LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಇಂದಿನಿಂದ ನಾಲ್ಕು ದಿನಗಳ ಕಾಲ 

ಬ್ಯಾಂಕಿಂಗ್ ಸೇವೆಗಳು ಸ್ಥಗಿತ


ನವದೆಹಲಿ: ಇಂದಿನಿಂದ ದೇಶಾದ್ಯಂತ ಸತತ ನಾಲ್ಕು ದಿನಗಳ ಕಾಲ ಬ್ಯಾಂಕಿAಗ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಬ್ಯಾಂಕ್ ನೌಕರರ ರಾಷ್ಟ್ರವ್ಯಾಪಿ ಮುಷ್ಕರ ಹಾಗೂ ಸಾಲು ಸಾಲು ರಜೆಗಳು ಒಟ್ಟಿಗೆ ಬಂದಿರುವುದೇ ಇದಕ್ಕೆ ಕಾರಣವಾಗಿದೆ. ತುರ್ತು ಬ್ಯಾಂಕಿಂಗ್ ಕೆಲಸಗಳಿರುವ ಗ್ರಾಹಕರು ಮಂಗಳವಾರದವರೆಗೂ ಕಾಯಬೇಕಾಗಿದ್ದು, ಆನ್‌ಲೈನ್ ಸೇವೆಗಳನ್ನು ಬಳಸಿಕೊಳ್ಳುವಂತೆ ಬ್ಯಾಂಕ್‌ಗಳು ಸೂಚಿಸಿವೆ.ವಾರಕ್ಕೆ 5 ದಿನಗಳ ಕೆಲಸದ ಅವಧಿ ಜಾರಿ ಹಾಗೂ ಪಿಂಚಣಿ ಸುಧಾರಣೆಗೆ ಆಗ್ರಹಿಸಿ ಬ್ಯಾಂಕ್ ಒಕ್ಕೂಟಗಳು ಮುಷ್ಕರ ನಡೆಸುತ್ತಿರುವುದರಿಂದ ಸೇವೆ ಇರುವುದಿಲ್ಲ. ನಾಳೆ ತಿಂಗಳ ಎರಡನೇ ಶನಿವಾರದ ಅಧಿಕೃತ ರಜೆ ಇರಲಿದೆ.ಭಾನುವಾರ ಸಾಪ್ತಾಹಿಕ ರಜೆ. ಸೋಮವಾರ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಸಾರ್ವಜನಿಕ ರಜೆ ಇರಲಿದೆ.
ಚೆಕ್ ಕ್ಲಿಯರೆನ್ಸ್, ಡಿಡಿ ಪಡೆಯುವುದು ಹಾಗೂ ಖಾತೆಯಿಂದ ನೇರ ನಗದು ವಹಿವಾಟು ನಡೆಸುವಂತಹ ಬ್ಯಾಂಕ್ ಶಾಖೆಯ ಕೆಲಸಗಳು ಮಂಗಳವಾರದಿAದ ಮಾತ್ರ ಲಭ್ಯವಿರಲಿವೆ. ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯುಪಿಐ ವಹಿವಾಟುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸತತ ನಾಲ್ಕು ದಿನ ರಜೆ ಇರುವುದರಿಂದ ಹಲವೆಡೆ ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗುವ ಸಾಧ್ಯತೆಯಿದ್ದು, ಗ್ರಾಹಕರು ಮುಂಚಿತವಾಗಿಯೇ ಅಗತ್ಯ ನಗದನ್ನು ಇಟ್ಟುಕೊಳ್ಳುವುದು ಉತ್ತಮ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST