LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ


ರಾಮನಗರ: ಕೇಂದ್ರ ಚುನಾವಣಾ ಕಚೇರಿಯನ್ನು ಕೇಂದ್ರ ಬಿಜೆಪಿ ಸರ್ಕಾರ ತನ್ನ ಪಕ್ಷದ ಕಚೇರಿಯಂತೆ ಮಾಡಿಕೊಂಡು ಎಲ್ಲದರಲ್ಲೂ ಮೂಗು ತೂರಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಎನ್.ಆರ್. ವೆಂಕಟೇಶ್ ಆಕ್ರೋಶ ಹೊರಹಾಕಿದರು.
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.ಬಿಜೆಪಿ ಸರ್ಕಾರ ಈ ರೀತಿ ಚುನಾವಣಾ ಆಯೋಗವನ್ನು ದುರ್ಭಳಕೆ ಮಾಡಿಕೊಳ್ಳುವ ಬದಲು ಅವರೇ ಮನೆ ಮನೆಗೆ ಬಂದು ಮತ ಹಾಕಿಸಿಕೊಂಡು ಹೋದರೆ ಆಯಿತಲ್ಲ. ಮೋದಿಯವರು 15 ವರ್ಷ 20 ವರ್ಷಡಳಿತ ಮಾಡಿದೆ ಅಂತಾರಲ್ಲ, ಈ ರೀತಿ ಮಾಡಿದರೆ ಅವರು ಇರುವ ತನಕ ಅಧಿಕಾರದಲ್ಲೇ ಇರಬಹುದಲ್ಲವೇ ನಮ್ಮ ಮತ ಕೇಳೋಕೆ ಬಿಜೆಪಿ ಸರ್ಕಾರದವರಿಗೆ ಏನು ಹಕ್ಕಿದೆ ಬಿಜೆಪಿಯವರು ಏನಕ್ಕೆ ನಮ್ಮ ಮತ ಕಸಿಬೇಕು ಇಂತಹ ರಾಜಕೀಯ ಮಾಡೋ ಬದಲು ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಚುನಾವಣಾ ಆಯೋಗದ ಆಯುಕ್ತರ ನಡೆ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು.ಇಡೀ ಮತದಾನ ವ್ಯವಸ್ಥೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಬುಡಮೇಲು ಮಾಡುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ತನಗಿಷ್ಟ ಬಂದಂತೆ ಪ್ರಜಾಪ್ರಭುತ್ವ ಮತ್ತು ಸಂವಿದಾನ ವಿರೋಧಿಯಾಗಿ ನಡೆಸಿಕೊಳ್ಳುತ್ತಿದೆ ಇಡೀ ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ತನಗೆ ಇಷ್ಟ ಬಂದAತೆ ವರ್ತನೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ಪ್ರತಿಭಟನೆಯನ್ನು ನಿರಂತರವಾಗಿ ನಡೆಸಲಾಗುತ್ತದೆ.  ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಚುನಾವಣಾ ಆಯೋಗಕ್ಕೆ ಸಂಪೂರ್ಣ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೇಸ್ ಎಸ್ಸಿ ಘಟಕ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ ಕಾಂಗ್ರೇಸ್ ಪಕ್ಷ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಪ್ರಾರಂಭದಿAದಲೂ ತೀವ್ರವಾಗಿ ಖಂಡಿಸುತ್ತಾ ಬರುತ್ತಿದ್ದರೂ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕಿವಿ ಕೇಳದಂತಾಗಿದೆ. ವೈಜ್ಞಾನಿಕ ರೀತಿಯಲ್ಲಿ ಮತದಾರರ ಪಟ್ಟಿ ಪರಿಸ್ಕರಣೆ ನಡೆದಿಲ್ಲ. ತರಾತುರಿ ಎಸ್‌ಐಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲಗಳಾಗಿವೆ. ಈಗ ಮೂವರು ಕೇಂದ್ರ ಚುನಾವಣಾ ಆಯುಕ್ತರಲ್ಲೇ ಗೊಂದಲ ಉಂಟಾಗಿದೆ. ಕೂಡಲೇ ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.ಕೇಂದ್ರ ಚುನಾವಣಾ ಆಯುಕ್ತ  ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿಯನ್ನು ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನಾ ಸಮಯದಲ್ಲಿ ಸುಡಲು ಮುಂದಾದರು ಪೋಲೀಸರು ಮಧ್ಯ ಪ್ರವೇಶಿಸಿ ಪ್ರತಿಕೃತಿಗೆ ನೀರು ಸುರಿದು ಬೆಂಕಿ ವಿಫಲಗೊಳಿಸಿದರು. ಆದರೆ ಮತ್ತೆ ಪ್ರತಿಭಟನಾಕಾರರು ಪ್ರತಿಕೃತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರಾದರೂ  ತಕ್ಷಣವೇ ಪೋಲೀಸರು ಪ್ರತಿಕೃತಿಗೆ ಹಚ್ಚಿದ್ದ ಬೆಂಕಿಗೆ ನೀರು ಹಾಕಿ ಪ್ರತಿಕೃತಿಯನ್ನು ಆ ಸ್ಥಳದಿಂದ ದೂರ ಸರಿಸಿದರು.  ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಪ್ರಾಧಿಕಾರ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ.ಎಚ್. ರಾಜು,  ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಕೋಕಿಲಾ ರಾಣಿ, ಮುಖಂಡರಾದ ಕೃಷ್ಣಮೂರ್ತಿ, ಪ್ರಮೋದ್, ಚೇತನ್‌ಕೀಕರ್, ಕೆ. ರಮೇಶ್, ಕಲ್ಪನಾ ಶಿವಣ್ಣ, ರೈಡ್ ನಾಗರಾಜ್, ವೆಂಕಟೇಶ್, ಮಹೇಂದ್ರ, ಭೂಷಣ್, ಬೈರೇಗೌಡ, ಪಾರ್ವತಮ್ಮ, ಪುಟ್ಟರಾಜು, ಗಿರಿಜಮ್ಮ, ಬೈರೇಗೌಡ, ಕೆ. ರವಿ, ಶಿವಶಂಕರ್, ರಘು, ಜಯಲಕ್ಷö್ಮಮ್ಮ, ಪವಿತ್ರ, ಆಯಿಷಾಬಾನು, ಶಂಭೂಗೌಡ, ಗುರುಪ್ರಸಾದ್, ನರಸಿಂಹಯ್ಯ, ಅನಿಲ್ ಜೋಗಿಂದರ್, ನಾಗಮ್ಮ, ಗಿರೀಶ್, ರಮೇಶ್, ವಿನಯ್, ಚಂದ್ರಮ್ಮ, ವಿಜಯಕುಮಾರಿ, ಮಂಚೇಗೌಡ, ಎ. ಗೋಪಿ, ತಿಮ್ಮಣ್ಣ, ದಾಸೇಗೌಡ, ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST