ಆತಂಕ ಇದ್ದೇ ಇತ್ತು. ವೃತ್ತಿ ಬದುಕು ಪೂರ್ತಿ ಇದೇ ಆತಂಕ. ಸಂಜೆ ಆಫೀಸು ಬಿಟ್ಟರೆ ಸಾಕು. ನಾಳೆ ಜಾಬ್ ಇರುತ್ತಾ..? ಎನ್ನುವ ಆತಂಕ. ಇದೇ ಆತಂಕದಲ್ಲೇ ಬೆಂಗಳೂರಿನಂಥಾ ಕಾಂಕ್ರೀಟ್ ಕಾಡಿನಲ್ಲಿ 40 ವರ್ಷಗಳನ್ನೇ ಕಳೆದುಬಿಟ್ಟೆ. ಮೊಟ್ಟ ಮೊದಲ ಎಂಟ್ರಿ ಚಿತ್ರದೀಪ ಮುಳುಗಿತು. ಚಿತ್ರತಾರಾ ಆರಂಭಿಸಿದೆವು. ಅದೂ ಮುಳುಗಿತು. ಅರಗಿಣಿ ಪ್ರಯಾಣ ಸುಖದಾಯಕವಾಗಿರಲಿಲ್ಲ. ಅಲ್ಲೊಂದು ಎಡವಟ್ಟು. ಸಂಯುಕ್ತ ಕರ್ನಾಟಕಕ್ಕೆ ಹೋದೆ. ಅಲ್ಲಿಂದ ವಿಜಯ ಕರ್ನಾಟಕ. ನನ್ನ ನಿಜ ವೃತ್ತಿ ಬದುಕು ಆರಂಭ ಅಲ್ಲಿಯೇ ಅಂತ್ಯ ಕಂಡದ್ದೂ ಅಲ್ಲೇ.. ಹೀಗೆ ಶುಭಂ ಕೃತಿಯಲ್ಲಿ ಬರೆಯುತ್ತಾರೆ ಪತ್ರಕರ್ತರು ಗಣೇಶ್ ಕಾಸರಗೋಡು. ಇವರು ಈ ಹಿಂದೆ ಹಾಸನಕ್ಕೆ ಬಂದಿದ್ದಾಗ ಪರಿಚಿತರಾಗಿ ಶುಭಂ ಕೃತಿ ಕೊಟ್ಟಿದ್ದರು. ಓದಿ ಒಂದಿಷ್ಟು ಬರೆದಿದ್ದೆ. ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧುನಾಯ್ಕ ಲಂಬಾಣಿ. ಬೆಂಗಳೂರಿನಲ್ಲಿ ಸಂಘವು ಬೆಂಗಳೂರು ನಗರ, ಗ್ರಾಮಾಂತರ ಮತ್ತು ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲಾ ಘಟಕಗಳ ಸಹಯೋಗದಲ್ಲಿ ರಾಜ್ಯಮಟ್ಟದ ಕರ್ನಾಟಕ ವೈಭವ ಕಾರ್ಯಕ್ರಮ ಏರ್ಪಡಿಸುತ್ತಿದೆ. ಪ್ರತಿಭ್ವಾನಿತ ಗಾಯಕರು, ಪ್ರಗತಿಪರ ರೈತರು, ಸಾಹಿತಿ ಕಲಾವಿದರನ್ನು ಸನ್ಮಾನಿಸಲಾಗುತ್ತಿದೆ. ಸಿನಿಮಾ ರಂಗಭೂಮಿ ಕ್ಷೇತ್ರದಿಂದ ತಲಾ 10 ಮಂದಿ ಹೆಸರು ತಿಳಿಸಲು ನನಗೆ ಕೋರಿದಾಗ ಗಣೇಶ್ ಕಾಸರಗೋಡು ನೆನಪಾದÀರು. ಅವರ ಶುಭಂ ಕೃತಿ ಕನ್ನಡ ಸಿನಿಮಾ ಲೋಕದ ಒಳನೋಟಗಳನ್ನು ತೆರೆದಿಟ್ಟಿದೆ. ಅದರಲ್ಲಿ ಅವರು ಒಂದು ಪಾತ್ರವಾಗಿಯೇ ನಿರೂಪಿಸಿದ್ದಾರೆ. ಸಾರ್, ತಮ್ಮ ಒಂದು ಕಿರು ಪರಿಚಯ ಕಳಿಸಿ ಎಂದು ಮೆಸೇಜ್ ಹಾಕಿದೆ. ಕಳಿಸಿದರು. ನಮ್ಮ ತಂದೆ ಡಿ. ಸುಬ್ರಾಯ ಆಚಾರ್ಯ , ತಾಯಿ ಶಾಂಭವಿ ಯು.ನನಗೀಗ ವಯಸ್ಸು 65. ಓದು : ಎಂ. ಎ. (ಕನ್ನಡ ಭಾಷೆ ಮತ್ತು ಸಾಹಿತ್ಯ) ಪತ್ರಿಕೋದ್ಯಮ ಸೇವೆ: ವಿಜಯ ಕರ್ನಾಟಕ -6 ವರ್ಷ, ಸಂಯುಕ್ತ ಕರ್ನಾಟಕ -10 , ಕರ್ಮವೀರ -3 ವರ್ಷ, ಅಭಿಮಾನಿ - 4 ಚಿತ್ರತಾರಾ -2 ಚಿತ್ರದೀಪ -2 ವರ್ಷ , ಹಾಯ್ ಬೆಂಗಳೂರ್, ಮಂಗಳ, ಆಂದೋಲನ, ಅರಗಿಣಿ, ಟೈಮ್ಸ್ ಆಫ್ ಕರ್ನಾಟಕ, ರಾಯಚೂರು ವಾಣಿ. ಸುದ್ದಿ ಟಿ.ವಿ.-2 ವರ್ಷ.
ಪ್ರಕಟಿತ ಪುಸ್ತಕಗಳು ಚದುರಿದ ಚಿತ್ರಗಳು, ಮೌನ ಮಾತಾದಾಗ, ನೂರು ಚಿತ್ರಗಳು ನೂರಾರು ನೆನಪುಗಳು, ಆಫ್ ದಿ ರೆಕಾರ್ಡ್ , ಗುರಿ ಹೆಗ್ಗುರಿ, ಚಿಗುರಿದ ಕನಸುಗಳು . ಪ್ರೀಮಿಯರ್ ಬಸವರಾಜಯ್ಯ. ಅಭಿಮಾನದ ಬಾಲಣ್ಣ , ಕನ್ನಡ ಕಣ್ಮಣಿಗಳು, ಹೇಗಿದ್ದ ಹೇಗಾದ ಗೊತ್ತಾ?, ಹುಲಿಕಲ್ ನಟರಾಜ್ , ಅಂತರಂಗ ಬಹಿರಂಗ ದರ್ಶನ , ಕ್ರೇಜಿ ಸ್ಟಾರ್ ರವಿಚಂದ್ರನ್ , ಬದುಕು ಮುಗಿಸುವ ಮುನ್ನ, ಶುಭಂ , ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್ , ಬೆಳ್ಳಿತೆರೆಯ ಬಂಗಾರದ ಗೆರೆ , ಪ್ರೀತಿಯಿಂದ ರಮೇಶ್, ಫೇಸ್ 2 ಫೇಸ್, ನೆನಪುಗಳ ಮೆರವಣಿಗೆ , ಏS ಅಶ್ವತ್ಥ್ ಒಂದು ನೆನಪು, ಮಿನುಗುತಾರೆ. ನೆನಪುಗಳ ಮೆರವಣಿಗೆ , ವ್ಯಾಪ್ತಿ ಪ್ರದೇಶದಿಂದ ಹೊರಗೆ, ವ್ಯಾಪ್ತಿ ಪ್ರಾಪ್ತಿ.. 45 ವರ್ಷಗಳಿಂದ ಸಿನಿಮಾ ಪತ್ರಕರ್ತನಾಗಿ ಸೇವೆ ಸಲ್ಲಿಸಿ ಈ ವರೆಗೆ 35 ಪುಸ್ತಕಗಳನ್ನು ಬರೆದಿದ್ದೇನೆ. ಎಲ್ಲವೂ ಸಿನಿಮಾಕ್ಕೆ ಸಂಬಂಧಿಸಿದ ಪುಸ್ತಕಗಳು. ನನ್ನ 25ನೇ ಪುಸ್ತಕದ ಹೆಸರು ಶುಭಂ - ಹಳೆಯ ಸಿನಿಮಾದ ಕೊನೆಯ ಫ್ರೇಮು. ಒಟ್ಟು ಪುಟಗಳ ಸಂಖ್ಯೆ 900. ಅಷ್ಟೂ ಪುಟಗಳನ್ನು ನಾನೇ ಕೈಯಾರೆ ಮೊಬೈಲಿನಲ್ಲೇ ಕಂಪೋಸ್ ಮಾಡಿದ್ದೇನೆ. ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾಲಯಕ್ಕೆ ಸೇರಿರುವ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಓದಿದ್ದು ಒ.ಂ., 3ನೇ ರಾಂಕ್. 1ನೇ ಕ್ಲಾಸಿನಿಂದ ಒ.ಂ. ತನಕ ನಾನು ಓದಿದ್ದು ಸರ್ಕಾರಿ ಶಾಲೆ ಕಾಲೇಜಿನಲ್ಲಿ. 1ನೇ ಕ್ಲಾಸಿನಿಂದ ಒ.ಂ. ತನಕದ ಓದಿಗಾಗಿ ನಾನು ಒಂದೇ ಒಂದು ನಯಾ ಪೈಸೆಯ ಫೀಸ್ ಕಟ್ಟಲಿಲ್ಲ. ನಾನು ಬರೆದ ಅಂಕಣಗಳು : ಚದುರಿದ ಚಿತ್ರಗಳು, ವ್ಯಾಪ್ತಿ ಪ್ರದೇಶದಿಂದ ಹೊರಗೆ, ಸೈಡ್ ವಿಂಗ್/ ತೆರೆಯ ಮರೆಯಲ್ಲಿ/ ಮೌನ ಮಾತಾದಾಗ/ ಬೆಳ್ಳಿತೆರೆ/ ಮಾಯಾಬಜಾರ್/ ಮಾನಸ ಸರೋವರ/ ಮಾತುಕತೆ/ ಹೇಗಿದ್ದ ಹೇಗಾದ ಗೊತ್ತಾ/ ಕುಶಲವೇ ಕ್ಷೇಮವೇ/ ಬಣ್ಣ ಮಾಸಿದ ಬದುಕು/ ಪರದೆ/ ಪರದೆಯ ಹಿಂದೆ ಮುಂದೆ..ನನಗೆ ಸಿಕ್ಕ ಪ್ರಶಸ್ತಿಗಳು: ರಾಜ್ಯ ಚಲನ ಚಿತ್ರ ಸಾಹಿತ್ಯ ಪ್ರಶಸ್ತಿ/ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ/ ಬೆಂಗಳೂರುನಗರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ/ ಇಂಡಿವುಡ್ ಮೀಡಿಯಾ ಎಕ್ಸೆಲೆನ್ಸ್ ಪ್ರಶಸ್ತಿ, ಮದರ್ ಥೆರೇಸಾ ನ್ಯಾಶನಲ್ ಅವಾರ್ಡ್, ಮಂತ್ರಾಲಯ ವಿಜಯ ವಿಠಲ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ, ವಿಶ್ವದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಖಿಓIಖಿ ಮೀಡಿಯಾ ಪ್ರಶಸಿ, ಹುಟ್ಟೂರ ಸನ್ಮಾನ ಪ್ರಶಸ್ತಿ,ಙಓಏ ಮೀಡಿಯಾ ಪ್ರಶಸ್ತಿ, ಮೆಟ್ರೋ ಟು ಡೇ ಮೀಡಿಯಾ ಅಚೀವ್ಮೆಂಟ್ ಅವಾರ್ಡ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಅವಾರ್ಡ್,ದಾವಣಗೆರೆ ಜಿಲ್ಲಾ ಸಮಾಚಾರ ಪತ್ರಿಕಾ ಅವಾರ್ಡ್, ವಿಶ್ವಕರ್ಮ ಸಮಾಜ ವೇದಿಕೆ ಪ್ರಶಸ್ತಿ, ಮಂಜೇಶ್ವರ ಗಡಿನಾಡ ಪುರಸ್ಕಾರ ಪ್ರಶಸ್ತಿ.
ದರ್ಶನ್ ನಟನೆಯ ಪೊರ್ಕಿ ಚಿತ್ರದ ಸಂಪೂರ್ಣ ಜವಾಬ್ದಾರಿ ನನ್ನದೇ ಆಗಿತ್ತು. ಗಂಗಾಕಾವೇರಿ ಸಿನಿಮಾದಲ್ಲಿ ನಟನೆ, ನನಗೆ ಇಬ್ಬರು ಗಂಡು ಮಕ್ಕಳು, ಅಭಿಷೇಕ್, ಅಲೋಕ್. ಇಬ್ಬರಿಗೂ ಮದುವೆಯಾಗಿದೆ. ಅಭಿಷೇಕ್ ಕನ್ನಡ ಚಿತ್ರರಂಗದಲ್ಲಿ ಕ್ಯಾಮರಾಮನ್. ಇವನ ಪತ್ನಿ ಗೌತಮಿ ಜಾದವ್-ಜೀ ಟಿವಿಯ ಸತ್ಯ ಧಾರಾವಾಹಿಯಲ್ಲಿ ನಾಯಕಿಯಾಗಿ ನಟನೆ, ಬಿಗ್ ಬಾಸ್’ನಲ್ಲಿ ಅವಕಾಶ.ಸಿಕ್ಕಿತ್ತು. ವಿಜಯಕರ್ನಾಟಕ’ ಪತ್ರಿಕೆಯಲ್ಲಿದ್ದಾಗ ನಾನು ಬರೆದ ಚದುರಿದ ಚಿತ್ರಗಳು ಅಂಕಣ ಸಾಕಷ್ಟು ಮಂದಿ ಅಸಹಾಯಕ ಕಲಾವಿದರಿಗೆ ಬದುಕು ನೀಡಿದೆ. ಇವರಲ್ಲಿ ಹಿರಿಯ ನಟ ಕೆ.ಎಸ್. ಅಶ್ವಥ್. ನನ್ನ ಲೇಖನವನ್ನೇ ಅರ್ಜಿ ಎಂದು ಪರಿಗಣಿಸಿ ಆಗಿನ ಸಚಿವೆ ರಾಣಿ ಸತೀಶ್ ಅವರು ಅಶ್ವಥ್ ಅವರಿಗೆ ಸಿಗಬೇಕಾದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನೀಡಿದ್ದಾರೆ.
-ಗೊರೂರು ಅನಂತರಾಜು, ಹಾಸನ.