ಮುಳಬಾಗಿಲು: ವಿಶ್ವಕರ್ಮ ದೇವರು ಹಿಂದೂ ಧರ್ಮದಲ್ಲಿ ಸೃಷ್ಟಿ ಮತ್ತು ಬ್ರಹ್ಮಾಂಡ ದೈಹಿಕ ವಾಸು ಶಿಲ್ವ ಹಾಗೂ ಕುಶಲ ಕರ್ಮಿಗಳ ಪ್ರಧಾನ ದೇವರಾಗಿದ್ದಾರೆ ವಿಶ್ವಕರ್ಮರು ಬ್ರಹ್ಮಾಂಡದ ಸೃಷ್ಟಿಕರ್ತರಾಗಿದ್ದಾರೆ ಎಂದು ಶಾಸಕ ಸಮೃದ್ಧಿ ವಿ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಕಾಂತರಾಜ ಸರ್ಕಲ್ ಬಳಿ ಗ್ರಾಮಾಂತರ ವಿಶ್ವಕರ್ಮ ಜನಾಂಗದ ಅಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ವಿಶ್ವಕರ್ಮ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಉನ್ನತ ಸ್ಥಾನ ಮಾನ ಅಲಂಕರಿಸಲು ಸಹಕಾರ ನೀಡಬೇಕು. ಈಗ ವಿಧಾನಪರಿಷತ್ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀತಿ ಸಹಿ ಸಮ್ಮತಿ ಜಾರಿಯಲ್ಲಿದೆ ಆದ ಕಾರಣ ಚುನಾವಣೆ ಮುಗಿದ ನಂತರ ಸಮುದಾಯದ ಅಭಿವೃದ್ಧಿಗೆ ಏನು ಸಹಕಾರ ನೀಡುತ್ತೇನೆ ಎಂಬುದನ್ನು ತಿಳಿಸುತ್ತೇನೆ. ವಿಶ್ವಕರ್ಮ ಸಮುದಾಯ ಸಣ್ಣದಾಗಿದ್ದರು ಸಹ ವಿಶ್ವಕರ್ಮ ಜಯನ ಅರ್ಥಪೂರ್ಣವಾಗಿ ಮಾಡುವ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರದರ್ಶನ ಮಾಡಿದ್ದೀರಿ ಎಂದರು.
ಮಾಜಿ ಸಚಿವ ಎಚ್ ನಾಗೇಶ್ ಮಾತನಾಡಿ. ಸಂವಿಧಾನದಲ್ಲಿ ಎಲ್ಲಾ ಜಾತಿಯ ವರ್ಗದವರಿಗೂ ಸಮಾನತೆ ಕಲ್ಪಿಸಲಾಗಿದೆ. ವಿಶ್ವಕರ್ಮ ಸಮುದಾಯ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು ಈ ಸಮುದಾಯದಲ್ಲಿ ಕೂಡ ಉನ್ನತ ಉದ್ಯೋಗಗಳನ್ನು ಅಲಂಕರಿಸಿದ್ದಾರೆ ವಿಶ್ವಕರ್ಮ ಸಮುದಾಯದವರು ಕಷ್ಟಜೀವಿಗಳು ಹಾಗೂ ಸೌಮ್ಯ ಮನೋಭಾವನೆಯನ್ನು ಹೊಂದಿರುವವರು ಯಾವುದೇ ಜಾತಿಯವರು ಕೂಡ ಉತ್ತಮ ಶಿಕ್ಷಣ ಪಡೆದು ನಾನಾ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿದೆ ವಿಶ್ವಕರುಮ ಸಮುದಾಯ ಸಮೃದ್ಧಿಯನ್ನು ಯೋಚಿತವಾಗಿ ಮಾಡುವ ಮೂಲಕ ಸಾರ್ವಜನಿಕ ಒಳ್ಳೆಯ ವಲಯದಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ.ವಿಶ್ವಕರ್ಮನು ವಿಶ್ವದ ಮೊದಲ ವಾಶಿ ಶಿಲ್ಪ ಹಾಗೂ ಪುರಾಣಗಳ ಪ್ರಕಾರ ವಿಶ್ವಕರ್ಮನಿಗೆ ಮನು. ಮಾಯ.ತ್ಪಷ್ಟ. ಶಿಲ್ಪ ಮತ್ತು ದೈವಜ್ಞ ಎಂಬ ಐವರು ಪುತ್ರರಿದ್ದರು. ಶಿವನ ತ್ರಿಶೂಲ. ವಿಷ್ಣುವಿನ ಸುದರ್ಶನ ಚಕ್ರ. ಕರ್ಣನ ಕುಂಡಲಿಗಳು. ಸೇರಿದಂತೆ ಇಂದ್ರಪುರಿ. ದ್ವಾರಕಾ ಹಸ್ತಿನಾಪುರ. ಸ್ವರ್ಗ ಹಾಗೂ ಲಂಕೆ ಅಂತ ಅರಮನೆಗಳ ನಿರ್ಮಾಣದಲ್ಲಿ ವಿಶ್ವಕರ್ಮನ ಪಾತ್ರವಿದೆ ಎಂದು ತಿಳಿಸಿದರು. ಕರ್ನಾಟಕ ರಾಜ್ಯ ವಿಶ್ವಕರ್ಮ ನಿಗಮ ಮಂಡಳಿ ಅಧ್ಯಕ್ಷ ಸರ್ವಜ್ಞಮೂರ್ತಿ ಮಾತನಾಡಿ. ತಂತ್ರಜ್ಞಾನ ಮತ್ತು ಡಿಜಿಟಲ್ ಕರಣ ವೇಗವಾಗಿ ಅಭಿವೃದ್ಧಿ ಆಗುತ್ತಿದೆ ಆದರೆ ನಮ್ಮ ಪುರಾಣಗಳಲ್ಲಿ ಪ್ರಾಚೀನ ತಂತ್ರಜ್ಞಾನ ಹಾಗೂ ಶಿಲ್ಪಕಲೆ ಕುರಿತು ಸಾಕಷ್ಟು ಜ್ಞಾನವಿದೆ. ಶಂಕರಾಚಾರ್ಯರು ಮತ್ತು ಡಕ್ನಾಚಾರ್ಯ ಅಂತ ಮಹನೀಯರು ತಾಂತ್ರಿಕ ಜ್ಞಾನವನ್ನು ಪರಿಚಯಿಸಿದ ಪರಂಪರೆಯನ್ನು ನಾವು ಸ್ಮರಿಸಬೇಕು ಎಂದರು. ನಮ್ಮ ಸಮುದಾಯದವರು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸಮರಾಗುವ ಮೂಲಕ ಸಾಮಾಜಿಕವಾಗಿ ಗುರುತಿಸಿ ಕೊಳ್ಳಬೇಕು ಎಂದರು. ಅವನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಆದಿ ನಾರಾಯಣ ಮಾತನಾಡಿ.ತಾಲ್ಲೂಕಿನಲ್ಲಿ ವಿಶ್ವಕರ್ಮ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿರುವುದು ಸಂತೋಷ ವಿಷಯವಾಗಿದೆ ಎಂದರು.ನಿವೃತ್ತ ಐಎಎಸ್ ಅಧಿಕಾರಿ ಪಿಎಂ ಶ್ರೀನಿವಾಸಚಾರಿ. ವಿಶ್ವಕರ್ಮ ರಾಜ್ಯಾಧ್ಯಕ್ಷ ಎಂಪಿ ಈಶ್ವರ ಚಾರಿ. ಡಿಸಿಸಿ ಬ್ಯಾಂಕ್ ನಿರ್ದೇಶಕ ನಲ್ಲೂರು ರಘುಪತಿ ರೆಡ್ಡಿ. ಟಿ ಎ ಪಿ ಸಿ ಎಂ ಎಸ್ ನಿರ್ದೇಶಕ ಎಂಸಿ ಸರ್ವಜ್ಞ ಗೌಡ. ಸಮಾಜ ಸೇವಕರಾದ ಗೊಲ್ಲಹಳ್ಳಿ ಪ್ರಭಾಕರ್. ಜಿ ವಡ್ಡಳ್ಳಿ ವೇಣುಗೋಪಾಲ್. ಸೋಮಶೇಖರ್. ರಾಮಕೃಷ್ಣಪ್ಪ. ಗ್ರಾಮಾಂತರ ವಿಶ್ವಕರ್ಮ ಜನಾಂಗದ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಶಂಕರಾಚಾರ್ಯ. ಗೌರವಾಧ್ಯಕ್ಷ ಎಂಎಸ್ ಮುರಳಿ. ಪ್ರಧಾನ ಕಾರ್ಯದರ್ಶಿ ಪಿಆರ್ ವಿಶ್ವನಾಥಾಚಾರಿ. ಖಜಾಂಚಿ ಎಸ್ ಶ್ರೀನಿವಾಸಚಾರಿ. ಉಪಾಧ್ಯಕ್ಷರಾದ ಆರ್ ಶ್ರೀನಿವಾಸಚಾರಿ. ಆರ್ ವಿಶ್ವನಾಥ್ ಚಾರಿ. ತಾಲ್ಲೂಕು ಗೋಲ್ಡ್ ಸ್ಮಿತ್ ಅಸೋಸಿಯನ್ ಪ್ರಧಾನ ಕಾರ್ಯದರ್ಶಿ ಬಜರಂಗಿ ಚಲಪತಿ. ಮಹಿಳಾ ವಿಭಾಗದ ಗೌರವಾಧ್ಯಕ್ಷ ಡಾ. ಗೀತಾ. ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್. ಸಾಂಸ್ಕöÈತಿಕ ಕಾರ್ಯದರ್ಶಿ ಸುವರ್ಣ. ಕಾನೂನು
ಸಲಹೆಗಾರ ಎಲ್ ನಾರಾಯಣ ಚಾರಿ iದ್ದರು.