ಬೆಂಗಳೂರು: ಕರ್ತವ್ಯ ಪ್ರತಿಷ್ಠಾನದ ವತಿಯಿಂದ ಎರಡನೇ ಪುಸ್ತಕವಾಗಿ ಯುವ ಕವಯಿತ್ರಿ ಮಂಜಿನ ಬಿಂದುವಿನ ಚೊಚ್ಚಲ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ನಗರ ಕೇಂದ್ರ ಗ್ರಂಥಾಲಯ, ಕುಮಾರಸ್ವಾಮಿ ಲೇಔಟ್‌ನಲ್ಲಿ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ, ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ನೆರವೇರಿತು. ಕರ್ತವ್ಯ ಪ್ರತಿಷ್ಠಾನದ ಅಧ್ಯಕ್ಷಆದ ಶ್ರೀ ಸಂತೋಷ್ ಅವರು ಕರ್ತವ್ಯ ಪ್ರತಿಷ್ಠಾನದ ಧ್ಯೇಯ ಉದ್ದೇಶಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸರ್ಕಾರಿ ಕೆಲಸ ಗಿಟ್ಟಿಸುವುದು, ಪ್ರಕೃತಿ ಉಳಿಸುವುದು ಹಾಗೆ ದೇಶ ಕಟ್ಟುವಲ್ಲಿ ಕರ್ತವ್ಯ ಫೌಂಡೇಶನ್ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು. ಪ್ರಕಾಶಕರಾಗಿ ಯುವ ಸಾಹಿತಿಗಳಿಗೆ, ಚೊಚ್ಚಲ ಕೃತಿಯ ಬಿಡುಗಡೆ ಮಾಡಬೇಕೆಂದಿರುವ ಸಾಹಿತಿಗಳಿಗೆ ಪ್ರೋತ್ಸಾಹವಾಗಿ ಪುಸ್ತಕ ಬಿಡುಗಡೆ ಮಾಡುವ ಕರ್ತವ್ಯ ಪ್ರತಿಷ್ಠಾನದ ಹೊಸ ಹೆಜ್ಜೆಯ ಕುರಿತಾಗಿ ಶ್ರಿಮತಿ ಜಯಶ್ರೀ ರಟ್ಟಿಹಳ್ಳಿ ಅವರು ಮಾತನಾಡಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ರಾಜೇಶ್ ಎಲ್.ವೈ., ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್, ಅವರು ಮಾತನಾಡಿ ಇಂತ ಚಿಕ್ಕ ವಯಸ್ಸಿನ ಹುಡುಗಿ ಓದುತ್ತಿರುವುದು ಡಿಗ್ರಿ ಆದರೂ ತಮ್ಮ ಸಾಹಿತ್ಯ ಆಸಕ್ತಿ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು, ಅವರ ವಯಸ್ಸು ಇನ್ನೂ ಇಪ್ಪತಾದರೂ ತಮ್ಮ ಎಲ್ಲಾ ಕಾವ್ಯಗಳಲ್ಲಿ ಹೆಚ್ಚಿನ ಭಾಗ ಭಾವನೆಗಳ ಕುರಿತು ಇರುವುದು ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೆ ಮತ್ತಷ್ಟು ನಿಮ್ಮ ಬರಹದ ದಾಹದಿಂದ ಇನ್ನೂ ಹೆಚ್ಚು ಪುಸ್ತಕಗಳು ಹೊರಬರಲಿ ಎಂದು ಆಶಿಸಿದರು.ಕರ್ತವ್ಯ ಫೌಂಡೇಶನ್‌ನ ಸ್ಥಾಪಕರಾದ ವಿನೋದ್ ಕರ್ತವ್ಯ ಮಾತನಾಡಿ ನಮ್ಮ ನಾಡಿಗೆ ಏನಾದರೂ ಕೊಡುಗೆ ಕೊಡಬೇಕಾದರೆ ನಮ್ಮ ಭಾಷೆಗೆ ಒತ್ತು ನೀಡಬೇಕು, ಕೇವಲ ಕನ್ನಡ ಬಾವುಟ ಹಾರಿಸಿ ರಾಜ್ಯೋತ್ಸವ ಮಾಡಿದರೆ ಸಾಲದು ನಮ್ಮ ಭಾಷೆ ಉಳಿಬೇಕಾದರೆ ನಮ್ಮ ಕನ್ನಡ ನುಡಿ ಉಳಿಯಬೇಕು, ನಮ್ಮ ಕನ್ನಡ ನುಡಿ ಉಳಿಯಬೇಕಾದರೆ ಸಾಹಿತಿಗಳು ಉಳಿಯಬೇಕು ಅದರ ಸಲುವಾಗಿ ಕಾರ್ಯವ್ಯ ಫೌಂಡೇಶನ್ ಇಂದ ಕನ್ನಡ ಪುಸ್ತಕ ಪ್ರಕಾಶನ ಶುರು ಮಾಡಿರುವುದು ಎಂದು ತಮ್ಮ ಕನ್ನಡಿಬಿಮಾನ ಮೆರೆದರು.ಕವಯಿತ್ರಿಯ ಪರಿಚಯವನ್ನು ಹಾಗೂ ಅವರ ಕವಿತೆಗಳ ಕುರಿತು ಸ್ವಾರಸ್ಯಕರವಾಗಿ ಶ್ರೀ ಮನೋಜ್ ನಂದೀಶಪ್ಪ ಅವರು ನಲುಮೆಯಿಂದ ಮಾತನಾಡಿದರು. ಗ್ರಂಥದ ಗುಡಿಯ ಗ್ರಂಥಪಾಲಕರ ಕುರಿತು ಹಾಗೂ ಕಾರ್ಯಕ್ರಮದ ಕುರಿತು ಆತ್ಮೀಯತೆಯಿಂದ ಶ್ರೀಮತಿ ಪುಷ್ಪಲತಾ ರಟ್ಟಿಹಳ್ಳಿ ಅವರು ಮಾತನಾಡಿದರು. ಹೂ ಕಟ್ಟಿದರೆ ಕವಿತೆಯಾಗುತ್ತದೆಯೇ ಎಂದು ಹೂ ಕಟ್ಟುವ ಸ್ಪರ್ಧೆಯ ಏರ್ಪಡಿಸಿ ಸಮಾನಾಂತರವಾಗಿ ಶ್ರೀಮತಿ ಜಯಶ್ರೀ ಅವರ ತಂಡದಿಂದ ಕೀರ್ತನೆಗಳನ್ನು ಹಾಡಿಸಲಾಯಿತು.ಕವಯಿತ್ರಿಯಾದ ತಮ್ಮ ವಿದ್ಯಾರ್ಥಿನಿಯ ಕುರಿತು ಶ್ರೀಮತಿ ಯಶೋದಾ ಹರಿಕುಮಾರ್ ಅವರು ಮೆಚ್ಚುಗೆಯ ಮಾತನಾಡಿದರು. ಕಾರ್ಯಕ್ರಮವನ್ನ ಉದ್ದೇಶಿಸಿ ಶ್ರಿ ರಾಜಗೋಪಾಲ್ ಅವರು ಮಾತನಾಡಿದರು. ತಾವು ಕವಯಿತ್ರಿಯಾದ ಬಗೆ, ಕರ್ತವ್ಯ ಪ್ರತಿಷ್ಠಾನ ಪರಿಚಯವಾದ ಬಗೆ, ಮತ್ತು ಹೂ ಕಟ್ಟಿದರೆ ಹೇಗೆ ಕವಿತೆಯಾಯಿತು ಎಂದು ತಮ್ಮ ಮಾತುಗಳನ್ನು ಹಂಚಿಕೊಂಡರು. ಶ್ರೀಮತಿ ರೇಣುಕಾ, ಶ್ರೀ ವಿಜಯಕುಮಾರ್ ಎಸ್, ಶ್ರೀ ಭುವಿ, ಶ್ರೀ ಲಿಖಿತ ಅವರ ಸರಕಾರದಿಂದ ಎಲ್ಲಾ ಗಣ್ಯರಿಗೆ ಸನ್ಮಾನವನ್ನು ಮಾಡಲಾಯಿತು.ಶ್ರೀಮತಿ ರಜನಿ ಅವರ ಕೃಷ್ಣ ನಾಮಸ್ಮರಣೆಯಿಂದ ಕಾರ್ಯಕ್ರಮವು ಆರಂಭವಾಗಿ, ಏಸಿಪಿ ಶ್ರೀ ರಾಜೇಶ್ ಎಲ್ ವೈ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮಾನ್ಯ ಉಪನಿರ್ದೇಶಕರಾದ ಶ್ರೀಮತಿ ಪುಷ್ಪಲತಾ ರಟ್ಟಿಹಳ್ಳಿ, ಅಡ್ವೋಕೇಟ್ ಜಯಶ್ರೀ ರಟ್ಟಿಹಳ್ಳಿ, ಶ್ರೀ ಕೃಷ್ಣ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಯಶೋದಾ ಹರಿಕುಮಾರ್, ಕರ್ತವ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸಂತೋಷ್, ಬೆಂಗಳೂರು ಹುಡುಗ ವಿನೋದ್ ಕರ್ತವ್ಯ, ಗ್ರಂಥಪಾಲಕರಾದ ಶ್ರಿ ಆನಂದ್, ಕರ್ನಾಟಕ ಜಲಮಂಡಳಿಯ ಕಾನೂನು ಶಾಖೆಯ ಉಸ್ತುವಾರಿಗಳಾದ ಶ್ರಿ ರಾಜಗೋಪಾಲ್ ರವರುಗಳ ನೇತೃತ್ವದಲ್ಲಿ ಪುಸ್ತಕವು ಲೋಕಾರ್ಪಣೆಗೊಂಡಿತು.ಅಂತಿಮವಾಗಿ ಶ್ರೀ ರಖೀಬ್ ಅವರು ಆಗಮಿಸಿದ್ದ ಎಲ್ಲಾ ಗಣ್ಯರಿಗೆ, ಸಾಹಿತ್ಯಾಸಕ್ತರಿಗೆ, ಪ್ರೀತಿ ಪಾತ್ರರಿಗೆ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.