LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ದ ಪ್ಯಾರಡೈಸ್ ಅಕಾಡೆಮಿಯಲ್ಲಿ ಕನ್ನಡ ರಾಜ್ಯೋತ್ಸವ


ಬೆಂಗಳೂರು: ಎಲೆಕ್ಟಾçನಿಕ್ ಸಿಟಿ ಬಸಾಪುರದಲ್ಲಿರುವ ‘ದ ಪ್ಯಾರಡೈಸ್ ಅಕಾಡೆಮಿ’ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ನವಂಬರ್ 21ರಂದು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮೀದೇವಿ ಮೇಡಂ ರವರು ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಶಾಲೆಯ ಸಂಸ್ಥಾಪಕರಾದ ಡಾII ಟಿ. ಮಂಜುನಾಥ ಸರ್ ರವರು ಆಗಮಿಸಿದ್ದರು. ಹಾಗೆಯೇ ಶಾಲೆಯ ಶೈಕ್ಷಣಿಕ ನಿರ್ದೇಶಕರಾದ ಶ್ರೀಮತಿ ಸುಪ್ರಿಯ ಮೇಡಂ ರವರು ಮತ್ತು ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಾಯಿಕೃಷ್ಣ ಸರ್ ಹಾಗೂ ಪ್ರಾಂಶುಪಾಲರಾದ ರಾಜಕುಮಾರ ಸಿಗ್ನ ಸರ್ ರವರು ಕೂಡ ಉಪಸ್ಥಿತರಿದ್ದರು. ಶಾಲೆಯ ಆವರಣ ಹಳದಿ ಮತ್ತು ಕೆಂಪು ಬಣ್ಣಗಳಿಂದ ಕಂಗೊಳಿಸುತ್ತಿತ್ತು. ಕನ್ನಡ ಬಾವುಟ ರಾರಾಜಿಸುತ್ತಿತ್ತು.ಶಾಲೆಯ ಮಕ್ಕಳು ಹಾಡು, ನೃತ್ಯ, ನಾಟಕ ಹೀಗೆ ಸಾಂಸ್ಕöÈತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ಇತಿಹಾಸವನ್ನು ಹೇಳುತ್ತಾ, ಕನ್ನಡತನವನ್ನು ಸಾರುತ್ತಾ ನೆರೆದಿದ್ದ ಎಲ್ಲರನ್ನು ರಂಜಿಸಿದರು. ಶಾಲಾ ಮಕ್ಕಳು ಪ್ರದರ್ಶಿಸಿದ ಡೊಳ್ಳುಕುಣಿತ, ಕಂಸಾಳೆ, ಯಕ್ಷಗಾನ, ಹುಲಿವೇಷ, ಕೋಲಾಟ ಜಾನಪದ ನೃತ್ಯಗಳು ಎಲ್ಲರನ್ನೂ ಆಕರ್ಷಿಸಿ ಗಣ್ಯರಿಂದ ಪ್ರಶಂಸೆಗೊಳಗಾದವು. ವಿದ್ಯಾರ್ಥಿಗಳಲ್ಲಿದ್ದ ಶಿಸ್ತು-ಸಂಯಮ ಕಾರ್ಯಕ್ರಮಕ್ಕೆ ಶೋಭೆ ತರುತ್ತಿತ್ತು. ಈ ಕಾರ್ಯಕ್ರಮದಲ್ಲಿ ‘ನಾಡಗೀತೆ ಬರೆಯುವ ಹಾಗೂ ಹಾಡುವ ಸ್ಪರ್ಧೆ’ಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಬಂದAತಹ ಹಾಗೂ ಶಾಲೆಯ ಸಂಸ್ಥಾಪಕರಾದ ಡಾ. ಟಿ. ಮಂಜುನಾಥ ಸರ್ ಹಾಗೂ ಶ್ರೀಮತಿ ಲಕ್ಷ್ಮೀದೇವಿ ಮೇಡಂ ರವರಿಗೆ ಕನ್ನಡ ಶಿಕ್ಷಕರ ವತಿಯಿಂದ ಸನ್ಮಾನ ಮಾಡಲಾಯಿತು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಡಾ.ಟಿ.ಮಂಜುನಾಥ ಸರ್ ರವರು  “ಹೊರ ರಾಜ್ಯಗಳಿಂದ ಬಂದಂತಹ ಯಾರೇ ಆಗಲಿ ಕರ್ನಾಟಕದಲ್ಲಿ ನೆಲೆಸಿದ್ದರೆ ಅವರು ಖಂಡಿತವಾಗಿಯೂ ಮೊದಲು ಕನ್ನಡಭಾಷೆಯನ್ನ ಕಲಿಯಲೇಬೇಕು.ಕನಾರ್ಟಕದಲ್ಲಿ ಸಿಗುವ ಸಮಾಧಾನ ಬೇರೆ ಎಲ್ಲೂ ಸಿಗುವುದಿಲ್ಲ, ಕನ್ನಡ ಕಲಿತು ಅದಕ್ಕೆ ಗೌರವ ಕೊಡುವುದು ಅವರ ಕರ್ತವ್ಯ” ಎಂದು ಹೇಳಿ  ಇಂದಿನ ಮಕ್ಕಳಲ್ಲಿ ಕನ್ನಡ ಭಾಷೆಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಅದ್ದೂರಿಯಾಗಿ ಮೂಡಿ ಬಂದಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST