈ ಭಾಗದ ಅಭಿವೃದ್ಧಿಗೆ ಮುನ್ನುಡಿ ಬರೆದರು. 1990 ರಲ್ಲಿ ಮಾಜಿ ಸಿಎಂ ರ‍್ಮಸಿಂಗ್ ಅವರ ನೇತೃತ್ವದಲ್ಲಿ ಹೈದರಾಬಾದ್-ರ‍್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಯಿತು. ಹೀಗೆ ಪ್ರಾರಂಭವಾದ ಅಭಿವೃದ್ಧಿ ರ‍್ವ ಮುಂದುವರೆಯುತ್ತಿದೆ" ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST