LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಕಾಂಗ್ರೆಸ್ ಪಕ್ಷ ರಾಷ್ಟçದ್ರೋಹಿಗಳ ಪರವಾಗಿದೆ: ಬೊಮ್ಮಾಯಿ 


ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವು ಯಾವಾಗಲೂ ರಾಷ್ಟçದ್ರೋಹಿಗಳು ಮತ್ತು ರಾಷ್ಟçವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಲೇ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮುಂಬೈ ದಾಳಿಯನ್ನು 'ಸ್ಯಾಫ್ರನ್ ಟೆರರ್' ಎಂದು ಬಿಂಬಿಸಲು ಯತ್ನಿಸಿದ್ದು ಮತ್ತು ಪಾಕಿಸ್ತಾನದ ಪರವಾಗಿ ನಿಂತು ದೇಶದ ಹಿತಾಸಕ್ತಿಗೆ ಧಕ್ಕೆ ತರುವ ದುಷ್ಕಂತ್ಯ  ಗಳನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಜೈಲಿನಲ್ಲಿರುವ ಉಮರ್ ಖಾಲಿದ್ ಪರವಾಗಿ ಮಾತನಾಡಿದ್ದು, ದೇಶದ್ರೋಹಿಗಳಿಗೆ ಬೆಂಬಲ ನೀಡುವ ಕೃತ್ಯವಾಗಿದೆ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಉಮರ್ ಖಾಲಿದ್ 'ನಾನು ಯಾವುದೇ ರೀತಿಯ ರಾಷ್ಟ್ರಕ್ಕೆ, ರಾಷ್ಟ್ರೀಯತೆಗೆ ನಾನು ನ್ಯಾಷನಲಿಸ್ಟ್ ಅಲ್ಲ ಅಂತ ಅವರೇ ಹೇಳ್ತಾರೆ. ಮತ್ತು ಭಾರತ ವಿರೋಧಿ ಎಲ್ಲಾ ಕಾರ್ಯವನ್ನ ಮಾಡಿ ಇವತ್ತು ಜೈಲಿನಲ್ಲಿದ್ದಾರೆ. ಅಂತ ಜೈಲಿನಲ್ಲಿ ಇರುವಂತ ದೇಶದ್ರೋಹಿಗಳಿಗೆ ಸಪೋರ್ಟ್ ಮಾಡುವ ಮುಖಾಂತರ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಅಂದಕಾಲದಲ್ಲಿ ಸ್ವತಂತ್ರ ತಂದAತಹ ಕಾಂಗ್ರೆಸ್ ಇವತ್ತು ಇಲ್ಲ. ಇವತ್ತು ನಕಲಿ ಕಾಂಗ್ರೆಸ್, ನಕಲಿ ಗಾಂಧಿಗಳಿದ್ದಾರೆ. ಈ ದೇಶದ ಬಗ್ಗೆ ಅವರಿಗೆ ಚಿಂತನೆ ಇಲ್ಲ. ದೇಶದ ಬಗ್ಗೆ ಅವರ ಸಂಸ್ಕöÈತಿ ಬಗ್ಗೆ ಯಾವುದೇ ಒಂದು ರೀತಿಯ ಕಲ್ಪನೆಯು ಕೂಡ ಅವರಿಗಿಲ್ಲ. ಈ ದೇಶದ ವ್ಯಾಮೋಹದಿಂದ ಇವತ್ತು ವಿದೇಶಿ ಶಕ್ತಿಗಳಿಗೆ ಮತ್ತು ನಮ್ಮ ದೇಶದ ದ್ರೋಹ ಶಕ್ತಿಗಳಿಗೆ ಅವರು ಕೈಜೋಡಿಸುವಂತಹ ಕೆಲಸವನ್ನು ಮಾಡಿ ದೇಶದ್ರೋಹ ಕೆಲಸ ಮಾಡುತ್ತಿದ್ದಾರೆ. ಅದು ಇವತ್ತು ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಂದ ಅವರ ಹೇಳಿಕೆಯಿಂದ ಮತ್ತೊಮ್ಮೆ ದೃಢಪಟ್ಟಿದೆ ಎಂದು ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST