LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಅನಂತ ಅನಂತ ಅಭಿನಂದನೆಗಳು ಅನಂತ್ ನಾಗ್!

ವಿಶೇಷ ವರದಿ - ಡಾ.ಜಿ.ವೈ. ಪದ್ಮ ನಾಗರಾಜು ವ್ಯವಸ್ಥಾಪಕ ಸಂಪಾದಕರು ಇಂದುಸಂಜೆ ದಿನಪತ್ರಿಕೆ


ಕನ್ನಡ ಕೀರ್ತಿ ಪಾತಕೆಯನ್ನು ಮತ್ತೊಮ್ಮೆ ಮುಗಿಲೆತ್ತರಕ್ಕೆ ಹಾರಿಸಿದ ಅಪ್ರತಿಮ ನಟ ಅನಂತ್ ನಾಗ್ ಅವರಿಗೆ “ಇಂದು ಸಂಜೆ” ಕುಟುಂಬದ ವತಿಯಿಂದ ಅನಂತ ಅನಂತ ಅಭಿನಂದನೆಗಳು. ರಾಜ್ಯ ಸರ್ಕಾರದ ಪ್ರಶಸ್ತಿಗಳು, ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಅತ್ಯುನ್ನತ ಪದ್ಮಭೂಷಣದ ಪ್ರಶಸ್ತಿಯವರೆಗೂ ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದ ಅನಂತ್ ನಾಗ್ ಮಡಿಲಿಗೆ ಇದೀಗ ಇನ್ನೊಂದು ಮಹತ್ತರವಾದ ಪ್ರಶಸ್ತಿ ಲಭಿಸಿದೆ. ಅದುವೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ.
1995 ರಲ್ಲಿ ಕನ್ನಡದ ಮೇರುನಟ, ಪದ್ಮಭೂಷಣ ಡಾ.ರಾಜ್‌ಕುಮಾರ್ ಅವರಿಗೆ ಕೇಂದ್ರ ಸರ್ಕಾರದಿಂದ ಜೀವಮಾನ ಸಾಧನೆಗಾಗಿ ಕೊಡಲ್ಪಡುವ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತ್ತು. ಇದಾದ ಬಳಿಕ ಈಗ ಅನಂತ್ ನಾಗ್ ಅವರ ಅಪ್ರತಿಮ ನಟನೆ ಹಾಗೂ ಜೀವಮಾನ ಸಾಧನೆಗಾಗಿ ಕೇಂದ್ರ ಸರ್ಕಾರ 2024 ರ  ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ  ಘೋಷಿಸಿ, ಕನ್ನಡದ ಪ್ರೀತಿಯ ಗಣೇಶನಿಗೆ ಗೌರವ ಸಲ್ಲಿಕೆ ಮಾಡಿದೆ.
`ಸಂಕಲ್ಪ’ ಚಿತ್ರದ ಮೂಲಕ ಕನ್ನಡದ ಬೆಳ್ಳಿತೆರೆ ಮೇಲೆ ನಟನೆಯನ್ನು ಆರಂಭಿಸಿದ ನಟ ಅನಂತ್ ನಾಗ್ ಹಿಂತಿರುಗಿ ನೋಡಿದ್ದೇ ಇಲ್ಲ. ಸಂಕಲ್ಪ ಚಿತ್ರದ ಆದ ಬಳಿಕ ದೇವರ ಕಣ್ಣು, ಹಂಸಗೀತೆ, ಬಯಲು ದಾರಿ, ಕನ್ನೇಶ್ವರ ರಾಮ, ಅನುರೂಪ, ಕುದುರೆಮುಖ, ಮಾತು ತಪ್ಪದ ಮಗ, ಸಂದರ್ಭ, ಪ್ರೇಮಾಯಣ, ಮಧುರ ಸಂಗಮ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಮುತ್ತು ಒಂದು ಮುತ್ತು, ಮಿಂಚಿನ ಓಟ, ಧೈರ್ಯ ಲಕ್ಷಿ÷್ಮ, ಒಂದು ಹೆಣ್ಣು ಆರು ಕಣ್ಣು, ನಾರದ ವಿಜಯ, ಜನ್ನ ಜನ್ಮದ ಅನುಬಂಧ, ಪ್ರೇಮ ಜ್ವಾಲಾ, ಅನುಪಮಾ, ಮರೆಯದ ಹಾಡು, ಜೀವಕ್ಕೆ ಜೀವ, ಶ್ರೀಮನ್, ಅಂದದ ಅರಮನೆ, ಬಾಡದ ಹೂ, ಮುಳ್ಳಿನ ಗುಲಾಬಿ, ಬಾರಾ, ನನ್ನ ದೇವರು, ಹಾಸ್ಯರತ್ನ ರಾಮಕೃಷ್ಣ, ಬೆತ್ತಲೆ ಸೇವೆ, ಸಿಂಹಾಸನ, ಅನ್ವೇಷಣೆ, ಬೆಂಕಿಯ ಬಲೆ, ಗಾಯಿತ್ರಿ ಮದುವೆ, ಹೊಸ ತೀರ್ಪು, ಕಾಮನಬಿಲ್ಲು, ಭಕ್ತ ಪ್ರಹ್ಲಾದ, ಇಬ್ಬನಿ ಕರಗಿತು, ಮುಡುಡಿದ ತಾವರೆ ಅರಳಿತು, ಚಲಿಸಿದ ಸಾಗರ, ನೋಡಿ ಸ್ವಾಮಿ ನಾವಿರೋದು ಹೀಗೆ, ಮಕ್ಕಳೇ ದೇವರು, ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು, ಪ್ರೇಮವೇ ಬಾಳಿನ ಬೆಳಕು, ಪ್ರೇಮ ಸಾಕ್ಷಿ, ರಾಮಪುರದ ರಾವಣ, ಒಲವೇ ಬದುಕು, 
ಒಲವು ಮೂಡಿದಾಗ, ಮಕ್ಕಳಿರಲವ್ವ ಮನೆ ತುಂಬಾ, ಅಪಘಾತ, ಬಿಡುಗಡೆಯ ಬೇಡಿ, ಪರಮೇಶಿ ಪ್ರೇಮ ಪ್ರಸಂಗ, ಶ್ವೇತ ಗುಲಾಬಿ, ಹಾವು ಏಣಿ ಆಟ, ಸೇಡಿನ ಹಕ್ಕಿ, ಶಬ್ದಗಳು, ಹೆಂಡ್ತಿ ಬೇಕು ಹೆಂಡ್ತಿ, ಹೊಸ ನೀರು, ನೆನಪಿನ ದೋಣಿ, ಪ್ರೇಮ ಜಲ, ಅರುಣರಾಗ, ಮನೆಯೇ ಮಂತ್ರಾಲಯ, ಹುಲಿ ಹೆಬ್ಬುಲಿ, ಅಗ್ನಿಪರ್ವ, ಅವಸ್ಥೆ, ಕುರುಕ್ಷೇತ್ರ, ಅತಿರಥ ಮಹಾರಥ, ದೈವಶಕ್ತಿ, ಬ್ರಹ್ಮ ವಿಷ್ಣು ಮಹೇಶ್ವರ, ರಣಧೀರ, ಶಾಂತಿನಿವಾಸ, ವರ್ಣಚಕ್ರ, ಶ್ರೀ ವೆಂಕಟೇಶ್ವರ ಮಹಿಮೆ, ಬಾಳೊಂದು ಭಾವಗೀತೆ, ಮುತ್ತೆöÊದೆ, ಅಮಾನುಷ, ಹೆಂಡ್ತಿಗೇಳ್ಬೇಡಿ, ಇದು ಸಾಧ್ಯ, ಗಗನ, ಗೋಲ್‌ಮಾಲ್ ರಾಧಾಕೃಷ್ಣ, ರಾಮರಾಜ್ಯದಲ್ಲಿ ರಾಕ್ಷಸರು, ಸ್ವರ್ಣ ಸಂಸಾರ, ಚಾಲೆಂಜ್ ಗೋಪಾಲಕೃಷ್ಣ, ರೋಲ್‌ಕಾಲ್ ರಾಮಕೃಷ್ಣ, ಅಭಿಮನ್ಯು, ಉದ್ಭವ, ಮತ್ತೆ ಹಾಡಿತು ಕೋಗಿಲೆ, ಅನಂತ ಪ್ರೇಮ, ಗಣೇಶನ ಮದುವೆ,  ಮನೇಲಿ ಇಲಿ ಬೀದೀಲಿ ಹುಲಿ, ಗೋಲ್‌ಮಾಲ್ ಭಾಗ-2, ಗೌರಿ ಗಣೇಶ, ಹೊಸ ಮನೆ ಅಳಿಯ, ಶಾಂತಿ ಕ್ರಾಂತಿ, ನಾಗಿಣಿ, ಉಂಡು ಹೋದ ಕೊಂಡು ಹೋದ, ವಜ್ರಾಯುಧ, ಒಂದು ಸಿನಿಮಾ ಕಥೆ, ಶಕ್ತಿಯುಕ್ತಿ, 
ಮರಣ ಮೃದಂಗ, ಝೇಂಕಾರ, ಗಣೇಶ ಸುಬ್ರಹ್ಮಣ್ಯ, ರಾಜಕೀಯ, ಆತಂಕ, ಮಾಂಗಲ್ಯ ಬಂಧನ, ಕಾದಂಬರಿ, ನಿಷ್ಕರ್ಷ, ತೂಗುವೇ ಕೃಷ್ಣನ, ಯಾರಿಗೂ ಹೇಳ್ಬೇಡಿ, ಗಂಗವ್ವ ಗಂಗಮಾಯಿ, ಬೆಳದಿಂಗಳ ಬಾಲೆ, ನಿಲುಕದ ನಕ್ಷತ್ರ, ಸಮಯಕ್ಕೊಂದು ಸುಳ್ಳು, ತಾಳಿ ಪೂಜೆ, ನಿರ್ಬಂಧ, ಜೀವ ನದಿ, ಅನುರಾಗ ಸ್ಪಂದನ, ಗಣೇಶ ಐ ಲವ್ ಯು, ವಿಶ್ವ, ನಾನೇನು ಮಾಡಿಲ್ಲ, ಪ್ರೀತ್ಸೆ, ಹುಲಿ ಪದ್ಮಿನಿ, ಕೃಷ್ಣಲೀಲೆ, ಚಾಮುಂಡಿ, ಯಾರಿಗೆ ಸಾಲುತ್ತೆ ಸಂಬಳ, ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ, ಸ್ವಲ್ಪ ಅಡ್ಜೆಟ್ ಮಾಡ್ಕೊಳ್ಳಿ, ಆಂಧ್ರ ಹೆಂಡ್ತಿ, ಮತದಾನ, ಕುರಿಗಳು ಸಾರ್ ಕುರಿಗಳು, ಅಸುರ, ಆಂಟಿ ಪ್ರೀತ್ಸೆ, ಚಿತ್ರ, ಅಮ್ಮ, ನೀಲಾ, ಚಿಟ್ಟೆ, ನಮಸ್ಕಾರ ನಾರದರೇ, ಭೂತಯ್ಯನ ಮಕ್ಕಳು, ಮನಸೇ ಓ ಮನಸೇ, ಮನಸೆಲ್ಲಾ ನೀನೇ, ನಾನು ನಾನೇ, ಹಾಲಿವುಡ್, ಆನಂದ, ಬೆಂಗಳೂರು ಬಂದ್, ಲಂಕೇಶ್ ಪತ್ರಿಕೆ, ಪ್ರೀತಿ ಪ್ರೇಮ ಪ್ರಣಯ, ಖುಷಿ, ಚಿಗುರಿದ ಕನಸು, ಮೌನಿ, ಸಾಗರಿ, ಮೆಲ್ಲುಸಿರೇ ಸವಿಗಾನ, ಬಿಡಲಾರೆ, ಪಕ್ಕದ್ಮನೆ ಹುಡುಗಿ, ಸಂತೋಷ, ಎನ್‌ಕೌಂಟರ್ ದಯಾನಾಯಕ್, 
ನೆನಪಿರಲಿ, ವಿಷ್ಣುಸೇನಾ, ಶ್ರೀ, ಉಪ್ಪಿದಾದಾ ಎಂಬಿಬಿಎಸ್, ನೀನೆಲ್ಲೋ ನಾನಲ್ಲೆ, ರವಿಶಾಸ್ತಿç, ಕಲ್ಲರಳಿ ಹೂವಾಗಿ, ಮುಂಗಾರು ಮಳೆ, ನಲಿ ನಲಿಯುತಾ, ಸ್ನೇಹಾಂಜಲಿ, ಗಣೇಶ, ಈ ಬಂಧನ, ಗಾಳಿಪಟ, ಹೊಂಗನಸು, ಯುಗ ಯುಗಗಳೇ ಸಾಗಲಿ, ಅರಮನೆ, ಸೂಪರ್ ಜೋಡಿ, ನೀನೇ ನೀನೇ, ತಾಜ್‌ಮಹಲ್, ಅರ್ಜುನ್, ಗಣೇಶ ಮತ್ತೆ ಬಂದ, ಗಂಗಾ ಕಾವೇರಿ, ನಮ್ಮ ಯಜಮಾನ್ರು, ಚೆಲ್ಲದರು ಸಂಪಿಗೆಯ, ಹುಚ್ಚಿ, ಗರಗಸ, ಕ್ರೇಜಿ ಕುಟುಂಬ, ಪ್ರೇಮಿಸಂ, ಪರಮಾತ್ಮ, ದಶಮುಖ, ಕಡ್ಡಿಪುಡಿ, ಮೈನಾ, ಗೂಗ್ಲಿ, ಸಕ್ಕರೆ, ಶ್ರಾವಣಿ ಸುಬ್ರಮಣ್ಯ, ಬ್ರಹ್ಮ, ಗಜಕೇಸರಿ, ವಾಸ್ತುಪ್ರಕಾರ, ಪಂಚರAಗಿ, ಮೃಗಶಿರಾ, ಆಟಗಾರ, ಫಸ್ಟ್ ರ್ಯಾಂಕ್ ರಾಜು, ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಜಗ್ಗುದಾದಾ, ರಾಜಕುಮಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಜಿಎಫ್ -1,  ಆಯುಷ್ಮಾನ್ ಭವ, ವಾರಾಂತ್ಯ, ಗಾಳಿಪಟ-2, ರಾಜದ್ರೋಹಿ ಹೀಗೆ 250 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅನಂತ್ ನಾಗ್ ಮನೋಜ್ಞ ಅಭಿನಯ ನೀಡಿದ್ದಾರೆ.
ಅದರಲ್ಲೂ ಅವರ ನಟನೆಯ ನಾರದ ವಿಜಯ ಚಿತ್ರದಲ್ಲಿನ ಡಬಲ್ ಆ್ಯಕ್ಟಿಂಗ್, ಗಣೇಶನ ಮದುವೆಯ ವೈ.ಜಿ.ರಾವ್, ಗೌರಿ ಗಣೇಶ ಚಿತ್ರದ ಲಂಬೋದರ, ಗಣೇಶ ಸುಬ್ರಮಣ್ಯ ಚಿತ್ರದಲ್ಲಿನ ಗಣೇಶ, ಬೆಳದಿಂಗಳ ಬಾಲೆಯ ಚೆಸ್ ಆಟಗಾರ ರೇವಂತ್, ಮುಂಗಾರು ಮಳೆಯ ಕರ್ನಲ್ ಸುಬ್ಬರಾವ್ ಪಾತ್ರಗಳನ್ನು ಯಾರೂ ಮರೆವಂತಿಲ್ಲ.
ಚಿತ್ರದಲ್ಲಿ ಯಾವುದೇ ಸಣ್ಣ ಪಾತ್ರವಿರಲಿ, ಅದಕ್ಕೆ ಜೀವ ತುಂಬುವ ಕೆಲಸವನ್ನು ಅನಂತ್ ನಾಗ್ ಮಾಡಿದ್ದಾರೆ. ಕನ್ನಡದ ಮೇರು ನಟರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್,  ವಿ. ರವಿಚಂದ್ರನ್, ಶಿವರಾಜ್‌ಕುಮಾರ್, ಜಗ್ಗೇಶ್, ದೇವರಾಜ್, ಶಶಿಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್, ರಿಷಬ್ ಶೆಟ್ಟಿ, ಯಶ್ ಹೀಗೆ ಎಲ್ಲರ ಜೊತೆಗೂ ಸ್ಕಿçÃನ್ ಶೇರ್ ಮಾಡಿಕೊಂಡಿರುವ ಅನಂತ್ ನಾಗ್ ಅವರಿಗೆ ಅವರೇ ಸಾಟಿ.
ಇನ್ನು ರಾಜ್‌ಕುಮಾರ್ ಅವರ ಜೊತೆಗೆ ಕಾಮನಬಿಲ್ಲು, ಭಕ್ತಪ್ರಹ್ಲಾದ, ಚಿತ್ರಗಳಲ್ಲಿ ಕಾಣಿಸಿಕೊಂಡರೇ, ವಿಷ್ಣುವರ್ಧನ್ ಹಾಗೂ ಅಂಬರೀಶ್ ಜೊತೆಗೆ ಲೆಕ್ಕವಿಲ್ಲದಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಯುವ ಪೀಳಿಗೆಯ ನಟರ ಪೈಕಿ ದರ್ಶನ್, ಸುದೀಪ್, ಯಶ್, ನೆನಪಿರಲಿ ಪ್ರೇಮ್ ಜೊತೆಗೂ ಅನಂತ್ ನಾಗ್ ಅಭಿನಯಿಸಿದ್ದು, ಕೇವಲ ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡದ ಖಾಸಗಿ ವಾಹಿನಿಯಲ್ಲಿ “ಪ್ರೀತಿ ಇಲ್ಲದ ಮೇಲೆ” ಎಂಬ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ ನಟ ಅನಂತ್ ನಾಗ್. ನಾಯಕ ನಟ, ಪೋಷಕ ನಟ, ಹಾಸ್ಯ ನಟ ಹೀಗೆ ಪಾತ್ರಕ್ಕೆ ತಕ್ಕಂತೆ ನವರಸಗಳನ್ನು ಬೇರೆಸಿ ಪಾತ್ರಕ್ಕೆ ಜೀವ ತುಂಬುವ ಮನೋಜ್ಞ ಅಭಿನಯದ ಕಲಾ ಸರಸ್ವತಿಯ ಪುತ್ರ ಅನಂತ್ ನಾಗ್.
ಕನ್ನಡದ ಹೆಸರಾಂತ ನಿರ್ದೇಶಕರ ಗರಡಿಯಲ್ಲಿ ಅಭಿನಯವನ್ನೇ ವೃತ್ತಿಯಾಗಿಸಿಕೊಂಡು, ರಾಜಕೀಯ ವಲಯಕ್ಕೂ ಕಾಲಿಟ್ಟು ಸರ್ಕಾರದ ಅಂಗವಾಗಿ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಕೀರ್ತಿ ಪದ್ಮಭೂಷಣ ಅನಂತ್ ನಾಗ್ ಅವರಿಗೆ ಸಲ್ಲುತ್ತದೆ.
ಇನ್ನು ಅವರ ಅಭಿನಯದ ಗೌರಿ ಗಣೇಶ ಚಿತ್ರದಲ್ಲಿನ ನಟನೆ, ಬೆಳದಿಂಗಳ ಬಾಲೆ ಚಿತ್ರದ ನಟನೆ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದೇ ನನ್ನ ಭಾಗ್ಯ ಎಂದುಕೊAಡಿದ್ದ ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಶ್ಲಾಘನೀಯ. 
ಗಣೇಶನ ಸೀರೀಸ್ ಚಿತ್ರಗಳಲ್ಲಿ ಪಾತ್ರಗಳಲ್ಲಿ ಅಭಿನಯ ಮಾಡಿದ ಅನಂತ್ ನಾಗ್ ಅವರನ್ನು ಕನ್ನಡದ ಜನತೆ ಎಂದಿಗೂ, ಎಂದೆAದಿಗೂ ಮರೆಯುವುದಿಲ್ಲ. ತಮ್ಮ ಸಹೋದರ ಶಂಕರ್ ನಾಗ್ ಅಪಘಾತದಲ್ಲಿ ನಿಧನರಾದಾಗ ಅತೀವ ದುಃಖದಿಂದ “ನನ್ನ ತಮ್ಮ ಶಂಕರ” ಎಂಬ ಪುಸ್ತಕವನ್ನು ಅನಂತ್ ನಾಗ್ ಬರೆದಿರುವುದು ವಿಶೇಷ. Sಟoತಿ ಚಿಟಿಜ Sಣuಜಥಿ ತಿiಟಿs ಣhe ಖಚಿಛಿe  ಎಂಬ ಸ್ಲೋಗನ್ ಆಳವಡಿಕೆ ಮಾಡಿಕೊಂಡಿರುವ ಅನಂತ್ ನಾಗ್, ಇತ್ತೀಚೆಗಷ್ಟೇ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. 
ಇದೇ ಸೆಪ್ಟೆಂಬರ್ ತಿಂಗಳ 4 ರಂದು ಮನೆಯಲ್ಲಿ ಕುಟುಂಬಸ್ಥರ ಜೊತೆಗೆ ಸರಳವಾಗಿ ಹುಟ್ಟುಹಬ್ಬವನ್ಜು ಆಚರಿಸಿಕೊಂಡಿರುವ ಅನಂತ್ ನಾಗ್ ಅವರಿಗೆ, ಈಗ ಮತ್ತೆ ಸಂಭ್ರಮದ ಕ್ಷಣ. ತಮಗೆ ಈವರೆಗೂ ಲಭಿಸಿರುವ 56 ವಿವಿಧ ಪ್ರಶಸ್ತಿಗಳ ಬತ್ತಳಿಕೆಗೆ ಈಗ ದಾದಾ ಸಾಹೇಬ್ ಫಾಲ್ಕೆ ಕೂಡ ಸೇರಿದ್ದು, ಕನ್ನಡದ ಹಿರಿನೆಯನ್ನು ಮತ್ತಷ್ಟು ಹೆಚ್ಚಿಸಿದೆ. 78 ವರ್ಷದ ಅನಂತ್ ನಾಗ್ ಇನ್ನು ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರ ಪ್ರೇಮಿಗಳ ಹೃದಯ ಸಾಮ್ರಾಜ್ಯದಲ್ಲಿ ಸದಾಕಾಲ ನೆಲೆಸಿರಲಿ. ಆ ಭಗವಂತ ನಟ ಅನಂತ್ ನಾಗ್ ಹಾಗೂ ಅವರ ಕುಟುಂಬಕ್ಕೆ ಧೀರ್ಘಕಾಲದ ಸಂತೋಷ, ಸುಖ, ಶಾಂತಿ, ಅಷ್ಟ ಐಶ್ವರ್ಯ ಜೊತೆಗೆ ನೆಮ್ಮದಿ ಕೊಟ್ಟು, ಅದನ್ನೆಲ್ಲಾ ಅನುಭವಿಸುವ ಯೋಗ ಕೊಡಲಿ ಎಂದು ನಾವು ಕೂಡ ಪ್ರಾರ್ಥಿಸುತ್ತೇವೆ. 

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST